ಮಹಾತ್ಮ ಗಾಂಧಿ ಸಮಾಧಿಯ ಮೇಲೆ ಮಾನಸಸರೋವರದ ನೀರು ಹಾಕಿದ ರಾಹುಲ್

ಕಳೆದ ವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಶ್ ಮಾನಸರೋವರ ಪ್ರವಾಸ ಕೈಗೊಂಡಿದ್ದರು.

Last Updated : Sep 10, 2018, 11:41 AM IST
ಮಹಾತ್ಮ ಗಾಂಧಿ ಸಮಾಧಿಯ ಮೇಲೆ ಮಾನಸಸರೋವರದ ನೀರು ಹಾಕಿದ ರಾಹುಲ್ title=

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವ ವಹಿಸಿದ್ದಾರೆ. ಸೋಮವಾರ, ಕೈಲಾಶ್ ಮಾನಸರೋವರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ದೆಹಲಿಗೆ ಹಿಂದಿರುಗಿದ ನಂತರ ಇಂದು ರಾಜ್ಘಾಟ್ಗೆ  ತೆರಳಿ ಮಹಾತ್ಮ ಗಾಂಧಿಯವರ ಸಮಾಧಿಗೆ ಗೌರವಾರ್ಪಣೆ ಸಲ್ಲಿಸಿದರು.

ಅದೇ ಸಮಯದಲ್ಲಿ, ಅವರು ಕೈಲಾಶ್ ಮಾನಸರೋವರದಿಂದ ತಂದ ಜಲವನ್ನು ಸಮಾಧಿ ಮೇಲೆ ಹಾಕಿದರು. ಒಂದು ಬಾಟಲಿನಲ್ಲಿ ಈ ನೀರನ್ನು ರಾಹುಲ್ ತನ್ನ ಕುತ್ರಾದ ಕಿಸೆಯಲ್ಲಿಟ್ಟು ತಂದಿದ್ದರು. 

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಪ್ರತಿಭಟಿಸಿ ಇಂದು ಭಾರತ ಬಂದ್ ಗೆ ಕರೆ ನೀಡಲಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಗೆ 21 ವಿರೋಧ ಪಕ್ಷಗಳ ಬೆಂಬಲ ದೊರೆತಿದೆ. 

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ರಾಜ್ಘಾಟ್ ನಿಂದ ರಾಮ್ ಲೀಲಾ ಮೈದಾನಕ್ಕೆ ತೆರಳಿದರು. ಅಲ್ಲಿ ಅವರು ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿದ್ದಾರೆ.

Trending News