Rahul Gandhi Flying kiss : ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿ ಕುರಿತು ಲೋಕಸಭೆಯಲ್ಲಿ ವಾದ-ಪ್ರತಿವಾದಗಳು ಮುಂದುವರಿದಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ. ಮಣಿಪುರವನ್ನು ಮಾತ್ರ ಕೊಲ್ಲಲಾಗಿಲ್ಲ, ಮಣಿಪುರದಲ್ಲಿ ಭಾರತಮಾತೆಯನ್ನು ಕೊಲ್ಲಲಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.
ಇನ್ನೂ ಮಣಿಪುರಕ್ಕೆ ಭೇಟಿ ನೀಡದ ಪ್ರದಾನಿ ಮೋದಿ ಅವರು ಮಣಿಪುರವನ್ನು ದೇಶದ ಅವಿಭಾಜ್ಯ ಅಂಗವಾಗಿ ನೋಡುತ್ತಿಲ್ಲ ಎಂದು ಹೇಳಿದ್ದಾರೆ. ಬಳಿಕ ಗೃಹ ಸಚಿವ ಅಮಿತ್ ಶಾ ಹಲವು ಅಂಶಗಳನ್ನು ವಿವರಿಸಿದರು. ಮಣಿಪುರದ ಘಟನೆಗಳು ಅತ್ಯಂತ ಕೆಟ್ಟದಾಗಿದೆ.. ಇನ್ನೂ ರಾಜಕೀಯಗೊಳಿಸುವುದು ಅಪಾಯಕಾರಿ ಎಂದು ಹೇಳಿದರು. ಮಣಿಪುರ ವಿಚಾರದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯುತ್ತಿದ್ದರೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆ ಸಂಚಲನ ಮೂಡಿಸುತ್ತಿದೆ. ರಾಹುಲ್ ಗಾಂಧಿ ಸುತ್ತ ಮತ್ತೊಂದು ವಿವಾದ ಹುಟ್ಟು ಹಾಕುವ ಅನುಮಾನ ಬರುತ್ತಿದೆ.
ಇದನ್ನೂ ಓದಿ: Uniform Civil Code ಕುರಿತು ಕೇಂದ್ರ ಕಾನೂನು ಸಚಿವರ ಹೇಳಿಕೆ ಪ್ರಕಟ, ಹೇಳಿದ್ದೇನು ಗೊತ್ತಾ?
ಲೋಕಸಭೆಯಿಂದ ಹೊರಹೋಗುವ ವೇಳೆ ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡುವಾಗ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ ಎಂಬುದು ರಾಹುಲ್ ಗಾಂಧಿ ವಿರುದ್ಧದ ಪ್ರಮುಖ ಆರೋಪ. ಅಷ್ಟಕ್ಕೇ ನಿಲ್ಲದೆ ಕೆಲವು ಮಹಿಳಾ ಸಂಸದರ ಜತೆಗೂಡಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೂ ದೂರು ನೀಡಿದ್ದರು. ಇದುವರೆಗೆ ಯಾರೂ ಮಹಿಳೆಯರ ಮೇಲೆ ಇಂತಹ ಕೃತ್ಯ ಎಸಗಿಲ್ಲ ಎಂದು ದೂರಿದರು. ಹೆಂಗಸರು ಕುಳಿತ ಕಡೆ ಕೈ ತೋರಿಸಿ ಫ್ಲೈಯಿಂಗ್ ಕಿಸ್ ಬಿಟ್ಟರೆ ಮಹಿಳೆಯರ ಬಗ್ಗೆ ಅವರಿಗಿರುವ ಗೌರವ ತೋರಿಸುತ್ತದೆ ಎಂದು ಸ್ಮೃತಿ ಅವರು ಆಕ್ರೋಶ ಹೊರಹಾಕಿದ್ದಾರೆ.
ಆದರೆ ಕಾಂಗ್ರೆಸ್ ನಾಯಕರು ಫ್ಲೈಯಿಂಗ್ ಕಿಸ್ ಆರೋಪವನ್ನು ನಿರಾಕರಿಸುತ್ತಿದ್ದಾರೆ. ತಮ್ಮ ನಾಯಕ ರಾಹುಲ್ ಗಾಂಧಿ ಖಜಾನೆ ಬೆಂಚುಗಳ ಕಡೆಗೆ ತೋರಿಸಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಅಂತ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆರೋಪಿಸಿದಂತೆ ಸ್ಮೃತಿ ಇರಾನಿ ಅವರಿಗೆ ಅಥವಾ ಬಿಜೆಪಿ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಆಡಳಿತ ಪಕ್ಷದ ವಿರುದ್ಧ ಗುಡುಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.