Punjab Assembly Elections 2022 Results: ಪಂಜಾಬ್ ವಿಧಾನಸಭೆ ಚುನಾವಣೆ 2021ರ ಮತ ಎಣಿಕೆ ಕಾರ್ಯ ಮುಂದುವರೆದಿದ್ದು,. ಸಾರ್ವಜನಿಕರ ಅಂತಿಮ ಇನ್ನಷ್ಟೇ ಇನ್ನಷ್ಟೇ ಪ್ರಕಟವಾಗಬೇಕಿದೆ, ಆದರೆ ಎಕ್ಸಿಟ್ ಪೋಲ್ ಫಲಿತಾಂಶ (Punjab Exit Poll Results 2022) ಆಮ್ ಆದ್ಮಿ ಪಕ್ಷದ (Aam Admi Party) ನಿರೀಕ್ಷೆಯನ್ನು ಹೆಚ್ಚಿಸಿದೆ. ಆದಾಗ್ಯೂ, ಮಾರ್ಚ್ 10 ರಂದು ಮತ ಎಣಿಕೆ ಪೂರ್ಣಗೊಂಡ ನಂತರ ಅಂತಿಮ ಫಲಿತಾಂಶದ ನಂತರವೇ ಈ ಎಕ್ಸಿಟ್ ಪೋಲ್ಗಳ ಸತ್ಯಾಸತ್ಯತೆ ಸಾಬೀತಾಗಲಿದೆ. 117 ಸ್ಥಾನಗಳ ವಿಧಾನಸಭೆಯಲ್ಲಿ ಎಎಪಿ (AAP) 70-90 ಸ್ಥಾನಗಳ ಅಂತರದಿಂದ ಕ್ಲೀನ್ ಸ್ವೀಪ್ (Clean Sweep) ಮಾಡಲಿದೆ ಎಂದು ಹೇಳಲಾಗುತ್ತಿದೆ. ದೆಹಲಿ ಸಿಎಂ ಕೇಜ್ರಿವಾಲ್ ಅವರ ಉತ್ತಮ ಆಡಳಿತದ ಬಗ್ಗೆ ಸಾಕಷ್ಟು ಭರವಸೆ ಹೊಂದಿರುವ ಜನರ ಉತ್ಸಾಹ ಇಮ್ಮಡಿಗೊಂಡಿದೆ.
2017ರಲ್ಲಿ ಕಾಂಗ್ರೆಸ್ಗೆ (INC) 77, ಶಿರೋಮಣಿ ಅಕಾಲಿದಳಕ್ಕೆ (Shiromani Akali Dal) 15, ಎಎಪಿ ಕೇವಲ 20 ಸ್ಥಾನಗಳನ್ನು ಪಡೆದಿತ್ತು. ಆದರೆ, ಕಳೆದ 5 ವರ್ಷಗಳಲ್ಲಿ ಅವರ 10 ಶಾಸಕರು ಪಕ್ಷ ತೊರೆದಿದ್ದಾರೆ. 2017ರಲ್ಲಿ ಬಿಜೆಪಿ (BJP) ಕೇವಲ 3 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಎಎಪಿ ಅಧಿಕಾರಕ್ಕೆ ಬಂದರೆ ಎರಡೂ ಪಕ್ಷಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. AAP ಇದುವರೆಗೆ ದೆಹಲಿಯಂತಹ ಅರ್ಬನ್ ಜನಸಂಖ್ಯೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ರಾಜ್ಯದಲ್ಲಿ ಅಧಿಕಾರವನ್ನು ಪಡೆದುಕೊಂಡಿದೆ, ಮತ್ತೊಂದೆಡೆ ಪಂಜಾಬ್ ಹೆಚ್ಚಿನ ಸಂಖ್ಯೆಯ ಗ್ರಾಮೀಣ ಮತದಾರರನ್ನು ಹೊಂದಿದೆ. ಹೀಗಾಗಿ AAP ಸಂಪೂರ್ಣವಾಗಿ ಹೊಸ ಮೈದಾನದಲ್ಲಿ ಕಾಲಿಡುತ್ತಿದೆ ಎಂದರೆ ತಪ್ಪಾಗಲಾರದು , ಅಲ್ಲಿ ಅದು ಹೊಸ ಸವಾಲುಗಳನ್ನು ಎದುರಿಸಲಿದೆ, ಇವುಗಳಲ್ಲಿ ಹೆಚ್ಚಿನವುಗಳ ಕುರಿತು ಪಂಜಾಬ್ನಲ್ಲಿನ ಹಳೆಯ ಪಕ್ಷಗಳು ಎಂದಿಗೂ ಕಾಳಜಿ ವಹಿಸಲಿಲ್ಲ.
ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್ನ ಮತದಾರರಿಗೆ ವಿವಿಧ ಉಚಿತ ಮತ್ತು ರಿಯಾಯಿತಿಗಳನ್ನು ಭರವಸೆ ಪಕ್ಷದ ಪ್ರಣಾಳಿಕೆಯು ನೀಡಿದೆ. ಗ್ರಾಮೀಣ ಪಂಜಾಬ್ನಲ್ಲಿ ಸಮಸ್ಯೆಗಳನ್ನು ಪರಿಹರಿಸಲು, ಪಕ್ಷವು ತಳಮಟ್ಟದಲ್ಲಿ ಕೆಲಸ ಮಾಡಬೇಕಾಗುತ್ತದೆ. ಪಂಜಾಬ್ಗಾಗಿ ದೆಹಲಿ ಮಾದರಿಯನ್ನು ನಿರ್ಮಿಸುವ ಕುರಿತು ಎಎಪಿ ಮಾತನಾಡಿದ್ದು, ಇವುಗಳಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಉತ್ತಮ ಸೌಲಭ್ಯಗಳು ಒಳಗೊಂಡಿವೆ. ಪಂಜಾಬ್ನಲ್ಲಿ ಈ ರೀತಿ ಮಾಡುವುದು ಪಕ್ಷಕ್ಕೆ ದೊಡ್ಡ ಸವಾಲಾಗಿದೆ. ಪಂಜಾಬ್ನ ಜನರು "ದೆಹಲಿ ಮಾಡೆಲ್" ಅನ್ನು ಅಳವಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಇದುವರೆಗೆ ಜನರ ಬಳಿ ಅಂತಹ ಯಾವುದೇ ಅನುಭವವಿಲ್ಲ.
ಪಂಜಾಬ್ ಬಗ್ಗೆ ಹೇಳುವುದಾದರೆ, ಇದುವರೆಗೆ ಅಲ್ಲಿ ಶಿಕ್ಷಣದ ಸ್ಥಿತಿ ಅಷ್ಟೊಂದು ಸರಿಯಾಗಿಲ್ಲ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲ ಅದು ತೀರಾ ಕಳಪೆಮಟ್ಟದ್ದಾಗಿದೆ ಎನ್ನಲಾಗುತ್ತದೆ. ಆರೋಗ್ಯ ಸೌಲಭ್ಯಗಳ ಬಗ್ಗೆ ಹೇಳುವುದಾದರೆ, ಇದು ಇನ್ನೂ ಕಳಪೆಮಟ್ಟದ್ದಾಗಿದೆ. ಆಸ್ಪತ್ರೆಗಳವರೆಗೆ ಹಳ್ಳಿಗಳು ತಲುಪು ಅಷ್ಟೊಂದು ಸರಿಯಾಗಿಲ್ಲ. ಇದರೊಂದಿಗೆ ಆಸ್ಪತ್ರೆಗಳಲ್ಲಿನ ಸಿಬ್ಬಂದಿ, ವೈದ್ಯಕೀಯ ಸಾಮಗ್ರಿಗಳು ಮತ್ತು ಇತರ ಸೌಲಭ್ಯಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ.
ಪಂಜಾಬ್ ದೆಹಲಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಕೃಷಿ ಆಧಾರಿತ ರಾಜ್ಯವಾಗಿದೆ. ಪಂಜಾಬ್ನ 50 ಸಾವಿರ ಚದರ ಕಿಲೋಮೀಟರ್ಗಳಷ್ಟು ವ್ಯಾಪಿಸಿರುವ ಹಳ್ಳಿಗಳಲ್ಲಿ ಕೃಷಿಯನ್ನು ಮುಖ್ಯವಾಗಿ ಮಾಡಲಾಗುತ್ತದೆ. ಪಂಜಾಬ್ನ ಕನಿಷ್ಠ ಶೇ. 62 ಮತದಾರರು ಈ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶಗಳನ್ನು ನೋಡಿಕೊಳ್ಳಲು AAP ತುಂಬಾ ಶ್ರಮಿಸಬೇಕಾಗಲಿದೆ. ಏಕೆಂದರೆ ಈ ಪ್ರದೇಶಗಳಲ್ಲಿ ರೈತರು ಪ್ರಬಲರಾಗಿದ್ದಾರೆ, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಇಲ್ಲಿ ತುಂಬಾ ಹೆಚ್ಚಾಗಿವೆ, ಇದುವರೆಗೆ ಪಂಜಾಬ್ನ ಹಳೆಯ ಮತ್ತು ಜನಪ್ರಿಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಕೂಡ ಅಲ್ಲಿ ಏನೂ ಮಾಡಲಾಗಿಲ್ಲ. ದೆಹಲಿಯಲ್ಲಿ ಎಎಪಿಯ ಸಾಧನೆ ಮತ್ತು ಪಂಜಾಬ್ನಲ್ಲಿ ನಾಯಕತ್ವ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪಂಜಾಬ್ನ ರೈತರು ತಮ್ಮ ಸಮಸ್ಯೆಗಳ ಪರಿಣಾಮಕಾರಿ ಪರಿಹಾರಕ್ಕಾಗಿ ಹೊಸ ಪಕ್ಷದತ್ತ ನೋಡುತ್ತಿದ್ದಾರೆ.
