ರೈಲ್ವೆಯಲ್ಲಿ 90 ಸಾವಿರ ಅಲ್ಲ, 1 ಲಕ್ಷದ 10 ಸಾವಿರ ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಲು ಎರಡೇ ದಿನ ಬಾಕಿ

ಫೆಬ್ರವರಿಯಲ್ಲಿ ರೈಲ್ವೆ ನೇಮಕಾತಿ ಮಂಡಳಿಯಿಂದ ಜಾರಿಗೊಳಿಸಿದ ಜಾಹೀರಾತಿನ ಪ್ರಕಾರ, ಭಾರತೀಯ ರೈಲ್ವೇ 90,000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

Last Updated : Mar 29, 2018, 04:57 PM IST
ರೈಲ್ವೆಯಲ್ಲಿ 90 ಸಾವಿರ ಅಲ್ಲ, 1 ಲಕ್ಷದ 10 ಸಾವಿರ ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಲು ಎರಡೇ ದಿನ ಬಾಕಿ title=

ನವದೆಹಲಿ: ಫೆಬ್ರವರಿಯಲ್ಲಿ ರೈಲ್ವೆ ನೇಮಕಾತಿ ಮಂಡಳಿಯಿಂದ ಜಾರಿಗೊಳಿಸಿದ ಜಾಹೀರಾತಿನ ಪ್ರಕಾರ, ಭಾರತೀಯ ರೈಲ್ವೇ 90,000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆದರೆ ಈಗ ರೈಲ್ವೆಯಲ್ಲಿ 90 ಸಾವಿರ ಅಲ್ಲ, 1 ಲಕ್ಷದ 10 ಸಾವಿರ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಮಾಹಿತಿಯನ್ನು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ತಮ್ಮ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಭಾರತೀಯ ರೈಲ್ವೆಯಲ್ಲಿ  ಈಗ 1 ಲಕ್ಷ 10 ಸಾವಿರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಲಾಗಿದೆ.

ರೈಲ್ವೆಯಲ್ಲಿ 90,000 ಹುದ್ದೆಗಳಿಗೆ ನೇಮಕಾತಿ, ಇಲ್ಲಿದೆ ಮಾಹಿತಿ

ಎಲ್ 2 ನಲ್ಲಿ 10 ಸಾವಿರ ಹುದ್ದೆ
ರೈಲ್ವೆ ಮಂತ್ರಿ ಹಂಚಿಕೊಂಡಿರುವ ಪೋಸ್ಟ್ನ ಪ್ರಕಾರ, RPF ಮತ್ತು RPSF ನಲ್ಲಿ 9,000 ಕ್ಕಿಂತಲೂ ಹೆಚ್ಚಿನ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಎಲ್ 2 ನಲ್ಲಿ 10 ಸಾವಿರಕ್ಕೂ ಹೆಚ್ಚಿನ ಉದ್ಯೋಗಾವಕಾಶ ಲಭ್ಯವಿದೆ. RPF ಮತ್ತು RPSF ಗಾಗಿ ಮೇ 19-25, 2018 ರಲ್ಲಿ ಎಂಪ್ಲಾಯ್ಮೆಂಟ್ ನ್ಯೂಸ್ನಲ್ಲಿ ಪ್ರಕಟಗೊಳ್ಳಲಿದೆ. ಈ ನಿಟ್ಟಿನಲ್ಲಿ, ಇಂಡಿಯನ್ ರೈಲ್ವೆಯ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ.

