Railwire Saathi KIOSK: ಇನ್ಮುಂದೆ ರೈಲು ನಿಲ್ದಾಣಗಳಲ್ಲಿಯೂ ಕೂಡ Aadhaar Card - PAN Card ಮಾಡಿಸಬಹುದು

Railwire Saathi Common Service Center - ರೈಲು ನಿಲ್ದಾಣದಲ್ಲಿ ಪ್ರಾರಂಭವಾಗುವ 'ಸಾಮಾನ್ಯ ಸೇವಾ ಕೇಂದ್ರ (CSC) ಕೇಂದ್ರ'ದಲ್ಲಿ ನೀವು ರೈಲು, ವಿಮಾನ ಅಥವಾ ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆಧಾರ್ ಕಾರ್ಡ್  (Aadhaar Card), ಪ್ಯಾನ್ ಕಾರ್ಡ್ (PAN Card), ವೋಟರ್ ಕಾರ್ಡ್, ಮೊಬೈಲ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿ, ಆದಾಯ ತೆರಿಗೆ, ಬ್ಯಾಂಕಿಂಗ್ ಮತ್ತು ವಿಮೆ ಸಂಬಂಧಿತ ಕೆಲಸಗಳನ್ನೂ ಸಹ ನೀವು ಅಲ್ಲಿ ಮಾಡಿಸಬಹುದು

Written by - Nitin Tabib | Last Updated : Jan 8, 2022, 01:51 PM IST
  • ರೈಲು ನಿಲ್ದಾಣದಲ್ಲಿ ಪ್ರಾರಂಭವಾಗುವ 'ಸಾಮಾನ್ಯ ಸೇವಾಕೇಂದ್ರ'ದಲ್ಲಿ ನೀವು ರೈಲು, ವಿಮಾನ ಅಥವಾ ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
  • ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಕಾರ್ಡ್ ಇತ್ಯಾದಿಗಳಿಗೆ ಸಂಬಂದಿಸಿದ ಕೆಲಸಗಳನ್ನೂ ಸಹ ನೀವು ಅಲ್ಲಿ ಮಾಡಿಸಬಹುದು
Railwire Saathi KIOSK: ಇನ್ಮುಂದೆ ರೈಲು ನಿಲ್ದಾಣಗಳಲ್ಲಿಯೂ ಕೂಡ Aadhaar Card -  PAN Card ಮಾಡಿಸಬಹುದು title=
Railwire Saathi Common Service Center (File Photo)

Railwire Saathi Common Service Center: ಈಗ ನೀವು ಆಧಾರ್ ಕಾರ್ಡ್ ಅನ್ನು ಮಾಡಬೇಕು ಅಥವಾ ಅದರಲ್ಲಿ ಯಾವುದೇ ನವೀಕರಣವನ್ನು ಮಾಡಬೇಕು. ಅಥವಾ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೆ, ನಿಮ್ಮ ಹತ್ತಿರದ ರೈಲ್ವೆ ನಿಲ್ದಾಣದಲ್ಲಿಯೂ ನೀವು ಈ ಕೆಲಸವನ್ನು ಮಾಡಬಹುದು. ಏಕೆಂದರೆ ಶೀಘ್ರದಲ್ಲೇ ರೈಲು ನಿಲ್ದಾಣದಲ್ಲಿ ಸಾಮಾನ್ಯ ಸೇವಾ ಕೇಂದ್ರ (CSC) ಒದಗಿಸುವ ಸೇವೆಗಳ ಪ್ರಯೋಜನವನ್ನು ಜನರು ಪಡೆಯಲಿದ್ದಾರೆ. 

ಪ್ರಾಯೋಗಿಕವಾಗಿ ವಾರಣಾಸಿ ಸಿಟಿ ರೈಲು ನಿಲ್ದಾಣ ಮತ್ತು ಪ್ರಯಾಗ್‌ರಾಜ್ ಸಿಟಿ ರೈಲು ನಿಲ್ದಾಣದಲ್ಲಿ ಕಾಮನ್ ಸರ್ವಿಸ್ ಸೆಂಟರ್ ಅನ್ನು ಮೊದಲು ಆರಂಭಿಸಲಾಗಿದೆ.

