ಎಷ್ಟಿದೆ ಗೊತ್ತಾ IPS ಅಧಿಕಾರಿಯ ಸಂಬಳ? ಮನೆ-ಕಾರು ಸೇರಿ ಇವರಿಗಿದೆ ಈ ವಿಶೇಷ ಸೌಲಭ್ಯಗಳು

ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಭಾರತೀಯ ಪೊಲೀಸ್ ಸೇವೆಗೆ (IPS) ಸೇರುವ ಅಧಿಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಐಪಿಎಸ್ ಅಧಿಕಾರಿಗಳು ಡೆಪ್ಯುಟಿ ಎಸ್‌ಪಿಯಿಂದ ಎಸ್‌ಪಿ, ಡಿಐಜಿ, ಐಜಿ, ಡಿಜಿಪಿ ಹುದ್ದೆಗೆ ಬಡ್ತಿ ಪಡೆಯುತ್ತಾರೆ.

Written by - Bhavishya Shetty | Last Updated : Jul 12, 2022, 10:57 AM IST
  • ಐಎಎಸ್‌, ಐಪಿಎಸ್‌ ಆಯ್ಕೆ ಹೇಗೆ ಮಾಡಲಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ
  • ಜವಾಬ್ದಾರಿಗಳಿಗೆ ತಕ್ಕಂತೆ ವಿವಿಧ ಸೌಲಭ್ಯಗಳು ಮತ್ತು ವೇತನವನ್ನು ಸಹ ಪಡೆಯುತ್ತಾರೆ
  • ಐಪಿಎಸ್ ಅಧಿಕಾರಿಗಳಿಗಿರುವ ಸಂಬಳ ಎಷ್ಟು? ಸೌಲಭ್ಯಗಳೇನು ಎಂಬ ಬಗ್ಗೆ ಮಾಹಿತಿ
ಎಷ್ಟಿದೆ ಗೊತ್ತಾ IPS ಅಧಿಕಾರಿಯ ಸಂಬಳ? ಮನೆ-ಕಾರು ಸೇರಿ ಇವರಿಗಿದೆ ಈ ವಿಶೇಷ ಸೌಲಭ್ಯಗಳು title=
IPS Officer

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)ನ ನಾಗರಿಕ ಸೇವೆಗಳ ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯುತ್ತಾರೆ, ಆದರೆ ಕೆಲವೇ ವಿದ್ಯಾರ್ಥಿಗಳು ಮಾತ್ರ ಯಶಸ್ವಿಯಾಗುತ್ತಾರೆ. ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಭಾರತೀಯ ಆಡಳಿತ ಸೇವೆ (IAS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಐಎಎಸ್‌ ಮತ್ತು ಐಪಿಎಸ್‌ಗಳಿಗೆ ಬೇರೆ ಬೇರೆ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಅವರು ತಮ್ಮ ಜವಾಬ್ದಾರಿಗಳಿಗೆ ತಕ್ಕಂತೆ ವಿವಿಧ ಸೌಲಭ್ಯಗಳು ಮತ್ತು ವೇತನವನ್ನು ಸಹ ಪಡೆಯುತ್ತಾರೆ. ಹಾಗಾದರೆ ಐಪಿಎಸ್ ಅಧಿಕಾರಿಗಳಿಗಿರುವ ಸಂಬಳ ಎಷ್ಟು? ಸೌಲಭ್ಯಗಳೇನು ಎಂಬುದರ ಬಗ್ಗೆ ತಿಳಿಯೋಣ.   

ಇದನ್ನೂ ಓದಿ: ನಿಷೇಧಿತ ಕೆಮ್ಮು ಸಿರಪ್‌ ಪತ್ತೆ: ಇದರ ಬೆಲೆ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!

ಐಪಿಎಸ್ ಅಧಿಕಾರಿಯ ಜವಾಬ್ದಾರಿ: 
ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಭಾರತೀಯ ಪೊಲೀಸ್ ಸೇವೆಗೆ (IPS) ಸೇರುವ ಅಧಿಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಐಪಿಎಸ್ ಅಧಿಕಾರಿಗಳು ಡೆಪ್ಯುಟಿ ಎಸ್‌ಪಿಯಿಂದ ಎಸ್‌ಪಿ, ಡಿಐಜಿ, ಐಜಿ, ಡಿಜಿಪಿ ಹುದ್ದೆಗೆ ಬಡ್ತಿ ಪಡೆಯುತ್ತಾರೆ.

