ಶಶಿಕಲಾಗೆ 15 ದಿನಗಳ ಪೆರೋಲ್ ಮಂಜೂರು

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿ.ಕೆ. ಶಶಿಕಲಾ ಪತಿಯ ನಿಧನದ ಹಿನ್ನೆಲೆಯಲ್ಲಿ ಪೆರೋಲ್ ಮೇಲೆ ಚೆನ್ನೈಗೆ ತೆರಳಲಿದ್ದಾರೆ. 

Last Updated : Mar 20, 2018, 02:35 PM IST
ಶಶಿಕಲಾಗೆ 15 ದಿನಗಳ ಪೆರೋಲ್ ಮಂಜೂರು title=
Pic: ANI

ಬೆಂಗಳೂರು: ಪತಿ ನಟರಾಜನ್ ಮಾರುತಪ್ಪ ನಿಧನ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಲುವಾಗಿ ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾಗೆ 15 ದಿನಗಳ ಪೆರೋಲ್ ಮಂಜೂರಾಗಿದೆ. 

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿ.ಕೆ. ಶಶಿಕಲಾ ಪತಿಯ ನಿಧನದ ಹಿನ್ನೆಲೆಯಲ್ಲಿ ಪೆರೋಲ್ ಮೇಲೆ ಚೆನ್ನೈಗೆ ತೆರಳಲಿದ್ದಾರೆ. 

ಕಳೆದ ವರ್ಷ ಅಕ್ಟೋಬರ್ ನಲ್ಲಿ ಶಶಿಕಲಾ ಪತಿ ನಟರಾಜನ್ ಮಾರುತಪ್ಪ ಕಿಡ್ನಿ ಹಾಗೂ ಯಕೃತ್ ಕಸಿ ಚಿಕಿತ್ಸೆಗೆ ಒಳಪಟ್ಟಿದ್ದ ಸಂದರ್ಭದಲ್ಲಿ ಶಶಿಕಲಾ ಐದು ದಿನಗಳ ಪೆರೋಲ್ ಪಡೆದು ಹೊರಗೆ ಬಂದಿದ್ದರು.

Trending News