CAAಯಿಂದಾಗಿ ರಾಹುಲ್ ಗಾಂಧಿಗೆ ಪೌರತ್ವ ಕಳೆದುಕೊಳ್ಳುವ ಭಯ; ಬಿಜೆಪಿ ನಾಯಕ

ಶಾಹೀನ್ ಬಾಗ್‌ನಲ್ಲಿ ಕುಳಿತಿರುವ ಜನರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಹೀನ್ ಬಾಗ್ ಈ ಜನರಿಗೆ ಪಿಕ್ನಿಕ್ ತಾಣವಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.  

Last Updated : Jan 31, 2020, 09:38 AM IST
CAAಯಿಂದಾಗಿ ರಾಹುಲ್ ಗಾಂಧಿಗೆ ಪೌರತ್ವ ಕಳೆದುಕೊಳ್ಳುವ ಭಯ; ಬಿಜೆಪಿ ನಾಯಕ title=

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ಧಾಳಿ ನಡೆಸಿರುವ ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಮತ್ತು ಶಾಸಕ ಸಂಗೀತ ಸೋಮ್  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಯವರಿಗೆ ಸಿಎಎ ಇಂದ ತಮ್ಮ ಪೌರತ್ವ ಕಳೆದುಕೊಳ್ಳುವ ಭಯ ಎಂದಿದ್ದಾರೆ.

ಕೇರಳದಲ್ಲಿ ನಿನ್ನೆ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸುತ್ತಾ, ನೀವು ಭಾರತೀಯರೆಂದು ಸಾಬೀತುಪಡಿಸಿ ಎಂದು ಭಾರತೀಯರನ್ನು ಕೇಳಲಾಗುತ್ತಿದೆ. ನಾನು ಭಾರತೀಯನೇ ಅಥವಾ ಇಲ್ಲವೇ ಎಂಬುದನ್ನು ನರೇಂದ್ರ ಮೋದಿ ನಿರ್ಧರಿಸಲಿದ್ದಾರೆ. ಯಾರು ಭಾರತೀಯರು ಮತ್ತು ಯಾರು ಅಲ್ಲ ಎಂದು ನಿರ್ಧರಿಸಲು ಅವರಿಗೆ ಈ ಪರವಾನಗಿ ನೀಡಿದವರು ಯಾರು? ನಾನು ಭಾರತೀಯನೆಂದು ನನಗೆ ತಿಳಿದಿದೆ ಮತ್ತು ನಾನು ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾಗಿಲ್ಲ ಎಂದು ರಾಹುಲ್ ಇದೇ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧ ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಮತ್ತು ಶಾಸಕ ಸಂಗೀತ ಸೋಮ್, ರಾಹುಲ್ ಗಾಂಧಿಯವರು ತಮ್ಮ ಪೌರತ್ವವನ್ನು ಕಳೆದುಕೊಳ್ಳುವ ಭಯದಿಂದಾಗಿ ಸಿಎಎಗೆ ಹೆದರುತ್ತಾರೆ ಎಂದು ನರೇಂದ್ರ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಬಹುಶಃ ಅವರಲ್ಲಿ ಭಾರತದ ಪೌರತ್ವಕ್ಕಾಗಿ ಯಾವುದೇ ಮಾನ್ಯ ದಾಖಲೆಗಳಿಲ್ಲ ಮತ್ತು ಅವರ ದಾಖಲೆಗಳನ್ನು ಪರಿಶೀಲಿಸಿದಾಗ ಎಲ್ಲವೂ ಹೊರಬರುತ್ತವೆ ಎಂಬ ಆತಂಕದಲ್ಲಿ ಹೀಗೆಲ್ಲಾ ಮಾತನಾಡುತ್ತಾರೆ ಎಂದಿದ್ದಾರೆ.

ಇನ್ನು ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ಚರ್ಚೆಯಲ್ಲಿರುವ ಬಿಜೆಪಿ ಶಾಸಕ ಸಂಗೀತ ಸೋಮ್, ಮತ್ತೊಮ್ಮೆ, ದೀಬಂದ್‌ನಲ್ಲಿ ಶಾರ್ಜೀಲ್ ಇಮಾಮ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಿಯೋಬಂದ್‌ನಲ್ಲಿ ಮಾಡಿದ ಭಾಷಣದಲ್ಲಿ ಶಾರ್ಜೀಲ್ ಇಮಾಮ್‌ರಂತಹವರನ್ನು ಗಲ್ಲಿಗೇರಿಸಬೇಕು ಮತ್ತು ಅಡ್ಡಹಾದಿಯಲ್ಲಿ ಗುಂಡು ಹಾರಿಸಬೇಕು ಎಂದು ಸರ್ಕಾರವನ್ನು ಕೋರಿದ್ದಾರೆ.

ಅದೇ ಸಮಯದಲ್ಲಿ, ಶಾಹೀನ್ ಬಾಗ್‌ನಲ್ಲಿ ಕುಳಿತಿರುವ ಜನರ ಬಗ್ಗೆ ಪ್ರತಿಕ್ರಿಯಿಸುವಾಗ, ಶಹೀನ್ ಬಾಗ್ ಈ ಜನರಿಗೆ ಪಿಕ್ನಿಕ್ ತಾಣವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಇಲ್ಲಿ ಪ್ರದರ್ಶನದಲ್ಲಿ ಪಾಲ್ಗೊಳ್ಳುವವರಿಗೆ ಪ್ರತಿಯಾಗಿ ಗಂಟೆಗೆ 500 ರೂಪಾಯಿಗಳನ್ನೂ ವಿರೋಧ ಪಕ್ಷಗಳು ನೀಡುತ್ತಿವೆ. ಅಲ್ಲದೆ ವಿದೇಶದಿಂದಲೂ ಹಣ ಹರಿದು ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Trending News