ರಾಜ್ಯಸಭೆಯಲ್ಲಿ ಎಸ್‌ಪಿಜಿ (ತಿದ್ದುಪಡಿ) ಮಸೂದೆಗೆ ಅಂಗೀಕಾರ

ಎಸ್‌ಪಿಜಿ (ತಿದ್ದುಪಡಿ) ಮಸೂದೆ 2019 ಕ್ಕೆ ಮಂಗಳವಾರ (ಡಿಸೆಂಬರ್ 3ರಂದು ) ರಾಜ್ಯಸಭೆ ಅಂಗೀಕರಿಸಿದೆ.ಇದೇ ವೇಳೆ ಕಾಂಗ್ರೆಸ್, ಡಿಎಂಕೆ ಮತ್ತು ಎಡ ಪಕ್ಷದ ಸದಸ್ಯರು ಮಸೂದೆ ಮತದಾನದ ವೇಳೆ ಸಭಾ ತ್ಯಾಗ ಮಾಡಿದರು.

Last Updated : Dec 3, 2019, 08:02 PM IST
ರಾಜ್ಯಸಭೆಯಲ್ಲಿ ಎಸ್‌ಪಿಜಿ (ತಿದ್ದುಪಡಿ) ಮಸೂದೆಗೆ ಅಂಗೀಕಾರ title=
Representational image

ನವದೆಹಲಿ: ಎಸ್‌ಪಿಜಿ (ತಿದ್ದುಪಡಿ) ಮಸೂದೆ 2019 ಕ್ಕೆ ಮಂಗಳವಾರ (ಡಿಸೆಂಬರ್ 3ರಂದು ) ರಾಜ್ಯಸಭೆ ಅಂಗೀಕರಿಸಿದೆ.ಇದೇ ವೇಳೆ ಕಾಂಗ್ರೆಸ್, ಡಿಎಂಕೆ ಮತ್ತು ಎಡ ಪಕ್ಷದ ಸದಸ್ಯರು ಮಸೂದೆ ಮತದಾನದ ವೇಳೆ ಸಭಾ ತ್ಯಾಗ ಮಾಡಿದರು.

ಮಸೂದೆ ಅಂಗೀಕಾರಗೊಳ್ಳುವ ಮೊದಲು ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸರ್ಕಾರವು ರಾಜಕೀಯ ದುರುದ್ದೇಶದಿಂದ ಹೊರಗುಳಿದಿದೆ ಮತ್ತು ಎಸ್‌ಪಿಜಿ ಕಾನೂನಿನ ಬದಲಾವಣೆಗಳು ಗಾಂಧಿ ಕುಟುಂಬವನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿದೆ ಎಂಬ ಹೇಳಿಕೆಯಲ್ಲಿ ಹುರಿಳಿಲ್ಲ ಎಂದು ಹೇಳಿದರು. 

"ನಾವು ಕುಟುಂಬವನ್ನು ವಿರೋಧಿಸುತ್ತಿಲ್ಲ, ಆದರೆ ಸ್ವಜನಪಕ್ಷಪಾತವನ್ನು ವಿರೋಧಿಸುತ್ತಿದ್ದೇವೆ. ಭಾರತದ ಪ್ರಜಾಪ್ರಭುತ್ವವು ಈ ರೀತಿ ನಡೆಯಲು ಸಾಧ್ಯವಿಲ್ಲ. ಗಾಂಧಿ ಕುಟುಂಬದ ಸುರಕ್ಷತೆಯ ಬಗ್ಗೆ ಮಾತ್ರ ಏಕೆ ಮಾತನಾಡಬೇಕು? ಗಾಂಧಿ ಕುಟುಂಬ ಸೇರಿದಂತೆ 130 ಕೋಟಿ ಭಾರತೀಯರ ಸುರಕ್ಷತೆಯು ಸರ್ಕಾರದ ಜವಾಬ್ದಾರಿ, "ಎಂದು ಅಮಿತ್ ಶಾ ಹೇಳಿದರು. 

"ಮಾಜಿ ಪ್ರಧಾನ ಮಂತ್ರಿಗಳ ಎಸ್‌ಪಿಜಿ ಕವರ್ ಕೂಡ ಹಿಂಪಡೆಯಲಾಗಿದೆ. ಎಸ್‌ಪಿಜಿ ಭದ್ರತಾ ವ್ಯಾಪ್ತಿಯನ್ನು ಹಿಂಪಡೆಯಲಾದ ಮಾಜಿ ಪ್ರಧಾನ ಮಂತ್ರಿಗಳಲ್ಲಿ ನರಸಿಂಹ ರಾವ್, ಚಂದ್ರಶೇಖರ್, ಐಕೆ ಗುಜ್ರಾಲ್, ಮನಮೋಹನ್ ಸಿಂಗ್ ಸೇರಿದ್ದಾರೆ. ಪ್ರಜಾಪ್ರಭುತ್ವದಲ್ಲಿ, ಕಾನೂನು ಎಲ್ಲರಿಗೂ ಒಂದೇ,  ಕುಟುಂಬ ವಿಶೇಷವಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

 ಇದೇ ವೇಳೆ ಎಸ್‌ಪಿಜಿ ಕಾಯ್ದೆಯ 5 ನೇ ತಿದ್ದುಪಡಿ ಮತ್ತು ಏ ಹಿಂದಿನ ನಾಲ್ಕು ತಿದ್ದುಪಡಿಗಳನ್ನು ಗಾಂಧಿ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಶಾ ಒತ್ತಿ ಹೇಳಿದರು.'ಇದು ಎಸ್‌ಪಿಜಿ ಕಾಯ್ದೆಯ 5 ನೇ ತಿದ್ದುಪಡಿ. ಗಾಂಧಿಗಳನ್ನು ಗಮನದಲ್ಲಿಟ್ಟುಕೊಂಡು ಈ ತಿದ್ದುಪಡಿಯನ್ನು ತರಲಾಗಿಲ್ಲ, ಆದರೆ, ನಾನು ಖಚಿತವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಹಿಂದಿನ 4 ತಿದ್ದುಪಡಿಗಳನ್ನು ಮಾಡಿದ್ದು ಕೇವಲ ಒಂದು ಕುಟುಂಬವನ್ನು ಮಾತ್ರ ಗಮನದಲ್ಲಿಟ್ಟುಕೊಂಡು' ರಾಜ್ಯಸಭೆಯಲ್ಲಿ ಶಾ ಹೇಳಿದರು.

Trending News