ನವದೆಹಲಿ: ಕಳೆದ ಕೆಲವು ದಿನಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಗ್ರಾಹಕರಿಗೆ ನಿರಂತರವಾಗಿ SMS ಕಳುಹಿಸುತ್ತಿದೆ. ಒಂದು ವೇಳೆ ನೀವೂ ಎಸ್ಬಿಐ ಖಾತೆದಾರರಾಗಿದ್ದರೆ, ನೀವು ಈ ಮೆಸೇಜ್ ಅನ್ನು ನಿರ್ಲಕ್ಷಿಸಿದರೆ ನೀವು ತೊಂದರೆಗೊಳಗಾಗಬಹುದು. ವಾಸ್ತವವಾಗಿ ಎಸ್ಬಿಐ ಕಳೆದ ಕೆಲವು ದಿನಗಳಿಂದ ಖಾತೆದಾರರಿಗೆ ಅವರ ಕೆವೈಸಿ(Know Your Customer) ಅನ್ನು ಪೂರ್ಣಗೊಳಿಸಲು ಸಂದೇಶವನ್ನು ಕಳುಹಿಸುತ್ತಿದೆ.
ಮೆಸೇಜ್ ನಲ್ಲಿ ಈ ರೀತಿ ಬರೆಯಲಾಗಿದೆ:
ಬ್ಯಾಂಕಿನಿಂದ ಕಳುಹಿಸಲಾಗಿರುವ ಸಂದೇಶದಲ್ಲಿ "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ನಿಮ್ಮ ಖಾತೆಯಲ್ಲಿರುವ KYC ದಾಖಲೆಗಳನ್ನು ನವೀಕರಿಸಬೇಕು. ದಯವಿಟ್ಟು ಇತ್ತೀಚಿನ KYC ದಾಖಲೆಗಳು ಮತ್ತು ಸಂಪರ್ಕದೊಂದಿಗೆ ನಿಮ್ಮ ಎಸ್ಬಿಐ ಶಾಖೆ ಸಂಪರ್ಕಿಸಿ. KYC ನ ಅಪ್ಡೇಟ್ ಮಾಡದಿರುವ ಸಂದರ್ಭದಲ್ಲಿ, ನಿಮ್ಮ ಖಾತೆಯಲ್ಲಿನ ಭವಿಷ್ಯದ ವಹಿವಾಟುಗಳನ್ನು ನಿಷೇಧಿಸಬಹುದು" ಎಂದು ಹೇಳಲಾಗಿದೆ. ಈ ಸಂದೇಶವನ್ನು ಬ್ಯಾಂಕಿನಿಂದ KYC ಪೂರ್ಣವಾಗಿಲ್ಲದ ಗ್ರಾಹಕರಿಗೆ ಕಳುಹಿಸಲಾಗಿದೆ.
ಗಮನಾರ್ಹವಾಗಿ, ಎಲ್ಲಾ ಖಾತೆದಾರರು KYC ಯನ್ನು ಪೂರ್ಣಗೊಳಿಸುವಂತೆ RBI ಸೂಚಿಸಿದೆ. KYC ಎಂದರೆ ಗ್ರಾಹಕರ ಸಂಪೂರ್ಣ ಮಾಹಿತಿ ಎಂದರ್ಥ. ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಸಂಬಂಧವನ್ನು KYC ಬಲಪಡಿಸುತ್ತದೆ. KYC ಇಲ್ಲದೆ ಹೂಡಿಕೆ ಮಾಡುವುದು ಸುಲಭವಲ್ಲ ಮತ್ತು ಬ್ಯಾಂಕ್ನಲ್ಲಿ ಖಾತೆಯನ್ನು ತೆರೆಯುವುದು ಸುಲಭವಲ್ಲ. ನೀವು ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಬೇಕಾದರೆ, ಬ್ಯಾಂಕ್ ಲಾಕರ್ ತೆಗೆದುಕೊಳ್ಳಲು ಅಥವಾ ಪಿಎಫ್ ಅನ್ನು ಹಿಂತೆಗೆದುಕೊಳ್ಳಲು, ನಿಮ್ಮ ಕೆವೈಸಿ ಅನ್ನು ನವೀಕರಿಸಬೇಕಾಗಿದೆ. ಬ್ಯಾಂಕ್ನಿಂದ ಪಡೆದ ಸಂದೇಶದ ನಂತರ ನಿಮ್ಮ KYC ಯನ್ನು ಪೂರ್ಣಗೊಳಿಸಲು ನೀವು ಬಯಸಿದರೆ, ಈ ಕೆಳಗಿನ ದಾಖಲೆಗಳು ಅವಶ್ಯಕವಾಗಿದೆ.
ದಾಖಲೆಗಳ ಪಟ್ಟಿ
- ಗುರುತಿನ ಕಾರ್ಡ್
- ಪಾಸ್ಪೋರ್ಟ್
- ವೋಟರ್ ID
- ಡ್ರೈವಿಂಗ್ ಲೈಸೆನ್ಸ್
- ಆಧಾರ್ ಕಾರ್ಡ್
- ಪಿಂಚಣಿ ಪಾವತಿ ಆದೇಶ