RailTel New Prepaid Plans: ಕೇವಲ 20 ರೂ.ಗಳಲ್ಲಿ 10 GB ಡೇಟಾ ಜೊತೆಗೆ High Speed Internet

RailTel New Prepaid Plans - ರೈಲ್ವೆ ನಿಲ್ದಾಣಗಳಲ್ಲಿ ನೀವು ಹಲವು ಬಾರಿ ಉಚಿತ ವೈಫೈ (Wifi) ಸೇವೆ ಬಳಸಿರಬಹುದು. ರೈಲ್ವೆಗೆ (Indian Railways) ವೈಫೈ ಒದಗಿಸುವ ಕಂಪನಿಯಾದ RailTel ಹಲವು ಪ್ರಿಪೇಯ್ಡ್ ವೈ-ಫೈ ಯೋಜನೆಗಳನ್ನು ಬಿಡುಗಡೆ ಮಾಡಿದೆ. 

Written by - Nitin Tabib | Last Updated : Mar 5, 2021, 06:11 PM IST
  • ರೈಲು ನಿಲ್ದಾಣಗಳಲ್ಲಿ ನೀವು ಹಲವು ಬಾರಿ ಉಚಿತ ವೈ-ಫೈ ಬಳಸಿರಬಹುದು.
  • ಈ ಉಚಿತ ಸೇವೆ ನೀಡುವ RailTel ನಿಂದ ಅಗ್ಗದ ಪ್ರೀ-ಪೇಡ್ ಪ್ಲಾನ್ ಗಳ ಘೋಷಣೆ.
  • 10ರೂ.ಗಳಿಂದ ಆರಂಭವಾಗುವ ಈ ಪ್ಲಾನ್ ಗಳಲ್ಲಿ ನೀವು ಪಾವತಿಸುವ ಹಣಕ್ಕೆ ತಕ್ಕಂತೆ ಇಂಟರ್ನೆಟ್ ಸಿಗಲಿದೆ.
RailTel New Prepaid Plans: ಕೇವಲ 20 ರೂ.ಗಳಲ್ಲಿ 10 GB ಡೇಟಾ ಜೊತೆಗೆ High Speed Internet title=
RailTel New Prepaid Plans (File Photo)

ನವದೆಹಲಿ: RailTel New Prepaid Plans - ರೈಲ್ವೆ ನಿಲ್ದಾಣಗಳಲ್ಲಿ ನೀವು ಹಲವು ಬಾರಿ ಉಚಿತ ವೈಫೈ (Wifi) ಸೇವೆ ಬಳಸಿರಬಹುದು. ರೈಲ್ವೆಗೆ (Indian Railways) ವೈಫೈ ಒದಗಿಸುವ ಕಂಪನಿಯಾದ RailTel ಹಲವು ಪ್ರಿಪೇಯ್ಡ್ ವೈ-ಫೈ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ನೀವು ದೇಶದ 4,000 ರೈಲ್ವೆ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಪಾವತಿ ಮೂಲಕ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು (High Speed Internet) ಬಳಸಲು ಸಾಧ್ಯವಾಗಲಿದೆ. 10 ರೂ.ಗಳಿಂದ ಪ್ರಾರಂಭವಾಗುವ ಈ ಪ್ರೀ ಪೇಡ್ ಯೋಜನಗಳಲ್ಲಿ, ನಿಮಗೆ ನೀವು ಪಾವತಿಸಿದ ಹಣಕ್ಕೆ ಅನುಗುಣವಾಗಿ  ಡೇಟಾ ನೀಡಲಾಗುವುದು, ಇದರಲ್ಲಿ 34Mbpsವರೆಗಿನ ವೇಗ ಲಭ್ಯವಿರಲಿದೆ.

ರೈಲ್ ಟೆಲ್ ಈಗಾಗಲೇ ದೇಶದ ಸುಮಾರು 5950 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುತ್ತಿದೆ. ಯಾವುದೇ ರೈಲು ಪ್ರಯಾಣಿಕ ತಮ್ಮ ಸ್ಮಾರ್ಟ್ ಫೋನ್ ಮೂಲಕ ಈ ಸೇವೆಯನ್ನು ಆನಂದಿಸಬಹುದು. ಇದಕ್ಕಾಗಿ ಅವರು ತಮ್ಮ ಮೊಬೈಲ್ ಗೆ ಬರುವ OTP ಅನ್ನು ಮಾತ್ರ ವರಿಫೈ ಮಾಡಬೇಕು. ನ್ಯೂಸ್ ಏಜೆನ್ಸಿ PTI ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ 'ನೂತನ ಪ್ರೀಪೇಡ್ ಯೋಜನೆಯ ಅಡಿಯಲ್ಲಿ ಯಾತ್ರಿಗಳು ನಿತ್ಯ 30 ನಿಮಿಷಗಳ ಅವಧಿಗೆ 1MBPS ಸ್ಪೀಡ್ ನಲ್ಲಿ ಇಂಟರ್ ನೆಟ್ (High Speed Internet) ಉಪಯೋಗಿಸಬಹುದು. ಆದರೆ, ಒಂದು ವೇಳೆ ಯಾತ್ರಿಗಳು 34 MBPS ವೇಗದಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಬಳಸಲು ಬಯಸುತ್ತಿದ್ದರೆ. ಕಡಿಮೆ ಬೆಲೆಯ ಯಾವುದೇ ಒಂದು ಪ್ಲಾನ್ ಗೆ ಹಣ ಪಾವತಿಸಬೇಕು.