ರೈಲ್ವೆಯ ಈ 7 ನಿಯಮಗಳಲ್ಲಿ ಬದಲಾವಣೆ, ಅರ್ಜಿ ಭರ್ತಿ ಮಾಡುವ ಮುನ್ನ ಇದನ್ನು ತಿಳಿಯುವುದು ಅವಶ್ಯಕ

ಮಹಿಳೆಯರಿಗೆ ಕಾನ್ಸ್ಟೇಬಲ್ ಹುದ್ದೆ
ಮಾಧ್ಯಮ ವರದಿಗಳ ಪ್ರಕಾರ, ರೈಲ್ವೇ ಸಂರಕ್ಷಣಾ ಪಡೆದಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಕಾನ್ಸ್ಟೇಬಲ್ಗಳ ಮತ್ತು ಉಪ-ನಿರೀಕ್ಷಕರ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನ್ಸ್ಟೇಬಲ್ಗೆ, 10 ನೇ ತರಗತಿಯಲ್ಲಿ ಉತ್ತೀರ್ಣ ಮತ್ತು ಸಬ್-ಇನ್ಸ್ಪೆಕ್ಟರ್ ಹುದ್ದೆಗೆ ಪದವೀಧರರು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯ ಪೋಸ್ಟ್ಗಳನ್ನು ಕಾಯ್ದಿರಿಸಲಾಗಿದೆ. ಜೂನ್ 1 ಮತ್ತು ಜೂನ್ 30 ರ ನಡುವೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ವರದಿಗಳಿವೆ.

90 ಸಾವಿರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆ
ಕಳೆದ ಕೆಲ ದಿನಗಳಲ್ಲಿ ಗ್ರೂಪ್ ಡಿ ಮತ್ತು ಗ್ರೂಪ್ ಸಿ (ತಂತ್ರಜ್ಞ ಮತ್ತು ಸಹಾಯಕ ಲೋಕೋ ಪೈಲಟ್) 90 ಸಾವಿರ ಹುದ್ದೆಗಳಲ್ಲಿ ರೈಲ್ವೆ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 31, 2018 ಆಗಿದೆ. ಸುಮಾರು 20 ದಶಲಕ್ಷ ಯುವಕರು ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸಹಾಯಕ ಲೊಕೊ ಪೈಲಟ್ ಮತ್ತು ತಂತ್ರಜ್ಞರ ಹುದ್ದೆಗಾಗಿ 5 ಮಿಲಿಯನ್ಗೂ ಹೆಚ್ಚು ಆನ್ಲೈನ್ ಅರ್ಜಿಯನ್ನು ಸ್ವೀಕರಿಸಲಾಗಿದೆ. ಇದು ಇಲ್ಲಿಯವರೆಗೆ ರೈಲ್ವೆಗೆ ದೊಡ್ಡ ನೇಮಕಾತಿ ಪ್ರಕ್ರಿಯೆಯಾಗಿದೆ.

ಗ್ರೂಪ್ ಡಿ ಹುದ್ದೆಗೆ ವಯಸ್ಸಿನ ಮಿತಿಯಲ್ಲಿ ಹೆಚ್ಚಳ
ಆರ್ಆರ್ಬಿ ಗ್ರೂಪ್ ಡಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು 2 ವರ್ಷ ಹೆಚ್ಚಿಸಿ, 30 ವರ್ಷಗಳವರೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅನುವುಮಾಡಿಕೊಟ್ಟಿದೆ. ಲೊಕೊ ಪೈಲಟ್ ಮತ್ತು ತಂತ್ರಜ್ಞನಿಗೆ 30 ವರ್ಷ ವಯಸ್ಸಿನ ಮಿತಿ ಇದೆ. ಲೆವೆಲ್-1 ಪೋಸ್ಟ್ಗೆ ವಯಸ್ಸಿನ ಮಿತಿಯನ್ನು 2 ವರ್ಷ ಹೆಚ್ಚಿಸುವ ಮೂಲಕ 33 ವರ್ಷಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಹೊಸ ನಿಯಮಗಳ ಪ್ರಕಾರ, ITI ಪ್ರಮಾಣಪತ್ರದ ಕಡ್ಡಾಯ ಅಗತ್ಯವನ್ನು ನೇಮಕಾತಿ ಪರೀಕ್ಷೆಗಾಗಿ ರದ್ದುಗೊಳಿಸಲಾಗಿದೆ. 

ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಸಲಾಗುತ್ತಿದ್ದ ರೈಲ್ವೆ ಪರೀಕ್ಷೆಯನ್ನು ಮೊದಲ ಬಾರಿಗೆ 15 ಭಾಷೆಗಳಲ್ಲಿ ನಡೆಸಲಾಗುತ್ತಿದೆ.

Trending News