ಯುಗಾದಿಗೂ ಮೊದಲು ಗ್ರಾಹಕರಿಗೆ SBI ಕೊಡುಗೆ, FD ಬಡ್ಡಿದರದಲ್ಲಿ ಹೆಚ್ಚಳ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯುಗಾದಿಗಿಂತ ಮುಂಚೆಯೇ ದೊಡ್ಡ ಕೊಡುಗೆ ನೀಡಿದೆ. ಎಸ್ಬಿಐ ಸ್ಥಿರ ಠೇವಣಿ (FD) ದರದಲ್ಲಿ ಬದಲಾವಣೆಗಳನ್ನು ಮಾಡಿದೆ.

Last Updated : Feb 28, 2018, 12:33 PM IST
ಯುಗಾದಿಗೂ ಮೊದಲು ಗ್ರಾಹಕರಿಗೆ SBI ಕೊಡುಗೆ, FD ಬಡ್ಡಿದರದಲ್ಲಿ ಹೆಚ್ಚಳ title=

ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯುಗಾದಿಗಿಂತ ಮುಂಚೆಯೇ ಗ್ರಾಹಕರಿಗೆ ದೊಡ್ಡ ಕೊಡುಗೆ ನೀಡಿದೆ. ಎಸ್ಬಿಐ ಸ್ಥಿರ ಠೇವಣಿ (FD) ದರದಲ್ಲಿ ಬದಲಾವಣೆಗಳನ್ನು ಮಾಡಿದೆ. ಒಟ್ಟು ಒಂಬತ್ತು ಅವಧಿಗಳಲ್ಲಿ ಎಫ್ಡಿ ಬಡ್ಡಿಯ ದರದಲ್ಲಿ 10 ರಿಂದ 50 ಆಧಾರದ ಬಡ್ಡಿದರಗಳನ್ನು ಬ್ಯಾಂಕ್ ಹೆಚ್ಚಿಸಿದೆ. ಎಸ್ಬಿಐ ಈ ದರವನ್ನು 1 ಕೋಟಿಗಿಂತ ಕಡಿಮೆ ಇರುವ ನಿಕ್ಷೇಪಗಳಲ್ಲಿ ಹೆಚ್ಚಿಸಿದೆ. ಇಂದಿನ 28 ಫೆಬ್ರವರಿಯಿಂದ ಹೊಸ ಬಡ್ಡಿದರಗಳು ಜಾರಿಗೆ ಬಂದವು. ಜನವರಿ 30 ರಂದು, ಸ್ಟೇಟ್ ಬ್ಯಾಂಕ್ 1 ಕೋಟಿಗೂ ಹೆಚ್ಚು ಠೇವಣಿಗಳ ಮೇಲೆ 50 ರಿಂದ 140 ಆಧಾರದ ಬಡ್ಡಿದರಗಳನ್ನು ಹೆಚ್ಚಿಸಿದೆ.

ಎಷ್ಟು ಅವಧಿಗೆ ಎಷ್ಟು ಬಡ್ಡಿದರ ಹೆಚ್ಚಳ?

  • 7 ರಿಂದ 45 ದಿನಗಳಲ್ಲಿ FD ಬಡ್ಡಿ ದರವನ್ನು 5.25% ರಿಂದ 5.75% ಕ್ಕೆ ಹೆಚ್ಚಿಸಿದೆ.
  • 180 ರಿಂದ 210 ದಿನಗಳಲ್ಲಿ FD ಬಡ್ಡಿ ದರವನ್ನು 6.25% ರಿಂದ 6.35% ಕ್ಕೆ ಹೆಚ್ಚಿಸಿದೆ.
  • 211 ದಿನದಿಂದ ಒಂದು ವರ್ಷದ ಅವಧಿಯ FD ಬಡ್ಡಿ ದರವನ್ನು 6.25% ರಿಂದ 6.40% ಕ್ಕೆ ಹೆಚ್ಚಿಸಿದೆ.
  • ಒಂದು ವರ್ಷಕ್ಕಿಂತ ಹೆಚ್ಚು 455 ದಿನಕ್ಕಿಂತ ಕಡಿಮೆ ಅವಧಿಯ FD ಬಡ್ಡಿ ದರವನ್ನು 6.25% ರಿಂದ 6.40% ಕ್ಕೆ ಹೆಚ್ಚಿಸಿದೆ.
  • 456 ದಿನದಿಂದ ಎರಡು ವರ್ಷ ಅವಧಿಯ FD ಬಡ್ಡಿ ದರವನ್ನು 6.25% ರಿಂದ 6.40% ಕ್ಕೆ ಹೆಚ್ಚಿಸಿದೆ.
  • ಎರಡು ವರ್ಷಗಳಿಗಿಂತ ಹೆಚ್ಚು ಮತ್ತು ಮೂರು ವರ್ಷಕ್ಕಿಂತ ಕಡಿಮೆ ಅವಧಿಯ FD ಬಡ್ಡಿ ದರವನ್ನು 6% ರಿಂದ 6.50%ಕ್ಕೆ ಹೆಚ್ಚಿಸಿದೆ.
  • ಮೂರು ವರ್ಷಗಳಿಗಿಂತ ಹೆಚ್ಚು ಮತ್ತು ಐದು ವರ್ಷಕ್ಕಿಂತ ಕಡಿಮೆ ಅವಧಿಯ FD ಬಡ್ಡಿ ದರವನ್ನು 6% ರಿಂದ 6.50%ಕ್ಕೆ ಹೆಚ್ಚಿಸಿದೆ.
  • ಐದರಿಂದ ಹತ್ತು ವರ್ಷ ಅವಧಿಯ FD ಬಡ್ಡಿ ದರವನ್ನು 6% ರಿಂದ 6.50%ಕ್ಕೆ ಹೆಚ್ಚಿಸಿದೆ.

Trending News