ನವದೆಹಲಿ: ಒಂದು ವೇಳೆ ನೀವೂ ಕೂಡ Samsung ಗ್ರಾಹಕರಾಗಿದ್ದರೆ, ಇನ್ಮುಂದೆ ನಿಮ್ಮ ಡೇಟಾ ಮತ್ತಷ್ಟು ಸುರಕ್ಷಿತವಾಗಿರಲಿದೆ. ಏಕೆಂದರೆ, ಕಂಪನಿ ದೇಶದಲ್ಲಿ ತನ್ನ ಆಯ್ದ ಹ್ಯಾಂಡ್ ಸೆಟ್ ಗಳ ಮೇಲೆ ಭಾರತದಲ್ಲಿಯೇ ಅಭಿವೃದ್ಧಿಗೊಂಡ 'ಆಲ್ಟ್ ಜಿ ಲೈಫ್ (Altz Life) ಪ್ರೈವಸಿ ವೈಶಿಷ್ಟ್ಯವನ್ನು ಪರಿಚಯಿಸಿದೆ. ಸದ್ಯ ಈ ವೈಶಿಷ್ಟ್ಯ ಕಂಪನಿಯ Galaxy A71 ಹಾಗೂ A51 ಸಾಫ್ಟ್ ವೇರ್ ಅಪ್ಡೇಟ್ ಬಳಿಕ ಲಭ್ಯವಾಗಲಿದೆ.
ಸ್ಯಾಮ್ಸಂಗ್ ಪ್ರಕಾರ ಈ ವೈಶಿಷ್ಟ್ಯ ಫೋನ್ ನ ಪಾವರ್ ಬಟನ್ ಅನ್ನು ಎರಡು ಬಾರಿ ಒತ್ತಿದ ಬಳಿಕ ಪ್ರೈವೆಸಿ ಮೋಡ್ ಅಥವಾ ಸ್ಯಾಮ್ಸಂಗ್ ಮೋಡ್ ಗೆ ಬದಲಾಯಿಸುವ ಸೌಕರ್ಯ ನೀಡಲಿದೆ. ಜೊತೆಗೆ ಭಾವಚಿತ್ರ ಹಾಗೂ ವಿಡಿಯೋಗಳನ್ನು ಗ್ರಾಹಕರ ಆಧಾರದ ಮೇಲೆ ಪ್ರೈವೇಟ್ ಫೋಲ್ಡರ್ ನಲ್ಲಿ ಶೇಖರಿಸಿ ಇಡಲಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ Altz Life ವೈಶಿಷ್ಟ್ಯ ಆಗಸ್ಟ್ 10, 2020ರ ನಂತರದ ಸಾಫ್ಟ್ವೇರ್ ಅಪ್ಡೇಟ್ ಬಳಿಕ ಗ್ಯಾಲಕ್ಸಿ A71 ಹಾಗೂ ಗ್ಯಾಲಕ್ಸಿ A51 ನೀಡಲಾಗುತ್ತಿದೆ. ಈ ಕುರಿತು ಸಮೀಕ್ಷೆಯೊಂದನ್ನು ನಡೆಸಿರುವ ಕಂಪನಿ 90ರ ದಶಕದ ಮಧ್ಯದಿಂದ ಹಿಡಿದು 2000 ದಶಕದ ಆರಂಭದ ವರ್ಷಗಳಲ್ಲಿ ಹುಟ್ಟಿದ ಮಕ್ಕಳು ತಮ್ಮ ಫೋನ್ ನಲ್ಲಿ ಪ್ರೈವೇಟ್ ಫೋಟೋ, ಆಪ್ ಹಾಗೂ ಚ್ಯಾಟ್ ಗಳನ್ನು ಶೇಖರಿಸಿ ಇಡುತ್ತಾರೆ ಹಾಗೂ ಅವರು ಈ ಫೋಟೋ ಹಾಗೂ ಸಂವಾದಗಳನ್ನು ತಮ್ಮ ಮನೆಯವರ ಜೊತೆಗೆ ಅಥವಾ ಇತರರ ಜೊತೆಗೆ ಹಂಚಿಕೊಳ್ಳಲು ಬಯಸುವುದಿಲ್ಲ.
ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಇಂಡಿಯಾ ಅಪರೇಷನ್ ನ ಹಿರಿಯ ನಿರ್ದೇಶಕ ಮನು ಶರ್ಮಾ, ಪ್ರೈವೇಟ್ ಡೇಟಾ ಕಾರಣ ತಮ್ಮ ಫೋನ್ ಅನ್ನು ಇತರರಿಗೆ ನೀಡಲು ನಿರಾಕರಿಸಲು ಬಯಸುವ ಗ್ರಾಹಕರಿಗೆ ಈ ವೈಶಿಷ್ಟ್ಯ ಭಾರಿ ನೆಮ್ಮದಿ ನೀಡಲಿದೆ ಎಂದು ಹೇಳಿದ್ದಾರೆ.
ಮೊಬೈಲ್ ಉದ್ಯಮದ ಅತ್ಯಂತ ಹೊಚ್ಚ ಹೊಸ ತಂತ್ರಜ್ಞಾನ ಇದಾಗಿದ್ದು, ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಹೇಳಿಕೆಯ ಪ್ರಕಾರ, ಈ ವೈಶಿಷ್ಟ್ಯವನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ.