ವಿವಾದದ ಬಳಿಕ ಸಾಂಪ್ರದಾಯಿಕ ಉಡುಪಿಗೆ ಮರಳಿದ ರಾಜ್ಯಸಭೆ ಮಾರ್ಷಲ್‌ಗಳು

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ (ನವೆಂಬರ್ 18) ಸಭಾಧ್ಯಕ್ಷರ ಆಸನದ ಪಕ್ಕದಲ್ಲಿ ನಿಂತಿದ್ದ ಇಬ್ಬರು ಮಾರ್ಷಲ್‌ಗಳು ಮಿಲಿಟರಿ ಶೈಲಿಯ ಕ್ಯಾಪ್ ಮತ್ತು ಭುಜದ ಚಿಹ್ನೆಯೊಂದಿಗೆ ನೀಲಿ ಬಣ್ಣದ ಸಮವಸ್ತ್ರವನ್ನು ಧರಿಸಿರುವುದು ಕಂಡುಬಂದ ನಂತರ ರಾಜ್ಯಸಭಾ ಸದಸ್ಯರಿಗೆ ಆಶ್ಚರ್ಯವಾಯಿತು.

Last Updated : Nov 26, 2019, 08:54 AM IST
ವಿವಾದದ ಬಳಿಕ ಸಾಂಪ್ರದಾಯಿಕ ಉಡುಪಿಗೆ ಮರಳಿದ ರಾಜ್ಯಸಭೆ ಮಾರ್ಷಲ್‌ಗಳು title=

ನವದೆಹಲಿ: ಮಿಲಿಟರಿ ಶೈಲಿಯ ಸಮವಸ್ತ್ರವು ವಿವಾದವನ್ನು ಸೃಷ್ಟಿಸಿದ ಒಂದು ವಾರದ ನಂತರ, ರಾಜ್ಯಸಭಾ ಮಾರ್ಷಲ್‌ಗಳು ಸೋಮವಾರ ತಮ್ಮ ಹಳೆಯ ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ (ನವೆಂಬರ್ 18) ಸಭಾಧ್ಯಕ್ಷರ ಆಸನದ ಪಕ್ಕದಲ್ಲಿ ನಿಂತಿದ್ದ ಇಬ್ಬರು ಮಾರ್ಷಲ್‌ಗಳು ಮಿಲಿಟರಿ ಶೈಲಿಯ ಕ್ಯಾಪ್ ಮತ್ತು ಭುಜದ ಚಿಹ್ನೆಯೊಂದಿಗೆ ನೀಲಿ ಬಣ್ಣದ ಸಮವಸ್ತ್ರವನ್ನು ಧರಿಸಿರುವುದು ಕಂಡುಬಂದ ನಂತರ ರಾಜ್ಯಸಭಾ ಸದಸ್ಯರಿಗೆ ಆಶ್ಚರ್ಯವಾಯಿತು.

ಹೊಸ ಉಡುಪನ್ನು ಮಾಜಿ ಸೇನಾ ಮುಖ್ಯಸ್ಥ ಜನರಲ್ ವೇದ ಪ್ರಕಾಶ್ ಮಲಿಕ್ ಮತ್ತು ಮಾಜಿ ಡಿಜಿಎಂಒ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಸೇರಿದಂತೆ ಹಲವಾರು ಸೇನಾಧಿಕಾರಿಗಳು ಧರಿಸಿದ್ದರು.

ಈ ಕುರಿತು ಟ್ವೀಟ್ ಮಾಡಿದ್ದ ಮಾಲಿಕ, "ಮಿಲಿಟರಿ ಅಲ್ಲದ ಸಿಬ್ಬಂದಿಗಳಿಂದ ಮಿಲಿಟರಿ ಸಮವಸ್ತ್ರವನ್ನು ನಕಲಿಸುವುದು ಮತ್ತು ಧರಿಸುವುದು ಕಾನೂನುಬಾಹಿರ ಮತ್ತು ಭದ್ರತಾ ಅಪಾಯವಾಗಿದೆ. ವಿ.ಪಿ. ಸೆಕ್ರೆಟರಿಯಟ್, ರಾಜ್ಯಸಭೆ ಮತ್ತು ರಾಜನಾಥ್ ಸಿಂಗ್ ಅವರು ಶೀಘ್ರ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಹೊಸ ಸಮವಸ್ತ್ರದಲ್ಲಿ ಮಾರ್ಷಲ್‌ಗಳನ್ನು ನೋಡಿ ಸದನದ ಸದಸ್ಯರೂ ಆಶ್ಚರ್ಯಚಕಿತರಾದರು. "ಇದು ಬಹುಶಃ ಮೊದಲ ಬಾರಿಗೆ ಸಂಭವಿಸಿದೆ. ಕನಿಷ್ಠ ಅಂತಹ ಬದಲಾವಣೆಯನ್ನು ನಾನು ನೆನಪಿಲ್ಲ" ಎಂದು ಸದನದ ಸದಸ್ಯರೊಬ್ಬರು ಹೇಳಿದ್ದಾರೆ.

ಹೊಸ ಸಮವಸ್ತ್ರದ ಬಗ್ಗೆ ವಿವಾದ ಭುಗಿಲೆದ್ದ ನಂತರ, ರಾಜ್ಯಸಭಾ ಸಭಾಧ್ಯಕ್ಷರಾದ ಎಂ. ವೆಂಕಯ್ಯ ನಾಯ್ಡು ಅವರು ರಾಜ್ಯಸಭಾ ಕಾರ್ಯದರ್ಶಿಗೆ ಮಾರ್ಷಲ್‌ಗಳ ಹೊಸ ಸಮವಸ್ತ್ರವನ್ನು ಪರಿಶೀಲಿಸುವಂತೆ ಕೇಳಿಕೊಂಡರು.

"ಹಲವರ ಸಲಹೆ ಸೂಚನೆಗಳನ್ನು ಪರಿಗಣಿಸಿದ ನಂತರ ರಾಜ್ಯಸಭೆಯ ಸಚಿವಾಲಯವು ಮಾರ್ಷಲ್‌ಗಳಿಗೆ ಹೊಸ ವಸ್ತ್ರಸಂಹಿತೆಯನ್ನು ಹೊರತಂದಿದೆ. ಆದರೆ ಕೆಲವು ರಾಜಕೀಯ ಮತ್ತು ಕೆಲವು ಉತ್ತಮ ಜನರಿಂದ ನಾವು ಕೆಲವು ಅವಲೋಕನಗಳನ್ನು ಸ್ವೀಕರಿಸಿದ್ದೇವೆ. ಆದ್ದರಿಂದ ನಾನು ಮಾರ್ಷಲ್‌ಗಳಿಗೆ ಮತ್ತೆ ಸಾಂಪ್ರದಾಯಿಕ ಉಡುಪನ್ನು ಧರಿಸುವಂತೆ ಸಚಿವಾಲಯವನ್ನು ಕೇಳಲು ನಿರ್ಧರಿಸಿದೆ" ಎಂದು ಡ್ರೆಸ್ ಕೋಡ್ ಪರಿಶೀಲನೆಗೆ ಆದೇಶಿಸುವಾಗ ನಾಯ್ಡು ಹೇಳಿದ್ದರು.

ಸದನದ ಹೆಗ್ಗುರುತಾದ 250 ನೇ ಅಧಿವೇಶನದೊಂದಿಗೆ ಮಾರ್ಷಲ್ ಸಮವಸ್ತ್ರವನ್ನು ಬದಲಾಯಿಸಲು ರಾಜ್ಯಸಭಾ ಸಚಿವಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 

Trending News