BUDGET EXCLUSIVE: ರೈಲ್ವೇ ಬಜೆಟ್ ಮಂತ್ರ 'ಸುರಕ್ಷಿತ, ವೇಗ, ಉತ್ತಮ'

ಮೂಲಗಳ ಪ್ರಕಾರ, ಮೂರು ಪ್ರಮುಖ ವಿಷಯಗಳ ಮೇಲೆ ರೈಲ್ವೆ ಬಜೆಟ್ ಕೇಂದ್ರೀಕೃತವಾಗಿದೆ.

Last Updated : Jan 30, 2019, 04:39 PM IST
BUDGET EXCLUSIVE: ರೈಲ್ವೇ ಬಜೆಟ್ ಮಂತ್ರ 'ಸುರಕ್ಷಿತ, ವೇಗ, ಉತ್ತಮ' title=

ನವದೆಹಲಿ: ಈ ವರ್ಷದ ರೈಲ್ವೆ ಬಜೆಟ್ನಲ್ಲಿ ಮೂರು ಪ್ರಮುಖ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರ ಟ್ಯಾಗ್ಲೈನ್ 'ಸುರಕ್ಷಿತ, ವೇಗ, ಉತ್ತಮ' ಆಗಿದೆ. ಬಜೆಟ್ನಲ್ಲಿ ರೈಲ್ವೆಗೆ ಹಂಚಿಕೆ ಮಾಡಲಾಗುವ ಹಣವನ್ನು ಈ ಮೂರು ವಿಷಯಗಳಿಗೆ ಖರ್ಚು ಮಾಡಲಾಗುವುದು. ಹಣವನ್ನು ಹೇಗೆ ಖರ್ಚು ಮಾಡಬೇಕೆಂಬುದಕ್ಕೆ ಸಂಪೂರ್ಣ ಸಿದ್ಧತೆ ನಡೆದಿದೆ. Zee Business ಗೆ ಲಭಿಸಿರುವ EXCLUSIVE ಮಾಹಿತಿ ಪ್ರಕಾರ ಎಲ್ಲಾ ಮೂರು ಹಂತಗಳ ವಿಶೇಷತೆಯನ್ನು ನಾವು ತಿಳಿಸುತ್ತೇವೆ.

1. ಸುರಕ್ಷತಾ ವ್ಯವಸ್ಥೆ:
ವಿವಿಧ ವರದಿಗಳ ಪ್ರಕಾರ, ಪ್ರತಿ ವರ್ಷ ಸರಾಸರಿ 600 ರಿಂದ 800 ಸಣ್ಣ ಮತ್ತು ದೊಡ್ಡ ರೈಲು ಅಪಘಾತಗಳು ಸಂಭವಿಸಿರುವ ಬಗ್ಗೆ ವರದಿಗಳಿವೆ. ಆದ್ದರಿಂದ, ಮುಂಬರುವ ರೈಲ್ವೆ ಬಜೆಟ್ ಭಾರತೀಯ ರೈಲ್ವೇಯನ್ನು ಸಾರಿಗೆಯ ಸುರಕ್ಷಿತ ಮೋಡ್ ಮಾಡುವ ಬಗ್ಗೆ ಹೆಚ್ಚು ಗಮನಹರಿಸುತ್ತದೆ ಎಂದು ಮೂಲಗಳು ಹೇಳಿವೆ. ರೈಲು ಸಂರಕ್ಷಣಾ ಎಚ್ಚರಿಕೆ ವ್ಯವಸ್ಥೆ, ಜಿಪಿಎಸ್ ರೈಲು ಟ್ರ್ಯಾಕ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ, ಮುಂದುವರಿದ ಮೆಷಿನರಿ ಜೊತೆ ಟ್ರ್ಯಾಕ್ ನಿರ್ವಹಣೆಯನ್ನು ಸುಧಾರಿಸುವುದು ಹಗೆ ಎಂಬುದರ ಬಗ್ಗೆ ರೈಲ್ವೇ ಗಮನ ಹರಿಸಲಿದೆ. 