ಇದನ್ನೂ ಓದಿ-ರೈಲು ಯಾತ್ರಿಗಳಿಗೆ ಕಹಿ ಸುದ್ದಿ ಪ್ರಕಟಿಸಿದ Google

RailTel Prepaid Planಗಳು ಈ ಕೆಳಗಿನಂತಿವೆ
- 10 ರೂಪಾಯಿಗೆ ಒಂದು ದಿನಕ್ಕೆ 5 ಜಿಬಿ
- 15 ರೂಪಾಯಿಗೆ ಒಂದು ದಿನಕ್ಕೆ 10 ಜಿಬಿ
- 20 ರೂಪಾಯಿಗೆ ಐದು ದಿನಗಳವರೆಗೆ 10 ಜಿಬಿ
- 30 ರೂಪಾಯಿಗೆ ಐದು ದಿನಗಳವರೆಗೆ 20 ಜಿಬಿ
- 40 ರೂಪಾಯಿಗೆ ಹತ್ತು ದಿನಗಳವರೆಗೆ 20 ಜಿಬಿ
- 50 ರೂಪಾಯಿಗೆ ಹತ್ತು ದಿನಗಳವರೆಗೆ 30 ಜಿಬಿ
- 70 ರೂಪಾಯಿಗೆ 30 ದಿನಗಳವರೆಗೆ 60 ಜಿಬಿ

ಇದನ್ನೂ ಓದಿ-ಇನ್ಮುಂದೆ ನೆಟ್ವರ್ಕ್ ಇಲ್ಲದಿದ್ದರೂ ಕೂಡ ರೈಲುಗಳಲ್ಲಿ ಸಿಗಲಿದೆ ಈ ಸೌಲಭ್ಯ

ಆನ್ಲೈನ್ ನಲ್ಲಿ ಪ್ಲಾನ್ ಖರೀದಿಸಬಹುದು
ಯಾವುದೇ ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳುವ ರೀತಿಯಲ್ಲಿ ಈ ಡೇಟಾ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು RailTel CMD ಪುನೀತ್ ಚಾವ್ಲಾ ಹೇಳಿದ್ದಾರೆ. ಪ್ರಿಪೇಯ್ಡ್ ಪಾವತಿಗಾಗಿ ನೆಟ್-ಬ್ಯಾಂಕಿಂಗ್, ಇ-ವ್ಯಾಲೆಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದು. ಇವುಗಳನ್ನು ನೀವು ಆನ್‌ಲೈನ್‌ನಲ್ಲಿಯೂ ಕೂಡ ಖರೀದಿಸಬಹುದು. ಕೋವಿಡ್ -19 ಗೂ ಮೊದಲಿನಿಂದಲೂ ಪ್ರತಿ ತಿಂಗಳು ಸುಮಾರು ಮೂರು ಕೋಟಿ ಗ್ರಾಹಕರು ಈ ಯೋಜನೆಯನ್ನು ಬಳಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪರಿಸ್ಥಿತಿ ಸಾಮಾನ್ಯವಾಗಿದ್ದರೆ ಮತ್ತು ಪ್ರಯಾಣಿಕರ ಸಂಖ್ಯೆ ಮೊದಲಿನಂತೆಯೇ ಇದ್ದರೆ ಪ್ರಿಪೇಯ್ಡ್ ವೈಫೈ ಸೇವೆಯಿಂದ ವಾರ್ಷಿಕ ಆದಾಯ 10-15 ಕೋಟಿ ರೂ. ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- ವಿಶ್ವದ ಅತಿದೊಡ್ಡ Wi-Fi ನೆಟ್‌ವರ್ಕ್ ಹೊಂದಿರುವ ಭಾರತೀಯ ರೈಲ್ವೆಯಿಂದ ಸಿಗಲಿದೆ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News