ರೈಲ್‌ವೈರ್ ಪಾಲುದಾರ ಕಿಯೋಸ್ಕ್
ವಾರಣಾಸಿ ಮತ್ತು ಪ್ರಯಾಗ್‌ರಾಜ್ ನಂತರ, 'ಸಾಮಾನ್ಯ ಸೇವಾ ಕೇಂದ್ರ (CSC)' ನಂತಹ ಕಿಯೋಸ್ಕ್‌ಗಳು ದೇಶದ ಇತರ ರೈಲು ನಿಲ್ದಾಣಗಳಲ್ಲಿಯೂ ಪ್ರಾರಂಭವಾಗಲಿವೆ. ಈ ಕಿಯೋಸ್ಕ್‌ಗಳಿಗೆ 'ರೈಲ್‌ವೈರ್ ಸಾಥಿ ಕಿಯೋಸ್ಕ್' (Railwire Saathi KIOSK)  ಎಂದು ಹೆಸರಿಸಲಾಗಿದೆ. ಈ ಕಿಯೋಸ್ಕ್‌ಗಳನ್ನು ಸಾಮಾನ್ಯ ಸೇವಾ ಕೇಂದ್ರಗಳ ಗ್ರಾಮ ಮಟ್ಟದ ಉದ್ಯಮಿಗಳು (VLE) ನಿರ್ವಹಿಸುತ್ತಾರೆ. ಈ ಸಾಮಾನ್ಯ ಸೇವಾ ಕೇಂದ್ರ (CSC) ಕೇಂದ್ರಗಳಲ್ಲಿ ನೀವು ರೈಲು, ವಿಮಾನ ಅಥವಾ ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಕಾರ್ಡ್, ಮೊಬೈಲ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿ, ಆದಾಯ ತೆರಿಗೆ, ಬ್ಯಾಂಕಿಂಗ್ ಮತ್ತು ವಿಮೆ ಸಂಬಂಧಿತ ಕೆಲಸಗಳನ್ನೂ ಸಹ ಮಾಡಬಹುದು.

200 ರೈಲು ನಿಲ್ದಾಣಗಳಲ್ಲಿ ಸೌಲಭ್ಯ ಲಭ್ಯವಾಗಲಿದೆ
ರೈಲ್‌ಟೆಲ್  (Railtel) ಸುಮಾರು 200 ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಸೇವಾ ಕೇಂದ್ರದ (common service center)  ಕಿಯೋಸ್ಕ್‌ಗಳನ್ನು ನಿರ್ವಹಿಸುತ್ತದೆ. ಇವುಗಳಲ್ಲಿ 44 ದಕ್ಷಿಣ ಮಧ್ಯ ರೈಲ್ವೆ, 20 ಈಶಾನ್ಯ ಗಡಿ ರೈಲ್ವೆ, 13 ಪೂರ್ವ ಮಧ್ಯ ರೈಲ್ವೆ, 15 ಪಶ್ಚಿಮ ರೈಲ್ವೆ, 25 ಉತ್ತರ ರೈಲ್ವೆ, 12 ಪಶ್ಚಿಮ ಮಧ್ಯ ರೈಲ್ವೆ, 13 ಪೂರ್ವ ಕರಾವಳಿ ರೈಲ್ವೆ ಮತ್ತು 56 ಈಶಾನ್ಯ ರೈಲ್ವೆಯಲ್ಲಿವೆ.

ಈ ಯೋಜನೆಯನ್ನು CSC ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ (CSC e-Governance Sarvices India Limited) ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದೆ. ಇದರಿಂದ ರೈಲು ನಿಲ್ದಾಣಗಳಲ್ಲಿ ಸಂಚರಿಸುವ ಜನರಿಗೆ ಹೆಚ್ಚಿನ ಅನುಕೂಲವಾಗಿದೆ.

ರೈಲ್ವೇ ಸಚಿವಾಲಯದ ಸಾರ್ವಜನಿಕ ವಲಯದ ಸಂಸ್ಥೆಯಾದ ರೈಲ್‌ಟೆಲ್, ಭಾರತದಾದ್ಯಂತ ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಕಿಯೋಸ್ಕ್‌ಗಳನ್ನು (ಸ್ಟಾಲ್‌ಗಳು) ನಿರ್ವಹಿಸಲು ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು CSC ಇ-ಆಡಳಿತ ಸೇವೆಗಳು ಇಂಡಿಯಾ ಲಿಮಿಟೆಡ್ (CSC-SPV), ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದೆ.

