ಪಾಟ್ನಾ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆರ್ಜೆಡಿ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು. ಪಕ್ಷವು ಪ್ರಣಾಳಿಕೆಗೆ 'ಬದ್ಧತಾ ಪತ್ರ' ಎಂಬ ಹೆಸರನ್ನು ನೀಡಿದೆ. ಪಾಟ್ನಾದಲ್ಲಿ ಆರ್ಜೆಡಿ ಕಚೇರಿಯಲ್ಲಿ ತೇಜಸ್ವಿ ಯಾದವ್ ಈ ಬದ್ಧತಾ ಪತ್ರವನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ತೇಜಸ್ವಿ ಯಾದವ್, ಪ್ರತಿ ಕುಟುಂಬವೂ ಅಭಿವೃದ್ಧಿಯತ್ತ ತಲುಪುವುದು ನಮ್ಮ ಗುರಿಯಾಗಿದೆ. ನಾವು ಕಾಂಗ್ರೆಸ್ ಪ್ರಣಾಳಿಕೆಯ ನ್ಯಾಯ್ ಯೋಜನೆಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.
ಆರ್ಜೆಡಿ ಬಿಡುಗಡೆ ಮಾಡಿದ ಬದ್ಧತಾ ಪತ್ರದಲ್ಲಿ ಮೀಸಲಾತಿ ಬಗ್ಗೆ ಮಾತನಾಡಿದ್ದು, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಪ್ರಸ್ತಾಪಗಳನ್ನು ಪರಿಚಯಿಸಲಾಗುವುದು. ನಾವು ಮಂಡಲ್ ಆಯೋಗದ ಸಲಹೆಗಳನ್ನು ಪಡೆದು 200 ಪಾಯಿಂಟ್ ರೋಸ್ಟರ್ಗೆ ಅನ್ವಯಿಸುತ್ತೇವೆ ಎಂದು ಭರವಸೆ ನೀಡಿದೆ.