2. ರೈಲುಗಳ ಸರಾಸರಿ ವೇಗ ಹೆಚ್ಚಳ:
ಎರಡನೆಯ ಹಂತವೆಂದರೆ ಅಸ್ತಿತ್ವದಲ್ಲಿರುವ ರೈಲುಗಳ ವೇಗವನ್ನು ಹೆಚ್ಚಿಸುವುದು, ಇದು ರೈಲುಮಾರ್ಗವನ್ನು ಉತ್ತಮಗೊಳಿಸುತ್ತದೆ. ಈ ಹಂತದಲ್ಲಿ ರೈಲ್ವೆಗಳು ಅಸ್ತಿತ್ವದಲ್ಲಿರುವ ರೈಲುಗಳ ವೇಗವನ್ನು ಹೆಚ್ಚಿಸಲು ಒತ್ತಾಯಿಸುತ್ತದೆ ಮತ್ತು ಕೆಲವು ಹೊಸ ಅರೆ-ವೇಗದ ರೈಲುಗಳನ್ನು ಪ್ರಾರಂಭಿಸುತ್ತವೆ. ಮೂಲಗಳ ಪ್ರಕಾರ, ಹೆಚ್ಚು ಹೆಚ್ಚು ಟ್ರ್ಯಾಕ್ಗಳಲ್ಲಿ ವಿದ್ಯುನ್ಮಾನೀಕರಣವನ್ನು ಪಡೆದ ನಂತರ, ಇದು ಅನೇಕ ರೈಲುಗಳ ವೇಗವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಇದಲ್ಲದೆ, ರೈಲ್ವೇ ಕೂಡ ಹೆಚ್ಚಿನ ವೇಗ ಕಾರಿಡಾರ್ ಹೊಂದಿರುತ್ತದೆ. ರೈಲ್ವೇಸ್ ಭಾರತೀಯ ರೈಲ್ವೆಯ 'ವೇಗದ' ಟ್ಯಾಗ್ ಅನ್ನು ಬಲಪಡಿಸಲು ಪ್ರಯತ್ನಿಸಿದ್ದಾರೆ, ಹೆಚ್ಚಿದ ಬಜೆಟ್ ಅಲೋಕೇಶನ್ನೊಂದಿಗೆ ಹೈ ಸ್ಪೀಡ್ ಕಾರಿಡಾರ್ ಕೆಲಸವನ್ನು ತ್ವರಿತಗೊಳಿಸಲಾಗುವುದು ಎನ್ನಲಾಗಿದೆ.

3. ಉತ್ತಮ ಸೇವೆ:
ರೈಲ್ವೆ ಬಜೆಟ್ನಲ್ಲಿ ಮೂರನೆಯದಾಗಿ ಅಸ್ತಿತ್ವದಲ್ಲಿರುವ ಭಾರತೀಯ ರೈಲ್ವೇಯನ್ನು ಉತ್ತಮಗೊಳಿಸಲು ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ, ಪ್ರಯಾಣಿಕರಿಗೆ ಅಗತ್ಯ ಸೌಕರ್ಯಗಳನ್ನು ಹೆಚ್ಚಿಸಲು ರೈಲ್ವೇ ಇಲಾಖೆ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಎಸ್ಸಲೇಟರ್ಸ್, ಲಿಫ್ಟ್ಸ್, ವೈ-ಫೈ, ವಿಕಲಚೇತನ ಸ್ನೇಹಿ ರೀತಿಯ ಪ್ರಯಾಣಿಕ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕ ಸ್ನೇಹಿ ರೈಲ್ವೆ ನಿಲ್ದಾಣಗಳನ್ನಾಗಿ ಮಾಡುವುದು ರೈಲ್ವೇಯ ಉದ್ದೇಶ.
 

Trending News