ನವದೆಹಲಿ: ಎಸ್ಸಿ/ಎಸ್ಟಿ ಕಾಯ್ದೆ ವಿಚಾರವಾಗಿ ಕೇಂದ್ರ ಸರ್ಕಾರವು ಸುಗ್ರಿವಾಜ್ನೆಯನ್ನು ಹೊರಡಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ದ ಅಗಸ್ಟ್ 9 ರಂದು ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಚಿರಾಗ್ ಪಾಸ್ವಾನ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ ಚಿರಾಗ್ ಪಾಸ್ವಾನ್ " ನಾವು ಎಸ್ಸಿ/ಎಸ್ಟಿ ಕಾಯ್ದೆ ವಿಚಾರವಾಗಿ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ. ಒಂದುವೇಳೆ ಅದು ಸಾದ್ಯವಾಗದಿದ್ದರೆ ಕೇಂದ್ರ ಸರ್ಕಾರವನ್ನು ನಾವು ಅದನ್ನು ಮಸೂದೆಯ ರೂಪದಲ್ಲಿ ಮಂಡಿಸಿ ಈ ಹಿಂದಿನ ಕಾಯ್ದೆಯಂತೆ ಉಳಿಸಿಕೊಳ್ಳಲು ಅಗಸ್ಟ್ 7 ರಂದು ಸೂಚಿಸುತ್ತೇವೆ ಎಂದು ತಿಳಿಸಿದರು.
ಒಂದುವೇಳೆ ಈ ಬೇಡಿಕೆಯನ್ನು ಸರ್ಕಾರ ಈಡೇರಿಸದಿದ್ದಲ್ಲಿ ಆಗಸ್ಟ್ 9 ರ ಪ್ರತಿಭಟನೆ ಏಪ್ರಿಲ್ 2 ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಗಿಂತ ಉಗ್ರ ರೀತಿಯಲ್ಲಿರುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದರು. ಎಸ್ಸಿ/ಎಸ್ಟಿ ಸಮುದಾಯದ ಜನರು ಇದುವರೆಗೂ ಕಾಯ್ದೆಯ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸದಿದ್ದರಿಂದಾಗಿ ಬಿಜೆಪಿ ಸರ್ಕಾರದ ವಿರುದ್ದ ಅಸಮಾಧಾನಗೊಂಡಿದ್ದಾರೆ ಎಂದು ಚಿರಾಗ್ ಪಾಸ್ವಾನ್ ತಿಳಿಸಿದರು.