Punjab Politics Latest Update: BJP ಸೇರಲಿದ್ದಾರೆಯೇ ಕ್ಯಾಪ್ಟನ್ ಅಮರಿಂದರ್ ಸಿಂಗ್? ಇಂದು ಸಂಜೆ ದೆಹಲಿಯಲ್ಲಿ ಷಾ ಹಾಗೂ ನಡ್ದಾ ಜೊತೆಗೆ ಭೇಟಿ

Punjab Politics Latest Update - ಪಂಜಾಬ್ ನಲ್ಲಿ ಕಾಂಗ್ರೆಸ್ ನಿಂದ ಸಿಕ್ಕ ಭಾರಿ ಶಾಕ್ ಬಳಿಕ, ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಎಲ್ಲಾ ಮಾರ್ಗಗಳು ಮುಕ್ತವಾಗಿವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಕ್ಯಾಪ್ಟನ್ (Captain Amarinder Singh) ಇದೀಗ ಬಿಜೆಪಿ ಸೇರುತ್ತಾರೆಯೇ ಎಂಬ ಊಹಾಪೋಹಗಳ ನಡುವೆ ಅಮರಿಂದರ್ ಸಿಂಗ್ ಮಂಗಳವಾರ ದೆಹಲಿಗೆ ಆಗಮಿಸುತ್ತಿದ್ದಾರೆ. 

Written by - Nitin Tabib | Last Updated : Sep 28, 2021, 02:32 PM IST
  • ಮಂಗಳವಾರ ದೆಹಲಿಗೆ ಆಗಮಿಸಲಿದ್ದಾರೆ ಕ್ಯಾಪ್ಟನ್ ಅಮರಿಂದರ್ ಸಿಂಗ್
  • ದೆಹಲಿಯಲ್ಲಿ ಅಮಿತ್ ಷಾ, ನಡ್ದಾ ಜೊತೆಗೆ ಭೇಟಿ.
  • ರಾಜಕೀಯ ವಲಯದಲ್ಲಿ ತೀವ್ರ ಹಲ್ ಚಲ್
Punjab Politics Latest Update: BJP ಸೇರಲಿದ್ದಾರೆಯೇ ಕ್ಯಾಪ್ಟನ್ ಅಮರಿಂದರ್ ಸಿಂಗ್? ಇಂದು ಸಂಜೆ ದೆಹಲಿಯಲ್ಲಿ ಷಾ ಹಾಗೂ ನಡ್ದಾ ಜೊತೆಗೆ ಭೇಟಿ title=
Punjab Politics Latest Update (File Photo)

Punjab Politics Latest Update - ಪಂಜಾಬ್ ನಲ್ಲಿ ಕಾಂಗ್ರೆಸ್ ನಿಂದ ಸಿಕ್ಕ ಭಾರಿ ಶಾಕ್ ಬಳಿಕ, ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಎಲ್ಲಾ ಮಾರ್ಗಗಳು ಮುಕ್ತವಾಗಿವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಕ್ಯಾಪ್ಟನ್ (Captain Amarinder Singh) ಇದೀಗ ಬಿಜೆಪಿ ಸೇರುತ್ತಾರೆಯೇ ಎಂಬ ಊಹಾಪೋಹಗಳ ನಡುವೆ ಅಮರಿಂದರ್ ಸಿಂಗ್ ಮಂಗಳವಾರ ದೆಹಲಿಗೆ ಆಗಮಿಸುತ್ತಿದ್ದಾರೆ. ದೆಹಲಿಯಲ್ಲಿ ಅವರು ಗೃಹ ಸಚಿವ ಅಮಿತ್ ಶಾ (Union Home Minister Amit Shah) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ (BJP President) ಜೆಪಿ ನಡ್ಡಾ (JP Nadda) ಅವರನ್ನು ಭೇಟಿ ಮಾಡಲಿದ್ದಾರೆ.

ಬಲ್ಲ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಂಗಳವಾರ ದೆಹಲಿಗೆ ತೆರಳುತ್ತಿದ್ದಾರೆ. ಅಲ್ಲಿ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರ ಜೋಗೆಗೆ  ಭೇಟಿಯನ್ನು ನಿಗದಿಪಡಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ-PM Modi Dedicated 35 New Crop Verities: ಕೃಷಿ ಕ್ಷೇತ್ರಕ್ಕೆ ಬಹುದೊಡ್ಡ ಉಡುಗೊರೆ ನೀಡಿದ PM Modi

ಇದೇ ತಿಂಗಳು ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಂಜಾಬ್ ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಚದುರಂಗ ಆಟವನ್ನು ಮುಗಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ಕ್ಯಾಪ್ಟನ್ ಗೆ ರಾಜೀನಾಮೆ ನೀಡುವಂತೆ ಹೇಳಿತ್ತು. ರಾಜೀನಾಮೆ ನೀಡಿದ ನಂತರ, ಪಂಜಾಬ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಅವಮಾನಿತನಾಗಿರುವುದಾಗಿ  ಕ್ಯಾಪ್ಟನ್ ಹೇಳಿದ್ದರು. ಸಿಎಂ ಹುದ್ದೆಯ ನಂತರ, ಅವರು ಕಾಂಗ್ರೆಸ್ ತೊರೆಯುವ ಸಾಧ್ಯತೆಯಿದೆ.

ಇದನ್ನೂ ಓದಿ-ಅಡುಗೆ ಅನಿಲ ಸಿಲಿಂಡ ಮೇಲೆ ಮತ್ತೆ ಸಿಗಲಿದೆಯೇ ಸಬ್ಸಿಡಿ? ಸರ್ಕಾರ ಸಿದ್ಧಪಡಿಸಿದೆ ಈ ಮಾಸ್ಟರ್ ಪ್ಲಾನ್

ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು (Navajot Singh Sidhu) ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ ಎಂದು ಕ್ಯಾಪ್ಟನ್ ಹಲವು ಬಾರಿ ಬಹಿರಂಗವಾಗಿ ಹೇಳಿದ್ದಾರೆ. ಇದಷ್ಟೇ ಅಲ್ಲ, ಸಿಧು ಪಾಕಿಸ್ತಾನ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಮತ್ತು ಪಿಎಂ ಇಮ್ರಾನ್ ಖಾನ್ ಜೊತೆ ಸ್ನೇಹ ಹೊಂದಿದ್ದಾರೆ ಎಂದು ಕ್ಯಾಪ್ಟನ್ ಹೇಳಿದ್ದರು. ಸಿದ್ದು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿಯೂ ಅವರು  ಈ ಮೊದಲೇ ಹೇಳಿದ್ದಾರೆ. ಕ್ಯಾಪ್ಟನ್ ರಾಜೀನಾಮೆ ನಂತರ, ಕಾಂಗ್ರೆಸ್ ಚರಣ್ಜಿತ್ ಸಿಂಗ್ ಚನ್ನಿಯನ್ನು (Charanjit Singh Channi) ಪಂಜಾಬ್ ನ ಮುಖ್ಯಮಂತ್ರಿಯನ್ನಾಗಿ ಮಾಡಿದೆ.

ಇದನ್ನೂ ಓದಿ-ವಿದೇಶಕ್ಕೆ ಹೋಗಬಯಸುವ ಭಾರತೀಯರಿಗೆ ಶಾಕ್! WHOನಿಂದ ಕೊವ್ಯಾಕ್ಸಿನ್ ಮಾನ್ಯತೆಗೆ ವಿಳಂಬ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News