ಎಲ್ಲರನ್ನೂ ಸೆಳೆದ ಕ್ಯುಆರ್ ಸ್ಯಾಮ್: ರಷ್ಯಾದ ಆರ್ಮಿ-2023 ಫೋರಂನಲ್ಲಿ ಮನಗೆದ್ದ ಭಾರತದ ರಕ್ಷಣಾ ಉಪಕರಣಗಳು

Written by - Girish Linganna | Edited by - Manjunath N | Last Updated : Aug 15, 2023, 04:58 PM IST
  • ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ರಕ್ಷಣಾ ರಫ್ತು ಅಪಾರ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.
  • 2013-14ರಲ್ಲಿ 100 ಮಿಲಿಯನ್ ಡಾಲರ್‌ಗೂ ಕಡಿಮೆಯಿದ್ದ ರಕ್ಷಣಾ ರಫ್ತು ಮೌಲ್ಯ ಈಗ ಬಹುತೇಕ 2 ಬಿಲಿಯನ್ ಡಾಲರ್ ತಲುಪಿದೆ.
  • ಇದರ ಆಧಾರದಲ್ಲಿ, ಭಾರತ ಸರ್ಕಾರ 2025ರ ವೇಳೆಗೆ 5 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ರಫ್ತು ಮೌಲ್ಯ ಸಾಧಿಸಲು ಪ್ರಯತ್ನ ನಡೆಸುತ್ತಿದೆ.
ಎಲ್ಲರನ್ನೂ ಸೆಳೆದ ಕ್ಯುಆರ್ ಸ್ಯಾಮ್: ರಷ್ಯಾದ ಆರ್ಮಿ-2023 ಫೋರಂನಲ್ಲಿ ಮನಗೆದ್ದ ಭಾರತದ ರಕ್ಷಣಾ ಉಪಕರಣಗಳು title=

ಕಳೆದ ಕೆಲ ವರ್ಷಗಳಿಂದ ರಷ್ಯಾದ ರಕ್ಷಣಾ ವಸ್ತು ಪ್ರದರ್ಶನಗಳಲ್ಲಿ ಭಾರತೀಯ ರಕ್ಷಣಾ ಉತ್ಪಾದನಾ ಸಂಸ್ಥೆಗಳು ಸತತವಾಗಿ ಭಾಗವಹಿಸುತ್ತಾ ಬಂದಿವೆ. ಭಾರತ ಮತ್ತು ರಷ್ಯಾಗಳು ಉತ್ತಮ ರಕ್ಷಣಾ ಸಹಕಾರ, ಬಾಂಧವ್ಯ ಹೊಂದಿರುವುದೂ ಇದಕ್ಕೆ ಕಾರಣವಾಗಿದೆ.

ರಷ್ಯನ್ ಮಾಧ್ಯಮಗಳು ಭಾರತ ತನ್ನ ನೂತನ ಕ್ಯುಆರ್ ಸ್ಯಾಮ್ (QRSAM - ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಮ್) ಅನ್ನು ಅಂತಾರಾಷ್ಟ್ರೀಯ ಮಿಲಿಟರಿ ತಾಂತ್ರಿಕ ವೇದಿಕೆಯಾದ ಆರ್ಮಿ-2023ರಲ್ಲಿ ಪ್ರದರ್ಶಿಸಿದೆ ಎಂದು ವರದಿ ಮಾಡಿವೆ.

ಕ್ಯುಆರ್‌ಸ್ಯಾಮ್ ವೈಶಿಷ್ಟ್ಯಗಳು

ಇದೊಂದು ಕಡಿಮೆ ವ್ಯಾಪ್ತಿಯ ಆ್ಯಂಟಿ ಏರ್‌ಕ್ರಾಫ್ಟ್ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಇದರಲ್ಲಿ ಸ್ಥಳೀಯವಾಗಿ ನಿರ್ಮಿಸಿರುವ ರೇಡಾರ್ ಹೋಮಿಂಗ್ ಹೆಡ್ ಎಂಬ ರೇಡಾರ್ ನಿರ್ದೇಶಿತ ವ್ಯವಸ್ಥೆಯಿದೆ. ಈ ರೇಡಾರ್ ಹೋಮಿಂಗ್ ಹೆಡ್ ಕ್ಷಿಪಣಿಗೆ ತನ್ನ ಗುರಿಯನ್ನು ಗುರುತಿಸಿ, ಅದರಿಂದ ಪ್ರತಿಫಲಿಸುವ ಸಂಕೇತಗಳನ್ನು ಆಧರಿಸಿ ಅದನ್ನು ಹಿಂಬಾಲಿಸಲು ಸಾಧ್ಯವಾಗುತ್ತದೆ. ರೇಡಾರ್ ಹೋಮಿಂಗ್ ಹೆಡ್ ನಿರ್ದೇಶಿತ ಗುರಿಯತ್ತ ಸಾಗಲು ಕ್ಷಿಪಣಿಗೆ ಕಣ್ಣಿನ ರೀತಿಯಲ್ಲಿ ನೆರವಾಗುತ್ತದೆ.

