ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇಪಾಳದಲ್ಲಿ ನಡೆದ ನೈಟ್ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಟ್ವಿಟರ್ ಅಧಿಕೃತ ಖಾತೆಯೊಂದು, "ರಾಹುಲ್ ಗಾಂಧಿ ನೇಪಾಳದ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ನೇಪಾಳದಲ್ಲಿ ನಡೆಯುವ ನೈಟ್ ಪಾರ್ಟಿಯಲ್ಲಿ ಏನಾಗುತ್ತದೆ ಎಂದು ನೀವು ಊಹಿಸಬಹುದು...!" ಎಂದು ಶೀರ್ಷಿಕೆ ನೀಡಿದ್ದರು. ಸದ್ಯ ವಿಡಿಯೋಗೆ ಸ್ಪಷ್ಟನೆ ಲಭಿಸಿದೆ.
ಇದನ್ನು ಓದಿ: ಗೂಗಲ್ ಕ್ರೋಮ್ ಬಳಕೆದಾರರೇ ಎಚ್ಚರ! ಹ್ಯಾಕರ್‌ಗಳ ಬಲೆಗೆ ಬೀಳಲು ಈ ಒಂದು ತಪ್ಪು ಸಾಕು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಚೈನೀಸ್ ಅಂಬಾಸಿಡರ್ ಒಬ್ಬರ ಜೊತೆ ನೈಟ್ ಪಾರ್ಟಿಯಲ್ಲಿ ಪಾಲ್ಗೊಂಡಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಈ ವಿಡಿಯೋಗೆ ನೆಟ್ಟಿಗರು ಭಾರೀ ಕಮೆಂಟ್ ಮಾಡುತ್ತಿದ್ದರು. ಇದಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, "ರಾಹುಲ್ ಗಾಂಧಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ತನ್ನ ಆಪ್ತರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ" ಎಂದು ಹೇಳಿದೆ.
ಇತ್ತೀಚೆಗೆಯಷ್ಟೆ ತೆಲಂಗಾಣದ ಒಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ 'ರಾಜಕೀಯೇತರ' ಸಂವಾದಕ್ಕಾಗಿ ಆಗಮಿಸಬೇಕಾಗಿದ್ದ ರಾಹುಲ್ ಗಾಂಧಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ವಿವಾದ ಹೈದರಾಬಾದ್‌ನಲ್ಲಿ ಭುಗಿಲೆದ್ದಿತ್ತು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನು ಓದಿ: ಬೆಂಗಳೂರಿನ ಕೇಂದ್ರ ಭಾಗದಲ್ಲೇ ಕೇಂದ್ರ ಗೃಹ ಸಚಿವರ ಕಾರ್ಯಕ್ರಮ: ತಟ್ಟಲಿದೆ ಟ್ರಾಫಿಕ್ ಬಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.