ನವದೆಹಲಿ: ರಾಹುಲ್ ಗಾಂಧಿ ತಮ್ಮ ವಿದೇಶ ಪ್ರವಾಸದ ವಿವರಗಳು ಮತ್ತು ಉದ್ದೇಶದ ಬಗ್ಗೆ ಸಂಸತ್ತಿಗೆ ತಿಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ವಿದೇಶದಲ್ಲಿನ ಈ ರಾಹುಲ್ ಗಾಂಧಿಯವರ ಐಷಾರಾಮಿ ಪ್ರವಾಸಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದೆ.
A lot of doubts are rising:
Who is funding his trips?
What is the purpose of his trips?
Is there any motivation which is not disclosed?: Shri @GVLNRAO https://t.co/m7rMPiFiCh
— BJP (@BJP4India) October 31, 2019
'ನಾವು ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸಗಳ ವಿವರಗಳನ್ನು ಕೋರುತ್ತೇವೆ. ಅವರ ಪ್ರತಿ ಭೇಟಿಯ ಉದ್ದೇಶ ಮತ್ತು ಪ್ರತಿ ಪ್ರವಾಸದ ಹಣಕಾಸು ಎಲ್ಲಿಂದ ಬರುತ್ತಿದೆ ಎಂಬುದನ್ನು ವಿವರಿಸಬೇಕು' ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಮಾಧ್ಯಮಗಳನ್ನು ಉದ್ದೇಶಿಸಿ ಒತ್ತಾಯಿಸಿದರು. ರಾಹುಲ್ ಗಾಂಧಿ ಪ್ರಸ್ತುತ ವಿದೇಶದಲ್ಲಿ ಧ್ಯಾನದ ಪ್ರವಾಸದಲ್ಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ. ಈ ತಿಂಗಳ ಆರಂಭದಲ್ಲಿಯೂ ಅವರು ವಿದೇಶಕ್ಕೆ ಪ್ರಯಾಣಿಸಿದ್ದರು.
What is the great secrecy about Rahul Gandhi that he cannot inform the Parliament? No such information has been provided to the LS Secretariat.
We demand that Mr. Gandhi conforms to the norms and discloses the location and purpose of his travels: Shri @GVLNRAO pic.twitter.com/ByuGFyXp00
— BJP (@BJP4India) October 31, 2019
'ರಾಹುಲ್ ಗಾಂಧಿ ಅವರು ಲೋಕಸಭಾ ಕಾರ್ಯದರ್ಶಿಗೆ ತಿಳಿಸಲು ಸಾಧ್ಯವಾಗದ ದೊಡ್ಡ ರಹಸ್ಯವೇನು? ವಿದೇಶದಲ್ಲಿ ಅವರ ಐಷಾರಾಮಿ ಪ್ರವಾಸಗಳಿಗೆ ಅವರು ಹೇಗೆ ಹಣ ನೀಡುತ್ತಾರೆ? ಸಾರ್ವಜನಿಕ ಪ್ರತಿನಿಧಿಯಾಗಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾಗಿ, ಅವರು ರಹಸ್ಯದಿಂದ ಮುಚ್ಚಿಹೋಗುವ ಬದಲು ವಿವರಗಳನ್ನು ಬಹಿರಂಗಪಡಿಸಬೇಕಿದೆ ಎಂದು 'ರಾವ್ ಹೇಳಿದರು. ರಾಹುಲ್ ಗಾಂಧಿ ಕಳೆದ ಐದು ವರ್ಷಗಳಲ್ಲಿ 16 ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಅವರು ಹೇಳಿದರು.