ನವದೆಹಲಿ: ಪಾಟ್ನಾ ನ್ಯಾಯಾಲಯವು ಶನಿವಾರದಂದು ಆರ್ಜೆಡಿ ಪಕ್ಷದ ನವಾಡಾ ಶಾಸಕ ರಾಜಬಲ್ಲಭ ಯಾದವ್ ಅವರನ್ನು ಫೆಬ್ರವರಿ 2016ರಲ್ಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದು ಘೋಷಿಸಿದೆ .ಈಗ ಡಿಸೆಂಬರ್ 21 ರಂದು ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ
ಎಂಪಿ-ಎಂಎಲ್ಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಪರಶುರಾಮ ಯಾದವ್ ಅವರು ಶಾಸಕ ಮತ್ತು ಇತರ ಐವರನ್ನು ನಳಂದಾದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ವಿಚಾರವಾಗಿ ಈಗ ಅಪರಾಧಿ ಎಂದು ಘೋಷಿಸಿದೆ. ಇದೆ ಡಿಸೆಂಬರ್ 4 ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.
ಈ ವಿಚಾರಣೆ ವೇಳೆ ಒಟ್ಟು 22 ಸಾಕ್ಷಿದಾರರು ಹಾಜರಿದ್ದರು ಎಂದು ತಿಳಿದುಬಂದಿದೆ.2016 ರ ಫೆಬ್ರುವರಿ 9 ರಂದು ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಕ್ಷದಿಂದ ಅಮಾನತುಗೊಂಡಿರುವ ಯಾದವ್ ಅವರನ್ನು ಜೈಲಿನಲ್ಲಿರಿಸಲಾಗಿತ್ತು