ಸೂರತ್: ಇದುವರೆಗೂ ಮಾಡುವೆ ಆಮಂತ್ರಣ ಪತ್ರಿಕೆಗಳಲ್ಲಿ, ಟಿ-ಶರ್ಟ್ ಗಳಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಕಾಣಬಹುದಾಗಿತ್ತು. ಆದರೀಗ ಮೋದಿ ಭಾವಚಿತ್ರ ಮಹಿಳೆಯರು ಉಡುವ ಸೀರೆಯ ಮೇಲೂ ಮುದ್ರಣವಾಗುತ್ತಿದೆ!
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಗುಜರಾತ್'ನಲ್ಲಿ ಮೋದಿ ಚಿತ್ರ ಮುದ್ರಿತವಾದ ಸೀರೆಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಸೂರತ್ ಮಾರುಕಟ್ಟೆಯಲ್ಲಿ ಈಗ 'ಮೋದಿ ಸೀರೆ'ಗಾಗಿ ಮಹಿಳೆಯರು ಮುಗಿಬೀಳುತ್ತಿದ್ದು ಹಾಕ್ ಕೇಕ್ ರೀತಿ ಮಾರಾಟವಾಗುತ್ತಿವೆ.
"ಈ ಸೀರೆ ಉತ್ತಮ ಗುಣಮಟ್ಟದ್ದಾಗಿದ್ದು, ಸೀರೆಗಳ ಮೇಲೆ ಮೋದಿ ಚಿತ್ರವನ್ನು ಡಿಜಿಟಲ್ ಪ್ರಿಂಟ್ ಮಾಡಲಾಗಿದೆ. ಮೋದಿ ಸೀರೆಯಲ್ಲಿ ಮ್ರರಿಂದ ನಾಲ್ಕು ವೆರೈಟಿಗಳಿದ್ದು, ಮಹಿಳೆಯರಿಗೆ ಇಷ್ಟವಾಗಲಿದೆ" ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.
ಪ್ರಧಾನಿ ಮೋದಿ ಬಗ್ಗೆ ಮಹಿಳೆಯರಲ್ಲಿನ ಕ್ರೇಜ್ ಗುರುತಿಸಿದ ಸೂರತ್ ಟೆಕ್ಸ್ ಟೈಲ್ ಮಾರುಕಟ್ಟೆದಾರರು ಮೋದಿ ಸೀರೆ ತಯಾರಿಸಲು ನಿರ್ಧರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ ಚಲಾಯಿಸುವಂತೆ ಈ ಮೂಲಕ ಪ್ರಚಾರ ಆರಂಭಿಸಿದ್ದಾರೆ ಎನ್ನಲಾಗಿದೆ.