ಎನ್ ಡಿಎ ಒಕ್ಕೂಟ ಸೇರಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ಗೆ ಅಹ್ವಾನವಿತ್ತ ರಾಮದಾಸ್ ಅಠವಾಲೆ

ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ,ಕೇಂದ್ರ ಸಚಿವ ರಾಮದಾಸ್ ಅಠವಾಲೆ ಭಾನುವಾರ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟಕ್ಕೆ (ಎನ್ಡಿಎ) ಸೇರಲು ಆಹ್ವಾನಿಸಿದರು.

Written by - Zee Kannada News Desk | Last Updated : Sep 20, 2021, 12:05 AM IST
  • ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ,ಕೇಂದ್ರ ಸಚಿವ ರಾಮದಾಸ್ ಅಠವಾಲೆ ಭಾನುವಾರ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟಕ್ಕೆ (ಎನ್ಡಿಎ) ಸೇರಲು ಆಹ್ವಾನಿಸಿದರು.
ಎನ್ ಡಿಎ ಒಕ್ಕೂಟ ಸೇರಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ಗೆ ಅಹ್ವಾನವಿತ್ತ ರಾಮದಾಸ್ ಅಠವಾಲೆ title=

ನವದೆಹಲಿ: ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ,ಕೇಂದ್ರ ಸಚಿವ ರಾಮದಾಸ್ ಅಠವಾಲೆ ಭಾನುವಾರ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟಕ್ಕೆ (ಎನ್ಡಿಎ) ಸೇರಲು ಆಹ್ವಾನಿಸಿದರು.

ಇದನ್ನೂ ಓದಿ: Charanjit Singh Channi: ಯಾರು ಈ ಚರಣಜಿತ್ ಸಿಂಗ್ ಚನ್ನಿ ?

ಮುಂಬರುವ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಸಿಂಗ್ ಅವರು ಎನ್‌ಡಿಎಗೆ ಆಸ್ತಿಯಾಗಲಿದ್ದಾರೆ ಎಂದು ಹೇಳುತ್ತಾ, ಅಠವಾಲೆ ಅವರನ್ನು ಅವಮಾನ ಮಾಡಿದ ಪಕ್ಷವನ್ನು ತೊರೆಯುವಂತೆ ವಿನಂತಿಸಿದರು."ನಾನು ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarindar Singh) ಅವರನ್ನು ಕೇಳಲು ಬಯಸುತ್ತೇನೆ.ನಿಮ್ಮನ್ನು ಅವಮಾನಿಸಿದ ಪಾರ್ಟಿಯಲ್ಲಿ ಉಳಿಯುವುದರಿಂದ ಏನು ಪ್ರಯೋಜನ? ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸೇರಲು ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚರಣಜಿತ್ ಸಿಂಗ್ ಚನ್ನಿ ಪಂಜಾಬ್ ನ ನೂತನ ಮುಖ್ಯಮಂತ್ರಿ

'ಎನ್‌ಡಿಎಯಲ್ಲಿ ಪ್ರತಿಯೊಬ್ಬರನ್ನು ಸಮಾನವಾಗಿ ಗೌರವಿಸಲಾಗುತ್ತದೆ. ಅಮರೀಂದರ್ ಸಿಂಗ್ ಪಂಜಾಬ್‌ನಲ್ಲಿ ಎನ್‌ಡಿಎ ಅಧಿಕಾರಕ್ಕೆ ತರಲು ಉತ್ತಮ ಉಪಯೋಗವನ್ನು ಹೊಂದಬಹುದು ಎಂದು ಅವರು ಹೇಳಿದರು.ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ರಾಷ್ಟ್ರವಿರೋಧಿ ಎಂದು ಸಿಂಗ್ ಕರೆಯುವುದು ಸರಿ ಎಂದು ಆಥವಾಲೆ ಹೇಳಿದರು."ಸಿದ್ದು ಪಾಕಿಸ್ತಾನಕ್ಕೆ ಹೋದಾಗ, ಅವರು ಬಾಜ್ವಾ ಅವರನ್ನು ಅಪ್ಪಿಕೊಂಡಿದ್ದು ಗಂಭೀರ ವಿಷಯ.ಅಮರಿಂದರ್ ಸಿಂಗ್ ಹೇಳಿದ್ದು ಸರಿ, ಸಿದ್ದು ಮೋಸಗಾರ 'ಎಂದು ಅವರು ಹೇಳಿದರು.

ಇದನ್ನೂ ಓದಿ: MI vs CSK ಇಂದಿನ Playing 11 ಹೀಗಿದೆ : ಈ ಆಟಗಾರರಿಗೆ ಚಾನ್ಸ್ ನೀಡಿದ ಧೋನಿ ಮತ್ತು ರೋಹಿತ್

ತನ್ನ ನಿರ್ಗಮನವನ್ನು ಘೋಷಿಸಿದ ನಂತರ, ಕ್ಯಾಪ್ಟನ್ ಅಮರೀಂದರ್ ಸಿಂಗ್ ತಾನು ರಾಜಕೀಯವನ್ನು ತೊರೆಯುವುದಿಲ್ಲ ಎಂದು ಘೋಷಿಸಿದರು,ಆದರೆ ತಮ್ಮ ಆಯ್ಕೆಗಳನ್ನು ನಿರೀಕ್ಷಿಸಿ ಮತ್ತು ಪರಿಶೋಧಿಸುವುದಾಗಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News