ಸೀತೆಯನ್ನು ಅಪಹರಿಸಿದ್ದು ರಾವಣನಲ್ಲ ರಾಮ!

    

Last Updated : Jun 1, 2018, 02:46 PM IST
ಸೀತೆಯನ್ನು ಅಪಹರಿಸಿದ್ದು ರಾವಣನಲ್ಲ ರಾಮ! title=

ನವದೆಹಲಿ: ರಾಮಾಯಣ ಮಹಾಕಾವ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಕತೆಯ ಸಾರಾಂಶವನ್ನು ಭಾರತದಲ್ಲಿ ಬಹುತೇಕ ಮಕ್ಕಳು ಬಾಲ್ಯದಲ್ಲಿಯೇ ತಿಳಿದುಕೊಂಡಿರುತ್ತಾರೆ.ಅಷ್ಟರ ಮಟ್ಟಿಗೆ ರಾಮಾಯಣ ಜನರಲ್ಲಿ ಅಂತರ್ಗತವಾಗಿದೆ.ಆದರೆ ಈಗ ಗುಜರಾತ್ ನಲ್ಲಿ 12 ನೇ ತರಗತಿಯ ಸಂಸ್ಕೃತ ಪಠ್ಯದಲ್ಲಿ ಈ  ಸೀತೆಯನ್ನು ಅಪಹರಣ ಮಾಡಿದ್ದು ರಾವಣಲ್ಲ ಬದಲಾಗಿ ರಾಮ! ಎಂದು  ಪ್ರಕಟಿಸಿದೆ.

ಸಂಸ್ಕೃತ ಸಾಹಿತ್ಯದ ಪರಿಚಯದ ಕುರಿತಿರುವ 106 ನೇ ಪುಟದಲ್ಲಿ " ಇಲ್ಲಿ ಕವಿಯು ರಾಮನ ಪಾತ್ರದ ಚಿತ್ರಣವನ್ನು ಮೂಲ ಚಿಂತನೆ ಹಾಗೂ ವಿಚಾರದೊಟ್ಟಗೆ ತರಲಾಗಿದೆ.ಅಲ್ಲಿ ರಾಮನು ಸೀತೆಯನ್ನು ಅಪಹರಿಸಿದ ಸಂದರ್ಭದಲ್ಲಿ ಲಕ್ಮಣನು ಅವನಿಗೆ ನೀಡಿದ ಸಂದೇಶದ ವಿವರಣೆ ಹೃದಯಮ್ಯವಾಗಿದೆ" ಎಂದು ಅದು ಪ್ರಕಟಿಸಿದೆ.

ಈ ಸಂಸ್ಕೃತ ಪಠ್ಯದಲ್ಲಿ ಈ ದೋಷವಲ್ಲದೆ ಹಲವಾರು ಕಾಗುಣಿತ ತಪ್ಪುಗಳು ಸಹ ಇವೆ ಎಂದು ಹೇಳಲಾಗಿದೆ.  ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ  ಗುಜರಾತ್ ಸರ್ಕಾರದ ಪಠ್ಯ ಮಂಡಳಿ ಅಧ್ಯಕ್ಷ  ಡಾ. ನಿತಿನ್ ಪೆಥಾನಿ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದು ಅನುವಾದದ ದೋಷ ಎಂದು ತಿಳಿಸಿರುವ ಅವರು"  ರಾವಣನ ಬದಲಾಗಿ ರಾಮ ಎಂದಾಗಿದೆ, ಗುಜರಾತ್ ಪಠ್ಯದಲ್ಲಿ ಯಾವುದೇ ರೀತಿಯ ದೋಷವಿಲ್ಲ ಎಂದು ಅವರು ತಿಳಿಸಿದ್ದಾರೆ.

Trending News