ನವದೆಹಲಿ: ಇತ್ತೀಚೆಗಷ್ಟೇ ಈ ಕುರಿತು ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ, ಪೂರ್ಣಾವಧಿ ಅಧ್ಯಕ್ಷರ ನೇಮಕ ಆಯ್ಕೆಯಾಗುವವರೆಗೆ ಸೋನಿಯಾ ಗಾಂಧಿ ಪಕ್ಷದ ಆಂತರಿಕ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದಿತ್ತು. ಈ ನಡುವೆ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷದಿಂದ ಸಸ್ಪೆಂಡ್ ಮಾಡಲಾಗಿರುವ ಸಂಜಯ್ ಝಾ ಟ್ವೀಟ್ ವೊಂದನ್ನು ಮಾಡಿ ಸೆನ್ಸೇಷನಲ್ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿಂತೆ ಮಾಹಿತಿ ನೀಡಿರುವ ಝಾ, ಕಾಂಗ್ರೆಸ್ ಪಕ್ಷದ ಸುಮಾರು 100 ಮುಖಂಡರು (ಸಂಸದರು ಸೇರಿದಂತೆ) ಪಕ್ಷದ ಆಂತರಿಕ ವ್ಯವಹಾರದ ಕುರಿತು ಅಸಮಾಧಾನಗೊಂಡಿದ್ದಾರೆ ಎಂದಿದ್ದಾರೆ.
It is estimated that around 100 Congress leaders (including MP's) , distressed at the state of affairs within the party, have written a letter to Mrs Sonia Gandhi, Congress President, asking for change in political leadership and transparent elections in CWC.
Watch this space.
— Sanjay Jha (@JhaSanjay) August 17, 2020
ತಮ್ಮ ಟ್ವೀಟ್ ನಲ್ಲಿ ಈ ಕುರಿತು ಮಾಹಿತಿ ಬಹಿರಂಗಗೊಳಿಸಿರುವ ಸಂಜಯ್ ಝಾ, ಈ ಮುಖಂಡರು ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಈ ಕುರಿತು ಪತ್ರ ಬರೆದಿದ್ದ ಮುಖಂಡರು, ಪಕ್ಷದ ರಾಜಕೀಯ ನೇತೃತ್ವ ಬದಲಾವಣೆಯ ಬೇಡಿಕೆ ಸಲ್ಲಿಸಿದ್ದರು ಎಂದಿದ್ದಾರೆ. ಅಷ್ಟೇ ಅಲ್ಲಪಕ್ಷದ ಕಾರ್ಯ ಸಮಿತಿಯಲ್ಲಿ ಪಾರದರ್ಶಕ ಚುನಾವಣೆಯ ಬೇಡಿಕೆ ಕೂಡ ಇಟ್ಟಿದ್ದರು ಎಂದಿದ್ದಾರೆ.
ನನ್ನ ಪ್ರಾಮಾಣಿಕತೆ ಯಾವುದೇ ಒಂದು ವ್ಯಕ್ತಿಗೆ ಸೀಮಿತವಾಗಿಲ್ಲ: ಸಂಜಯ್ ಝಾ
ಕಾಂಗ್ರೆಸ್ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಇತ್ತೀಚೆಗಷ್ಟೇ ಪಕ್ಷದಿಂದ ಬರಖಾಸ್ತುಗೊಂಡ ಬಳಿಕ ಮಾತನಾಡಿದ ಸಂಜಯ್ ಝಾ, ನನ್ನ ಪ್ರಾಮಾಣಿಕತೆ ಯಾವುದೇ ಓರ್ವ ವ್ಯಕ್ತಿ ಅಥವಾ ಕುಟುಂಬಕ್ಕೆ ಸೀಮಿತವಾಗಿಲ್ಲ ಮತ್ತು ಪಕ್ಷದ ವಿಚಾರಧಾರೆಗೆ ತಾವು ಪ್ರಾಮಾಣಿಕರಾಗಿರುವುದಾಗಿ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ರೆಬೆಲ್ ಮುಖಂಡ ಸಚಿನ್ ಪೈಲಟ್ ಗೆ ಸಂಬಂಧಿಸಿದ ಪ್ರಕರಣವನ್ನು ನಿಭಾಯಿಸಿದ ಪಕ್ಷದ ಪದ್ಧತಿಯ ಕುರಿತು ಟೀಕೆ ವ್ಯಕ್ತಪಡಿಸಿದ್ದ ಸಂಜಯ್ ಝಾ, ಗಾಂಧಿವಾದ, ನೆಹರುವಾದ ವಿಚಾರಧಾರೆಗೆ ಸೇರಿದವರಾಗಿದ್ದಾರೆ. ಆದರೆ ಪ್ರಸ್ತುತ ಈ ವಿಚಾರಧಾರೆ ಕಾಂಗ್ರೆಸ್ ಪಕ್ಷದಿಂದ ಮಾಯವಾಗುತ್ತಿದೆ ಎಂದು ಅವರು ಹೇಳಿದ್ದರು.
ಪಕ್ಷದ ಪುನರುತ್ಥಾನಕ್ಕಾಗಿ ಅವಶ್ಯಕ ಎನಿಸುವ ಎಲ್ಲ ವಿಷಯಗಳನ್ನು ತಾವು ಮುಂದುವರೆಸುವುದು ಹಾಗೂ ತಮ್ಮ ಹೋರಾಟವನ್ನು ತಾವು ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು.