ನವದೆಹಲಿ: ಸುಪ್ರೀಂಕೋರ್ಟ್ ರಾಮಮಂದಿರ ವಿಚಾರಣೆಯನ್ನು ಮುಂದೂಡಿರುವುದಕ್ಕೆ ಪ್ರತಿಕ್ರಿಯಿಸಿರುವ ನಾವು ಕಾನೂನನ್ನು ತಿದ್ದುಪಡಿ ಮಾಡುತ್ತೇವೆ,ಏಕೆಂದರೆ ಸುಪ್ರೀಂಕೋರ್ಟ್ ಸಂಸತ್ತಿಗಿಂತ ಮೇಲಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣ್ಯ ಸ್ವಾಮಿ ತಿಳಿಸಿದರು.
ರಾಮಮಂದಿರ ವಿವಾದ ವಿಚಾರಣೆಯನ್ನು ಜನವರಿಗೆ ಮುಂದೂಡಿರುವ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗ ಉತ್ತರಿಸಿರುವ ಸ್ವಾಮಿ "ಅವರು ಈ ವಿಚಾರಣೆಯನ್ನು ಜನವರಿಗೆ ಮುಂದೂಡಿದ್ದಾರೆ.ಅದು ಕೋರ್ಟ್ ನ ಅಧಿಕಾರ ಆದರೆ ನನ್ನ ಪ್ರಕಾರ ಸಂಸತ್ತಿಗೂ ಕೂಡ ಅಧಿಕಾರವಿದೆ, ಕೋರ್ಟ್ ಏನು ಸಂಸತ್ತಿಗಿಂತ ಮೇಲಲ್ಲ.ಈ ತಪ್ಪು ಕಲ್ಪನೆ ಜನರ ಮನಸ್ಸಿನಿಂದ ಅಳಿಸಬೇಕಾಗಿದೆ.ನಮಗೂ ಕೂಡ ಕಾನೂನನ್ನು ತಿದ್ದುಪಡಿ ಮಾಡುವ ಹಕ್ಕುಇದೆ. ಇದನ್ನು ಸುಪ್ರಿಂಕೋರ್ಟ್ ಸಂವಿಧಾನವನ್ನು ಉಲ್ಲಂಘನೆ ಮಾಡಿದೆಯೋ ಇಲ್ಲವೋ ಎನ್ನುವುದನ್ನು ಮಾತ್ರ ಪರಿಶೀಲಿಸಬೇಕು,ಸುಪ್ರಿಂಕೋರ್ಟ್ ಯಾವುದೇ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ, ಅದನ್ನು ಸಂಸತ್ತು ಮಾತ್ರ ಮಾಡಬಹುದು ಎಂದು ಸುಬ್ರಮಣ್ಯ ಸ್ವಾಮಿ ತಿಳಿಸಿದರು.
ಇದೇ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ವಾಮಿ "ನನ್ನ ಅಭಿಪ್ರಾಯದ ಪ್ರಕಾರ ನಾವು ಅದನ್ನು ಮಾಡಬೇಕಾಗಿದೆ.ಈ ನಾವು ಈಗಾಗಲೇ ಸಾಕಷ್ಟು ಕಾಯ್ದಿದ್ದೇವೆ.ಅಲ್ಲಿ ರಾಮ ಮಂದಿರವಿದ್ದಿದ್ದು ಸ್ಪಷ್ಟವಾಗಿದ್ದು, ಈ ವಿಚಾರವಾಗಿ ನಾನು ಚಳಿಗಾಲ ಅಧಿವೇಶನದಲ್ಲಿ ಈ ವಿಷಯವನ್ನು ಎತ್ತುತ್ತೇನೆ" ಎಂದು ಸ್ವಾಮಿ ತಿಳಿಸಿದರು.
2010 ರಲ್ಲಿ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆಯಲ್ಲಿನ ವಿವಾದಿತ ಜಾಗವನ್ನು ಮೂರು ಭಾಗವಾಗಿ ವಿಂಗಡಿಸಿತ್ತು, ಅದರಲ್ಲಿ ಸುನ್ನಿ ವಕ್ಫ್ ಬೋರ್ಡ್,ನಿರ್ಮೋಹಿ ಅಖಾರಾ ಮತ್ತು ರಾಮ ಲಲ್ಲಾಗಳ ನಡುವೆ ಭೂಮಿಯನ್ನು ಹಂಚಿಕೆ ಮಾಡಿತ್ತು ಆದರೆ ಈಗ ಈ ತೀರ್ಪನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಗೆ ಮೊರೆಹೋಗಲಾಗಿದೆ.ಈ ವಿಚಾರವಾಗಿ ಈಗ ಸುಪ್ರಿಂ ಅಂತಿಮ ತೀರ್ಪು ನಿಡುವುದೊಂದೆ ಬಾಕಿ ಇದೆ.