ಶಬರಿಮಲೆ ವಿವಾದ ಲೋಕಸಭಾ ಚುನಾವಣೆ ಸೋಲಿಗೆ ಕಾರಣ- ಸಿಪಿಎಂ

  ಶಬರಿಮಲೆ ವಿವಾದವು ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಎಂದು ಸಿಪಿಎಂ ಒಪ್ಪಿಕೊಂಡಿದೆ.

Last Updated : Jun 26, 2019, 06:38 PM IST
ಶಬರಿಮಲೆ ವಿವಾದ ಲೋಕಸಭಾ ಚುನಾವಣೆ ಸೋಲಿಗೆ ಕಾರಣ- ಸಿಪಿಎಂ title=
ಸಾಂದರ್ಭಿಕ ಚಿತ್ರ

ತಿರುವನಂತಪುರಂ:  ಶಬರಿಮಲೆ ವಿವಾದವು ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಎಂದು ಸಿಪಿಎಂ ಒಪ್ಪಿಕೊಂಡಿದೆ.

ಸಿಪಿಎಂ ಪಕ್ಷವು ಭಾನುವಾರ ಮತ್ತು ಸೋಮವಾರದಂದು ತಿರುವನಂತಪುರಂದಲ್ಲಿ ನಡೆದ ಎರಡು ದಿನಗಳ ರಾಜ್ಯ ಸಮಿತಿ ಸಭೆಯಲ್ಲಿ ಚರ್ಚಿಸಿದ ಮತದಾನದ ನಂತರದ ಮೌಲ್ಯಮಾಪನ ವರದಿಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ, ಅದರ ಆಯ್ದ ಭಾಗಗಳನ್ನು ಬುಧವಾರ ಪಕ್ಷದ ಮುಖವಾಣಿ "ದೇಶಾಭಿಮಾನಿ" ಯಲ್ಲಿ ಪ್ರಕಟಿಸಲಾಗಿದೆ. 

ಜನವರಿ 1 ರಂದು ಆಡಳಿತ ಮಂಡಳಿಯು ಮಹಿಳೆಯರ ಮಾನವ ಗೋಡೆಯನ್ನು ಆಯೋಜಿಸಿದ ಒಂದು ದಿನದ ನಂತರ, ಇಬ್ಬರು ಮಹಿಳೆಯರು ಪವಿತ್ರ ಬೆಟ್ಟಗಳನ್ನು ಚಾರಣ ಮಾಡಿ ಶಬರಿಮಲೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದನ್ನು ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಹೆಚ್ಚು ಬಳಸಿದ್ದು, ಲೋಕಸಭಾ ಚುನಾವಣೆಯಲ್ಲಿ ವ್ಯಾಪಕ ಪರಿಣಾಮವನ್ನು ಉಂಟುಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜನವರಿ 2 ರಂದು ಭಗವಾನ್ ಅಯ್ಯಪ್ಪ ದೇವಸ್ಥಾನಕ್ಕೆ ಬಿಂದು ಮತ್ತು ಕನಕದುರ್ಗ ಎನ್ನುವ ಇಬ್ಬರು ಮಹಿಳೆಯರ ಪ್ರವೇಶವೇ ಈಗ ಪಕ್ಷದ ಸೋಲಿಗೆ ಕಾರಣವಾಗಿ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್ 28 ರಂದು ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು, ಇದನ್ನು ಎಲ್‌ಡಿಎಫ್ ಸರ್ಕಾರ ತೀರ್ಪನ್ನು ಜಾರಿಗೆ ತರಲು ನಿರ್ಧರಿಸಿದ ನಂತರ ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಸಿಪಿಐ (ಎಂ) ಮತ್ತು ಎಲ್‌ಡಿಎಫ್ ಸರ್ಕಾರ ಸುಪ್ರೀಂಕೋರ್ಟ್ ನ ತೀರ್ಪನ್ನು ಬೆಂಬಲಿಸಲು ನಿರ್ಧರಿಸಿದರೆ, ಕಾಂಗ್ರೆಸ್ ಮತ್ತು ಬಿಜೆಪಿ ಮೊದಲು ಬೆಂಬಲ ನೀಡಿ ನಂತರ ತಮ್ಮ ನಿಲುವನ್ನು ಬದಲಾಯಿಸಿಕೊಂಡವು.

Trending News