Weather Update: ಬಿಸಿಲಿನ ಬೇಗೆಗೆ ತಂಪೆರಲಿದ್ದಾನೆ ಮಳೆರಾಯ: ಮುಂದಿನ 2 ದಿನದಲ್ಲಿ ಈ ಭಾಗಗಳಲ್ಲಿ ವರುಣನ ಸಿಂಚನ!

Weather Update 17-02-2024: ಮುಂಬರುವ ವಾರಾಂತ್ಯದಿಂದ ಮುಂದಿನ ವಾರದ ಆರಂಭದವರೆಗೆ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ತಾಜಾ ಪಾಶ್ಚಿಮಾತ್ಯ ಅಡಚಣೆಯು ಪರಿಣಾಮ ಬೀರುವ ನಿರೀಕ್ಷೆಯಿದೆ.

Written by - Bhavishya Shetty | Last Updated : Feb 16, 2024, 07:27 PM IST
    • ದೇಶದ ಕೆಲವು ಭಾಗಗಳಲ್ಲಿ ಮಳೆರಾಯನ ಸಿಂಚನ
    • ವಾರಾಂತ್ಯದಿಂದ ಮುಂದಿನ ವಾರದ ಆರಂಭದವರೆಗೆ ಹವಾಮಾನ ಬದಲಾವಣೆ
    • ತಾಜಾ ಪಾಶ್ಚಿಮಾತ್ಯ ಅಡಚಣೆಯು ಪರಿಣಾಮ ಬೀರುವ ನಿರೀಕ್ಷೆ
Weather Update: ಬಿಸಿಲಿನ ಬೇಗೆಗೆ ತಂಪೆರಲಿದ್ದಾನೆ ಮಳೆರಾಯ: ಮುಂದಿನ 2 ದಿನದಲ್ಲಿ ಈ ಭಾಗಗಳಲ್ಲಿ ವರುಣನ ಸಿಂಚನ! title=
Rain Update

Weather Update 17-02-2024: ಪ್ರಸ್ತುತ ಚಳಿಗಾಲ ಮುಗಿಯುವ ಹಂತಕ್ಕೆ ಬಂದಿದ್ದು, ಇನ್ನೇನು ಬೇಸಿಗೆ ಕಾಲ ಶುರುವಾಗಲಿದೆ. ಆದರೆ ಈಗಿನಿಂದಲೇ ಸುಡುಬಿಸಿಲು ಜನರನ್ನು ಕಂಗಾಲಾಗಿಸಿದೆ. ಈ ಸಂದರ್ಭದಲ್ಲಿ ದೇಶದ ಕೆಲವು ಭಾಗಗಳಲ್ಲಿ ಮಳೆರಾಯನ ಸಿಂಚನವಾಗಲಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.

ಇದನ್ನೂ ಓದಿ: ತನ್ನೆಲ್ಲಾ ಸ್ಕೂಟರ್ಗಳ ಮೇಲೆ ₹25000 ರಿಯಾಯಿತಿ ಘೋಷಿಸಿ ಗ್ರಾಹಕರಿಗೆ ಭಾರಿ ಉಡುಗೊರೆ ನೀಡಿದೆ ಓಲಾ!

ದೇಶದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದಾದ ಲಡಾಖ್’ನಲ್ಲಿ ಮುಂದಿನ 2-3 ದಿನಗಳಲ್ಲಿ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ, ಜಮ್ಮು- ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶದಲ್ಲೂ ಮಳೆ ಬೀಳಲಿದೆ.  

ಸಿಕ್ಕಿಂ, ಸಬ್ ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿಯೂ ಪ್ರತ್ಯೇಕ ಮಳೆ ಬೀಳುವ ಸಾಧ್ಯತೆ ಇದೆ. ಇನ್ನೊಂದೆಡೆ ಮುಂಜಾನೆಯ ಸಮಯದಲ್ಲಿ ದಟ್ಟವಾದ ಮಂಜು ಉತ್ತರ, ಮಧ್ಯ ಮತ್ತು ಪೂರ್ವ ಭಾರತದ ಪ್ರತ್ಯೇಕ ಸ್ಥಳಗಳನ್ನು ಆವರಿಸಲಿದೆ ಎಂದು ಹೇಳಲಾಗುತ್ತಿದೆ.

ಮುಂಬರುವ ವಾರಾಂತ್ಯದಿಂದ ಮುಂದಿನ ವಾರದ ಆರಂಭದವರೆಗೆ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ತಾಜಾ ಪಾಶ್ಚಿಮಾತ್ಯ ಅಡಚಣೆಯು ಪರಿಣಾಮ ಬೀರುವ ನಿರೀಕ್ಷೆಯಿದೆ. ಆಲಿಕಲ್ಲು ಮತ್ತು ವ್ಯಾಪಕವಾದ ಮಧ್ಯಮ ಮಟ್ಟ ಮಳೆ ಅಥವಾ ಹಿಮಪಾತ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:  ವಾರದಲ್ಲಿ ಒಂದು ಲೋಟ ಕಬ್ಬಿನ ಹಾಲು… ಕುಡಿದರೆ ಸಿಗುವುದು ಈ ಕಾಯಿಲೆಗಳಿಂದ ಶಾಶ್ವತ ರಿಲೀಫ್

ಫೆಬ್ರವರಿ 18-20 ರಂದು ಹಿಮಾಚಲ ಪ್ರದೇಶ ಮತ್ತು ಫೆಬ್ರವರಿ 19 ರಂದು ಉತ್ತರಾಖಂಡದ ಮೇಲೆ ಚದುರಿದ ಮಳೆ ಅಥವಾ ಹಿಮಪಾತವಾಗಲಿದೆ. ಫೆಬ್ರವರಿ 18 ರಿಂದ 20ರವರೆಗೆ ಪಂಜಾಬ್‌’ನಲ್ಲಿ ಗುಡುಗು, ಮಿಂಚು, ಆಲಿಕಲ್ಲು ಸಹಿತ ಭಾರೀ ಗಾಳಿ ಬೀಸುವ ಸಾಧ್ಯತೆ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News