ಲುಧಿಯಾನದಲ್ಲಿ RSS ಕಾರ್ಯಕರ್ತನ ಹತ್ಯೆ

ಪಂಜಾಬ್ ನ ಲುಧಿಯಾನದ ಕೈಲಾಸ್ ನಗರದಲ್ಲಿ ಹತ್ಯೆ.  

Last Updated : Oct 17, 2017, 11:42 AM IST
ಲುಧಿಯಾನದಲ್ಲಿ RSS ಕಾರ್ಯಕರ್ತನ ಹತ್ಯೆ title=
Pic: ANI

ನವದೆಹಲಿ: ಪಂಜಾಬ್ನ ಲುಧಿಯಾನದಲ್ಲಿ RSS ಕಾರ್ಯಕರ್ತ ರವೀಂದ್ರ ಗೊಸೈನ್ ಮೇಲೆ ಅಪರಿಚಿತ ಹಂತಕರಿಂದ ಹತ್ಯೆ ನಡೆದಿದೆ.

ಇಂದು ಬೆಳಿಗ್ಗೆ 60ರ ಹರೆಯದ ರವೀಂದ್ರ ತಮ್ಮ ಕಚೇರಿಯಿಂದ ಹಿಂದಿರುಗುವಾಗ ಮನೆಯ ಸಮೀಪದಲ್ಲಿ ಬಂದಾಗ ಅಪರಿಚಿತ ಹಂತಕರು ಬಾಂಬ್ಗಳ ದಾಳಿ ಮಾಡಿ, ಗುಂಡುಹಾರಿಸಿ ಪರಾರಿಯಾಗಿದ್ದಾರೆ. ಇದಾದ ನಂತರ ತಕ್ಷಣ ರವೀಂದ್ರರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ದಾಳಿಕೋರರು ಮೋಟರ್ಸೈಕಲ್ ನಲ್ಲಿ ಸವಾರಿ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಇಲ್ಲಿಯವರೆಗೆ ಕೊಲೆಯ ಕಾರಣ ತಿಳಿದುಬಂದಿಲ್ಲ. ಘಟನೆಯ ಮಾಹಿತಿ ಪಡೆದ ನಂತರ ಪೋಲಿಸರು ಸ್ಥಳಕ್ಕೆ ದಾವಿಸಿ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ.

 

Trending News