ಇದನ್ನೂ ಓದಿ-Goa Election Results 2022: ಮುನ್ನಡೆ ಕಾಯ್ದುಕೊಂಡಿರುವ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್
ಎಕ್ಸಿಟ್ ಪೋಲ್ಗಳು ಫಲಿತಾಂಶಗಳು ಒಂದು ವೇಳೆ ನಿಜ ಸಾಬೀತಾದರೆ ಸಾರ್ವಜನಿಕರು AAP ಪಕ್ಷವನ್ನು ಏಕೆ ಆಯ್ಕೆ ಮಾಡಿದರು ಎಂಬುದನ್ನು ವಿಶ್ಲೇಷಿಸುವುದು ಬಹಳ ಮುಖ್ಯವಾಗುತ್ತದೆ. ಆಡಳಿತ ವಿರೋಧಿ ಲದೆ ಇದರಲ್ಲಿ ಪ್ರಮುಖ ಅಂಶವಾಗಿರಲಿದೆ. ಶಿಕ್ಷಣ, ಆರೋಗ್ಯ, ಉತ್ತಮ ಮೂಲಸೌಕರ್ಯಗಳಂತಹ ಪ್ರಮುಖ ಸಮಸ್ಯೆಗಳಿವೆ, ಇದು ಪಂಜಾಬ್ನ ಹೆಚ್ಚಿನ ಜನರಿಗೆ ಕೇವಲ ಮರೀಚಿಕೆಯಾಗಿವೆ. ಏಕೆಂದರೆ ಪ್ರಸ್ತುತ ಮತ್ತು ಹಳೆಯ ಸರ್ಕಾರಗಳು ಈ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿಲ್ಲ ಎಂಬುದು ಜನರ ದೂರು. ಬಲವಾದ ಮೂರನೇ ಆಯ್ಕೆಯ ಕೊರತೆಯೂ ಇದರಲ್ಲಿ ಒಂದು ಕಾರಣವಿರುವ ಸಾಧ್ಯತೆ ಇದೆ.. ಪಂಜಾಬ್ನ ಎರಡೂ ದೊಡ್ಡ ಪಕ್ಷಗಳು ದೀರ್ಘಕಾಲ ಅಧಿಕಾರದಲ್ಲಿದ್ದವು ಆದರೆ ಜನರಿಗೆ ಹೊಸದನ್ನು ನೀಡಿಲ್ಲ. AAP ಗೆಲುವನ್ನು ದಾಖಲಿಸಿದರೆ, ಜನರು ಅಂತಿಮವಾಗಿ ಪರ್ಯಾಯವನ್ನು ಕಂಡುಕೊಂಡಿದ್ದಾರೆ ಎಂಬುದೇ ಇದರ ಅರ್ಥ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಪಂಜಾಬ್ನಲ್ಲಿನ ಆಂತರಿಕ ಕಲಹವೂ ಒಂದು ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ-ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಗೆಲುವು ಸಾಧಿಸಿದರೆ ರಾಷ್ಟ್ರಪತಿ ಚುನಾವಣೆಗೆ ಸಿಗಲಿದೆ ತಿರುವು
ಎಲ್ಲಕ್ಕಿಂತ ಹೆಚ್ಚಾಗಿ, ಪಕ್ಷದಪಕ್ಷದ ಪ್ರಚಾರಕ್ಕಾಗಿ ಹಾಗೂ ಪಕ್ಷದ ನಾಯಕತ್ವದ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಬಳಕೆ ಸಹ ಒಂದು ಕಾರಣವಾಗಲಿದೆ. ಆದರೆ, ಸದ್ಯದ ಮಟ್ಟಿಗೆ ಎಕ್ಸಿಟ್ ಪೋಲ್ ಗಳ ಫತಿತಾಂಶದಂತೆ AAP ಕ್ಲೀನ್ ಸ್ವೀಪ್ ನತ್ತ ಮುಂದುವರೆದಿದ್ದು, ಮತ ಎಣಿಕೆಯ ನಂತರವೇ ಎಲ್ಲಾ ಅಂಕಿ-ಅಂಶಗಳು ಮತ್ತು ಮಾರನಗಳು ನಿಚ್ಚಳವಾಗಳಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.