ಐಪಿಎಸ್‌ ಅಧಿಕಾರಿಯ ಸಂಬಳ: 
ಸ್ಕೂಪ್‌ವೂಫ್‌ನ ವರದಿಯ ಪ್ರಕಾರ, 7ನೇ ವೇತನ ಆಯೋಗದ ಪ್ರಕಾರ ಐಪಿಎಸ್‌ ಅಧಿಕಾರಿ 56,100 ರೂ. ಮೂಲ ವೇತನವನ್ನು ಪಡೆಯುತ್ತಾರೆ. ಅದರ ಹೊರತಾಗಿ ತುಟ್ಟಿಭತ್ಯೆ ಮತ್ತು ಇತರ ಅನೇಕ ಭತ್ಯೆಗಳನ್ನು ಸಹ ಪಡೆಯುತ್ತಾರೆ. ಐಪಿಎಸ್‌ ಅಧಿಕಾರಿಯು ಬಡ್ತಿಯ ನಂತರ ಡಿಜಿಪಿ ಹುದ್ದೆಯನ್ನು ತಲುಪಬಹುದು ಮತ್ತು ಡಿಜಿಪಿ ಹುದ್ದೆಗೆ ನಿಯೋಜನೆಗೊಂಡ ಅಧಿಕಾರಿಯು ನಂತರ ಹೆಚ್ಚಿನ ಸಂಬಳವನ್ನು ಪಡೆಯುತ್ತಾರೆ. ಡಿಜಿಪಿಯಾದ ನಂತರ ಐಪಿಎಸ್ ಅಧಿಕಾರಿಯೊಬ್ಬರು ತಿಂಗಳಿಗೆ ಸುಮಾರು 2.25 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ.

ಯಾವ ಹುದ್ದೆಗೆ ಎಷ್ಟು ಸಂಬಳ: 

  • ಉಪ ಪೊಲೀಸ್ ವರಿಷ್ಠಾಧಿಕಾರಿ: ಐಪಿಎಸ್ ಅಧಿಕಾರಿ ಡಿಎಸ್ಪಿ ಹುದ್ದೆಗೆ ನೇಮಕಗೊಂಡಾಗ ಅವರಿಗೆ 56 ಸಾವಿರದ 100 ರೂಪಾಯಿ ಸಂಬಳ ಸಿಗುತ್ತದೆ.
  • ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ: ಡಿಎಸ್ಪಿಯಿಂದ ಬಡ್ತಿ ಪಡೆದ ನಂತರ, ಎಎಸ್ಪಿ ಹುದ್ದೆಯಲ್ಲಿ ಐಪಿಎಸ್ ಅಧಿಕಾರಿಯ ಪೋಸ್ಟಿಂಗ್ ಮಾಡಲಾಗುತ್ತದೆ.  ಅವರು 67 ಸಾವಿರದ 700 ರೂಪಾಯಿಗಳನ್ನು ಸಂಬಳವಾಗಿ ಪಡೆಯುತ್ತಾರೆ.
  • ಪೊಲೀಸ್ ವರಿಷ್ಠಾಧಿಕಾರಿ: ಎಸ್ಪಿ ಹುದ್ದೆಗೆ ಬಂದ ನಂತರ ಐಪಿಎಸ್ ಅಧಿಕಾರಿ 78 ಸಾವಿರದ 800 ರೂ. ಸಂಬಳವನ್ನು ಪಡೆಯುತ್ತಾರೆ. 
  • ಹಿರಿಯ ಪೊಲೀಸ್ ವರಿಷ್ಠಾಧಿಕಾರಿ: ಎಸ್ಪಿ ನಂತರ ಐಪಿಎಸ್ ಅಧಿಕಾರಿ ಎಎಸ್ಪಿ ಹುದ್ದೆಗೆ ಬಡ್ತಿ ಪಡೆದು 1 ಲಕ್ಷದ 18 ಸಾವಿರದ 500 ರೂ. ಸಂಬಳವನ್ನು ಪಡೆಯುತ್ತಾರೆ. 
  • ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್: ಡಿಐಜಿಪಿ ಹುದ್ದೆಯನ್ನು ತಲುಪಿದ ನಂತರ ಐಪಿಎಸ್ ಅಧಿಕಾರಿಯ ವೇತನವು 1 ಲಕ್ಷ 31 ಸಾವಿರದ 100 ರೂಪಾಯಿ ಆಗುತ್ತದೆ.
  • ಪೊಲೀಸ್ ಮಹಾನಿರೀಕ್ಷಕರು: ಐಪಿಎಸ್ ಅಧಿಕಾರಿಯೊಬ್ಬರು ಐಜಿಪಿ ಹುದ್ದೆಗೆ ಬಡ್ತಿ ಪಡೆದಾಗ ಅವರ ಮಾಸಿಕ ವೇತನವಾಗಿ 1 ಲಕ್ಷದ 44 ಸಾವಿರದ 200 ರೂ. ಇರುತ್ತದೆ.
  • ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು: ಐಜಿಪಿ ನಂತರ, ಐಪಿಎಸ್ ಅಧಿಕಾರಿ ಬಡ್ತಿ ಪಡೆದು ಎಡಿಜಿಪಿ ಆಗುತ್ತಾರೆ. ನಂತರ ಅವರ ಸಂಬಳ 2 ಲಕ್ಷ 5 ಸಾವಿರದ 400 ರೂ. ಆಗುತ್ತದೆ.
  • ಪೊಲೀಸ್ ಮಹಾನಿರ್ದೇಶಕರು: ಒಬ್ಬ ಐಪಿಎಸ್ ಅಧಿಕಾರಿಯು ಬಡ್ತಿಯ ನಂತರ ಡಿಜಿಪಿ ಹುದ್ದೆಯನ್ನು ತಲುಪಬಹುದು ಮತ್ತು ಡಿಜಿಪಿ ಹುದ್ದೆಗೆ ನೇಮಕಗೊಂಡ ಅಧಿಕಾರಿಯು ಅತ್ಯಧಿಕ ವೇತನವನ್ನು ಪಡೆಯುತ್ತಾನೆ. ಡಿಜಿಪಿಯಾದ ನಂತರ ಐಪಿಎಸ್ ಅಧಿಕಾರಿಯೊಬ್ಬರು ತಿಂಗಳಿಗೆ ಸುಮಾರು 2.25 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ.

