ಚುನಾವಣೆಗೂ ಮುನ್ನವೇ ʼಸಿಎಂ ಸ್ಥಾನʼದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ಅಶೋಕ್ ಗೆಹ್ಲೋಟ್..!

Rajasthan CM : ನನಗೆ ಸಿಎಂ ಸ್ಥಾನ ಎನ್ನುವುದು ದೊಡ್ಡದಲ್ಲ, ಸೋನಿಯಾ ಗಾಂಧಿಯವರು ನನಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದ್ದರು. ಅಂದಿನಿಂದ ಇಲ್ಲಿಯವರೆಗೂ 3 ಬಾರಿ ಮುಖ್ಯಮಂತ್ರಿಯಾಗಿದ್ದೇನೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

Written by - Zee Kannada News Desk | Last Updated : Sep 2, 2023, 02:11 PM IST
  • ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅಚ್ಚರಿ ಹೇಳಿಕೆ.
  • ಬೇವರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ರಾಮೀಣ ಮತ್ತು ನಗರ ಓಲಂಪಿಕ್ಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ್ ಗೆಹ್ಲೋಟ್.
  • ನನಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದ್ದ ಸೋನಿಯಾ ಗಾಂಧಿ.
ಚುನಾವಣೆಗೂ ಮುನ್ನವೇ ʼಸಿಎಂ ಸ್ಥಾನʼದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ಅಶೋಕ್ ಗೆಹ್ಲೋಟ್..! title=

Ashok Gehlot on CM post : ನನಗೆ ಸಿಎಂ ಸ್ಥಾನ ಎನ್ನುವುದು ದೊಡ್ಡದಲ್ಲ, ನನ್ನ ಅನುಭವದಿಂದ ನಾನು ಇರುವವರಗೂ ಜನ ಸೇವೆ ಮಾಡುತ್ತಿರುತ್ತೇನೆ. ನಾನು ನನ್ನ ಜೀವನದ ಎಲ್ಲಾ ಕ್ಷಣಗಳನ್ನು ನನ್ನ ರಾಜ್ಯದ ಸೇವೆ ಮಾಡುವುದರಲ್ಲೇ ಕಳೆಯುತ್ತೇನೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು.

ಶನಿವಾರ ಬೇವರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ರಾಮೀಣ ಮತ್ತು ನಗರ ಓಲಂಪಿಕ್ಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಾನು 3 ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಇದು ನನಗೆ ಅಪಾರವಾದ ಅನುಭವವನ್ನು ನೀಡಿದೆ. ನಾನು 50 ವರ್ಷಗಳ ಹಿಂದೆ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘ ಅಧ್ಯಕ್ಷನಾದ ನಂತರ ನನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದೆ. ಅನುಭವಕ್ಕೆ ಪರ್ಯಾಯವಿಲ್ಲ. ನಿಮ್ಮೆಲ್ಲರ ಆರ್ಶೀವಾದದಿಂದ ನಾನು ನಿಮ್ಮೆಲ್ಲರ ಸೇವೆ ಮಾಡುವ ಅನುಭವವನ್ನು ಹೊಂದಿದ್ದೇನೆ ಎಂದರು.

ನಾನು ಮೊದಲ ಬಾರಿ 1998 ರಲ್ಲಿ ಸಿಎಂ ಆಗಿದ್ದಾಗ ಬಿಜೆಪಿಯ ಸಿಂಗ್‌ ಶೇಖಾವತ್‌ ಅವರು ಮುಖ್ಯಮಂತ್ರಿಯಾಗಿದ್ದರು. 32 ಸೀಟುಗಳಿಂದ ಗೆದ್ದಿದ್ದ ಅವರು ನಾವು 156 ಸೀಟುಗಳಿಂದ ಗೆಲುವನ್ನು ಸಾಧಿಸಿದ್ದೆವು, ಸೋನಿಯಾ ಗಾಂಧಿಯವರು ನನಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದ್ದರು. ಅಂದಿನಿಂದ ಇಲ್ಲಿಯವರೆಗೂ 3 ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರುಗಳು ನನ್ನ ಮೇಲೆ ನಂಬಿಕೆಯನ್ನು ಇಟ್ಟಿದ್ದರು. 2 ಬಾರಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರೂ ಎಂದಿಗೂ ಕೆಲಸ ಮಾಡುವ ಧೈರ್ಯಕ್ಕೆ ಕುಂದು ಬರಲಿಲ್ಲ.