ಕ್ಯುಆರ್‌ಸ್ಯಾಮ್ ವಾಯು ರಕ್ಷಣಾ ವ್ಯವಸ್ಥೆಯನ್ನು ಶತ್ರುಗಳ ಯುದ್ಧ ವಿಮಾನಗಳ ದಾಳಿಯಿಂದ ಚಲಿಸುತ್ತಿರುವ ಶಸ್ತ್ರಸಜ್ಜಿತ ವಾಹನಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಇದು ವಾಹನಗಳು ಸುಲಭವಾಗಿ ವಾಯುದಾಳಿಯಿಂದ ರಕ್ಷಿಸಲು ನೆರವಾಗುತ್ತದೆ.

ಕ್ಯುಆರ್‌ಸ್ಯಾಮ್ 25-30 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಚಲಿಸುತ್ತಿರುವ ಶತ್ರು ಯುದ್ಧ ವಿಮಾನವನ್ನೂ ಹೊಡೆದುರುಳಿಸಬಹುದು. ಗಾಳಿಯಿಂದ ಬರುವ ಅಪಾಯಗಳನ್ನು ಕ್ಷಿಪ್ರವಾಗಿ ಎದುರಿಸುವ ಸಲುವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ವರದಿಗಳ ಪ್ರಕಾರ, ಕಳೆದ ವರ್ಷ ಭಾರತೀಯ ಸೇನೆ ಕ್ಯುಆರ್‌ಸ್ಯಾಮ್ ಅನ್ನು ಪರೀಕ್ಷೆಗೆ ಒಳಪಡಿಸಿತ್ತು.

ಇತ್ತೀಚಿನ ವರ್ಷಗಳ ತನಕ ಜಗತ್ತಿನ ಬೃಹತ್ ಆಯುಧ ಆಮದುದಾರ ರಾಷ್ಟ್ರವಾಗಿದ್ದ ಭಾರತ, ಈಗ ತನ್ನ ದೇಶೀಯ ನಿರ್ಮಾಣದ ಆಯುಧಗಳನ್ನು ಇತರ ದೇಶಗಳಿಗೆ ಮಾರಾಟ ಮಾಡಲು ಉತ್ಸುಕವಾಗಿದೆ. ಆದ್ದರಿಂದ ಭಾರತ ತನ್ನ ರಕ್ಷಣಾ ಉತ್ಪನ್ನಗಳನ್ನು ವಿವಿಧ ಅಂತಾರಾಷ್ಟ್ರೀಯ ಉದ್ಯಮ ಎಕ್ಸ್‌ಪೋಗಳಲ್ಲಿ ಪ್ರದರ್ಶಿಸುತ್ತಿದೆ.

ರಕ್ಷಣಾ ರಫ್ತನ್ನು ಉತ್ತೇಜಿಸಲು ಭಾರತದ ಯತ್ನ

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ರಕ್ಷಣಾ ರಫ್ತು ಅಪಾರ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. 2013-14ರಲ್ಲಿ 100 ಮಿಲಿಯನ್ ಡಾಲರ್‌ಗೂ ಕಡಿಮೆಯಿದ್ದ ರಕ್ಷಣಾ ರಫ್ತು ಮೌಲ್ಯ ಈಗ ಬಹುತೇಕ 2 ಬಿಲಿಯನ್ ಡಾಲರ್ ತಲುಪಿದೆ.

ಇದರ ಆಧಾರದಲ್ಲಿ, ಭಾರತ ಸರ್ಕಾರ 2025ರ ವೇಳೆಗೆ 5 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ರಫ್ತು ಮೌಲ್ಯ ಸಾಧಿಸಲು ಪ್ರಯತ್ನ ನಡೆಸುತ್ತಿದೆ.

'ಆರ್ಮಿ-2023' ಸಮಾರಂಭವನ್ನು ರಷ್ಯಾದ ರಕ್ಷಣಾ ಸಚಿವಾಲಯ ಆಗಸ್ಟ್ 14ರಿಂದ 20ರ ತನಕ ಆಯೋಜಿಸುತ್ತಿದೆ.

ಬಹುತೇಕ 1,500 ರಷ್ಯನ್ ರಕ್ಷಣಾ ಸಂಸ್ಥೆಗಳು ಈ ಮಿಲಿಟರಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿವೆ. ವಸ್ತು ಪ್ರದರ್ಶನವನ್ನು ಮಾಸ್ಕೋದ ಅಲಬಿನೋ ಟ್ರೈನಿಂಗ್ ಗ್ರೌಂಡ್ ಹಾಗೂ ಕುಬಿಂಕಾ ಏರ್‌ಫೀಲ್ಡ್ ಒಳಗಿರುವ ಪ್ಯಾಟ್ರಿಯಟ್ ಕಾಂಗ್ರೆಸ್ ಆ್ಯಂಡ್ ಎಕ್ಸಿಬಿಶನ್ ಸೆಂಟರ್‌ನಲ್ಲಿ ಆಯೋಜಿಸಲಾಗುತ್ತಿದೆ.

ರಷ್ಯನ್ ಕಂಪನಿಗಳ ಜೊತೆ, 85 ವಿದೇಶಿ ರಕ್ಷಣಾ ಸಂಸ್ಥೆಗಳು ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.

ಎಲ್ಲರನ್ನೂ ಸೆಳೆದ ಕ್ಯುಆರ್ ಸ್ಯಾಮ್: ರಷ್ಯಾದ ಆರ್ಮಿ-2023 ಫೋರಂನಲ್ಲಿ ಮನಗೆದ್ದ ಭಾರತದ ರಕ್ಷಣಾ ಉಪಕರಣಗಳು

-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News