ಇದನ್ನೂ ಓದಿ: WhatsApp ಹೊರ ತಂದಿದೆ ಹೊಸ ವೈಶಿಷ್ಟ್ಯ ..! ರಿಯಾಕ್ಷನ್ ಇಮೋಜಿ ಸಂಖ್ಯೆಗಳಲ್ಲಿ ಹೆಚ್ಚಳ

ಸಂಬಳದ ಹೊರತಾಗಿ, IPS ಅಧಿಕಾರಿಯು ಅನೇಕ ಇತರ ಸೌಲಭ್ಯಗಳನ್ನು ಪಡೆಯುತ್ತಾನೆ, ಆದರೆ ಇದು ವಿವಿಧ ಪೇ-ಬ್ಯಾಂಡ್‌ಗಳ ಆಧಾರದ ಮೇಲೆ ಬದಲಾಗುತ್ತದೆ. ಐಪಿಎಸ್ ಅಧಿಕಾರಿಗೆ ಮನೆ ಮತ್ತು ವಾಹನದ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ಮನೆ ಮತ್ತು ಕಾರಿನ ಗಾತ್ರವನ್ನು ಹುದ್ದೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದರೊಂದಿಗೆ ಐಪಿಎಸ್ ಅಧಿಕಾರಿಗಳಿಗೆ ಹುದ್ದೆಗೆ ಅನುಗುಣವಾಗಿ ಭದ್ರತಾ ಸಿಬ್ಬಂದಿ, ಚಾಲಕರು ಮತ್ತು ಮನೆಗೆಲಸಗಾರರನ್ನು ನೀಡಲಾಗುತ್ತದೆ. ಇದಲ್ಲದೇ ವೈದ್ಯಕೀಯ ಚಿಕಿತ್ಸೆ, ದೂರವಾಣಿ, ವಿದ್ಯುತ್ ಬಿಲ್‌ಗೂ ಹುದ್ದೆಗೆ ಅನುಗುಣವಾಗಿ ಹಣ ಲಭ್ಯವಿದೆ. ಐಪಿಎಸ್ ಅಧಿಕಾರಿಗಳು ನಿವೃತ್ತಿಯ ನಂತರ ಆಜೀವ ಪಿಂಚಣಿಯನ್ನೂ ಪಡೆಯುತ್ತಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News