ಅಲ್ವಾರ್ ಗ್ಯಾಂಗ್ ರೇಪ್ ಸಂತ್ರಸ್ತೆಗೆ ಪೊಲೀಸ್ ಉದ್ಯೋಗ: ರಾಜಸ್ಥಾನ ಸರ್ಕಾರ

ಅತ್ಯಾಚಾರ ಸಂತ್ರಸ್ತೆಗೆ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಸ್ಟೇಬಲ್ ಹುದ್ದೆ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

Last Updated : May 20, 2019, 05:33 PM IST
ಅಲ್ವಾರ್ ಗ್ಯಾಂಗ್ ರೇಪ್ ಸಂತ್ರಸ್ತೆಗೆ ಪೊಲೀಸ್ ಉದ್ಯೋಗ: ರಾಜಸ್ಥಾನ ಸರ್ಕಾರ title=

ನವದೆಹಲಿ: ತೀವ್ರ ರಾಜಕೀಯದ ನಡುವೆಯೂ ಅಲ್ವಾರ್ ಗ್ಯಾಂಗ್ ರೇಪ್ ಸಂತ್ರಸ್ತೆಗೆ ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೀಡಲು ನಿರ್ಧರಿಸಿದೆ.

ವರದಿಗಳ ಪ್ರಕಾರ, ಅತ್ಯಾಚಾರ ಸಂತ್ರಸ್ತೆಗೆ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಸ್ಟೇಬಲ್ ಹುದ್ದೆ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಈ ಹಿಂದೆ ಅತ್ಯಾಚಾರ ಸೇರಿದಂತೆ ಇತರ ಅಪರಾಧಗಳಲ್ಲಿ ತೊಡಗಿದವರನ್ನು ಸೆದೆಬಡಿಯಲು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವುದಾಗಿ ಸಂತ್ರಸ್ತೆ ಹೇಳಿದ್ದರು. ಈ ಬೆನ್ನಲ್ಲೇ ರಾಜಸ್ತಾನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಏಪ್ರಿಲ್ 26ರಂದು ಮಹಿಳೆ ತನ್ನ ಗಂಡನ ಜೊತೆಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ, ಬೈಕ್​ಗಳಲ್ಲಿ ಬಂದಿದ್ದ 6 ದುಷ್ಕರ್ಮಿಗಳು ದಂಪತಿಯನ್ನು ತಡೆದು, ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಗಂಡನ ಮುಂದೆಯೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದರು. ಅಲ್ಲದೇ ಈ ಕೃತ್ಯವನ್ನ ಮೊಬೈಲ್​​ನಲ್ಲಿ ವೀಡಿಯೋ ಮಾಡಿ, ಪೊಲೀಸರಿಗೆ ವಿಷಯ ತಿಳಿಸಿದರೆ ವೀಡಿಯೋ ಶೇರ್​ ಮಾಡೋದಾಗಿ ಬೆದರಿಕೆ ಹಾಕಿದ್ದರು.

ಏಪ್ರಿಲ್ 30ರಂದು ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿತ್ತು. ಬಳಿಕ ಮೇ 2ರಂದು ಈ ಪ್ರಕರಣದ ಎಫ್​ಐಆರ್​ ದಾಖಲಿಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. 
 

Trending News