ಇದನ್ನು ಓದಿ-ಬಿ.ಎಲ್.ಸಂತೋಷ್ ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಹಾಗೂ ವಿಶ್ವಾಸ ಹೊಂದಲು ಪ್ರಯತ್ನಿಸಲಿ..!

ಸೋತರೂ ಕೂಡ ಇದ್ದ ಸ್ಥಾನದಲ್ಲಿ ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಮುಂದುವರೆದಿದ್ದೆ. 2013 ರಲ್ಲಿ ಸೋತ ನನಗೆ ಕಳೆದ ಬಾರಿ ಮತ್ತೆ ನೀವೆಲ್ಲ ನಿಮ್ಮ ಆರ್ಶೀವಾದದೊಂದಿಗೆ ನನ್ನನ್ನು ಗೆಲ್ಲಿಸಿದಿರಿ. ಕೇಂದ್ರ ಬಿಜೆಪಿ ಸರ್ಕಾರವು ನಮ್ಮ ಯೋಜನೆಗಳ ಕುರಿತಾಗಿ ಚಿಂತನೆ ನಡೆಸುತ್ತಿದೆ ಆದರೆ ಹಳೆಯ ಪಿಂಚಣಿ ಅಥವಾ 25 ಲಕ್ಷ ವಿಮೆಯ ನೀಡಲು ಸಾಧ್ಯವಾಗುತ್ತಿಲ್ಲ. ನಾವು ಉಜ್ವಲ ಯೋಜನೆಯ ಅಡಿಯಲ್ಲಿ 500ರೂ.ಗೆ ಗ್ಯಾಸ್‌ ಸಿಲಿಂಡರ್‌, ಆದರೆ ಕೇಂದ್ರ ಸರ್ಕಾರವು ಸಿಲಿಂಡರ್‌ ಬೆಲೆಯನ್ನು 200 ರೂ ಇಳಿಸಿದೆ. 

ರಾಜ್ಯ ಸರ್ಕಾರಕ್ಕೆ ಗ್ಯಾಸ್‌ ಸಿಲಿಂಡರ್‌ ಅನ್ನು 500ರೂ.ಗೆ ಕೊಡಲು ಸಾಧ್ಯವಾದರೆ ಕೇಂದ್ರ ಸರ್ಕಾರಕ್ಕೆ ಯಾಕೇ ಸಾಧ್ಯವಿಲ್ಲ ಎಂದು ನಾನು ಪ್ರಧಾನ ಮಂತ್ರಿಯವರಿಗೆ ಕೇಳಲು ಇಚ್ಛಿಸುತ್ತೇನೆ. ಉಜ್ವಲ ಯೋಜನೆ ಮೊದಲು ಪ್ರಾರಂಭಸಿದಾಗ 400 ರೂ ಬೆಲೆ ಹೊಂದಿತ್ತು ಕ್ರಮೇಣವಾಗಿ 1150 ಏರಿತು. ಕೇಂದ್ರವು ಬಡವರಿಗೆ ಅನೂಕೂಲವಾಗುವಂತೆ ಗ್ಯಾಸ್‌ ಸಿಲಿಂಡರ್ ಅನ್ನು 500 ರೂ ನೀಡಬೇಕು ಎಂದು ಪ್ರತಿಪಾದಿಸಿದರು.

ಇದನ್ನು ಓದಿ-ಶಾಸಕರು ನೋವು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ?: ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News