ರಾಯಗಡ್: ಮಹಾರಾಷ್ಟ್ರದ ರಾಯಗಡ್ (Raigad) ಜಿಲ್ಲೆಯ ಮಹಾದ್ ಪ್ರದೇಶದಲ್ಲಿ ಸೋಮವಾರ ಸಂಜೆ ಬಹುಮಹಡಿ ಕಟ್ಟಡ ಕುಸಿದಿದೆ. ಅಪಘಾತದಲ್ಲಿ ಒಟ್ಟು 70-80 ಜನರನ್ನು ಅವಶೇಷಗಳ ಕೆಳಗೆ ಸಿಲುಕಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಎನ್‌ಡಿಆರ್‌ಎಫ್ (NDRF) ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ತಲುಪಿದವು.
ಇತ್ತೀಚಿನ ಮಾಹಿತಿಯ ಪ್ರಕಾರ, 50-60 ಜನರನ್ನು ಅವಶೇಷಗಳಿಂದ ರಕ್ಷಿಸಲಾಗಿದೆ. ಆದಾಗ್ಯೂ ಇನ್ನೂ 20-25 ಜನರು ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವುದನ್ನು ದೃಢಪಡಿಸಲಾಗಿದೆ.
ರಾಯಗಡ್‌ನ ಐದು ಅಂತಸ್ತಿನ ಕಟ್ಟಡದಲ್ಲಿ 40 ಕುಟುಂಬಗಳು ವಾಸಿಸುತ್ತಿದ್ದವು. ಘಟನೆಗೆ ಸ್ವಲ್ಪ ಮೊದಲು 20 ರಿಂದ 25 ಕುಟುಂಬ ಸದಸ್ಯರು ಕಟ್ಟಡದಿಂದ ಹೊರಗೆ ಬಂದಿದ್ದರು. ಆದರೆ ಕೆಲವರು ಇನ್ನೂ ಕಟ್ಟಡದಲ್ಲಿಯೇ ಇದ್ದರು ಎನ್ನಲಾಗಿದೆ.
ಪ್ರಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ :
ಕಟ್ಟಡವು ಸುಮಾರು 10 ವರ್ಷ ಹಳೆಯದಾಗಿತ್ತು. ಈವರೆಗೆ 50-60 ಜನರನ್ನು ಅವಶೇಷಗಳಿಂದ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಅಪಘಾತದ ಮಾಹಿತಿ ಪಡೆದ ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು ಅದಿತಿ ತತ್ಕರೆ ಮತ್ತು ಏಕನಾಥ ಶಿಂಧೆ ಸ್ಥಳಕ್ಕೆ ಭೇಟಿ ನೀಡಿದರು. ಇನ್ನೂ 20 ರಿಂದ 25 ಜನರು ಕಾಣೆಯಾಗಿದ್ದಾರೆ. ಎನ್‌ಡಿಆರ್‌ಎಫ್‌ನ 3 ತಂಡಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ ಎಂದು ಮಾಹಿತಿ ನೀಡಿದರು.
ಗೃಹ ಸಚಿವ ಅಮಿತ್ ಶಾ (Amit Shah) ರಾಯಗಡ್ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು ಎನ್‌ಡಿಆರ್‌ಎಫ್ ಡಿಜಿ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.
The collapse of a building in Raigad, Maharashtra is very tragic. Have spoken to DG @NDRFHQ to provide all possible assistance, teams are on the way and will be assisting with the rescue operations as soon as possible. Praying for everyone’s safety.
— Amit Shah (@AmitShah) August 24, 2020