ಇದನ್ನೂ ಓದಿ-Election Commission : ಇಂದು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ!

ಅಧಿಕಾರಿಗಳು ಏನು ಹೇಳುತ್ತಾರೆ
ರೈಲ್‌ಟೆಲ್ 6000ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ವೈ-ಫೈ ಸೇವೆಯನ್ನು ಒದಗಿಸುತ್ತದೆ. ಈ ಕುರಿತು ಮಾತನಾಡಿರುವ ರೈಲ್‌ಟೆಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪುನೀತ್ ಚಾವ್ಲಾ, ಗ್ರಾಮೀಣ ಪ್ರದೇಶದ ಜನರು ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಕೊರತೆ ಮತ್ತು ಇಂಟರ್ನೆಟ್ ಬಳಕೆಯ ಜ್ಞಾನದ ಕೊರತೆಯಿಂದಾಗಿ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಅಥವಾ ಡಿಜಿಟಲೀಕರಣ ಸೌಲಭ್ಯಗಳನ್ನು ಪಡೆಯಲು ಕಷ್ಟಪಡುತ್ತಾರೆ. ಈ Railwire Saathi KIOSK ಗ್ರಾಮೀಣ ಜನರಿಗೆ ಸಹಾಯ ಮಾಡಲು ಗ್ರಾಮೀಣ ರೈಲ್ವೆ ನಿಲ್ದಾಣಗಳಲ್ಲಿ ಈ ಅಗತ್ಯ ಡಿಜಿಟಲ್ ಸೇವೆಗಳನ್ನು ತರುತ್ತದೆ.

ಇದನ್ನೂ ಓದಿ-Ration Card ನಿಯಮದಲ್ಲಿ ಬದಲಾವಣೆ! ಇಲ್ಲದಿದ್ದರೆ ಪಡಿತರ ಪಡೆಯಲು ತಪ್ಪಿದಲ್ಲ ಸಮಸ್ಯೆ

ಈ ಬಗ್ಗೆ ಹೇಳಿಕೆ ನೀಡಿರುವ ಸಿಎಸ್‌ಸಿ-ಎಸ್‌ಪಿವಿ ವ್ಯವಸ್ಥಾಪಕ ನಿರ್ದೇಶಕ ಡಾ.ದಿನೇಶ್ ಕುಮಾರ್ ತ್ಯಾಗಿ, ದೂರದ ಹಳ್ಳಿಗಳಲ್ಲಿ ಸಂಪರ್ಕದ ಕೊರತೆಯಿಂದಾಗಿ ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸೇವೆಗಳ ಪ್ರವೇಶವು ಆಗಾಗ್ಗೆ ಅಡಚಣೆಯಾಗುತ್ತದೆ. ರೈಲು ನಿಲ್ದಾಣಗಳಲ್ಲಿ ರೈಲ್‌ಟೆಲ್‌ನ ವೈ-ಫೈ ಮತ್ತು ಕಿಯೋಸ್ಕ್ (ಕಿಯೋಸ್ಕ್) ಮೂಲಸೌಕರ್ಯಗಳ ಲಭ್ಯತೆಯೊಂದಿಗೆ, ನಮ್ಮ ಗ್ರಾಮ ಮಟ್ಟದ ಉದ್ಯಮಿಗಳು ನಮ್ಮ ಸೇವೆಗಳನ್ನು ಜನಸಾಮಾನ್ಯರಿಗೆ ಕೊಂಡೊಯ್ಯಲು ಸಾಧ್ಯವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ-Anti-Coronavirus Vaccine Booster Dose: ಇಂದಿನಿಂದ ಪ್ರಿಕಾಶನ್ ಡೋಸ್ ಗಾಗಿ ಅಪಾಯಿಂಟ್ಮೆಂಟ್ ಪ್ರಕ್ರಿಯೆ ಆರಂಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News