ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಪಕ್ಷದ ಪ್ರಚಾರದಲ್ಲಿ ನಿರತರಾಗಿರುವಾಗಲೂ ತಮ್ಮ ಮಕ್ಕಳಿಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತಾರೆ ಎಂದು ತಿಳಿಸಿದರು.
ಮಂಗಳವಾರದಂದು ತಮ್ಮ ಫೇಸ್‌ಬುಕ್ ಲೈವ್ ಚಾಟ್ ಸೆಷನ್‌ನಲ್ಲಿ, ಮಾತನಾಡುತ್ತಾ ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ಮನೆಕೆಲಸದಲ್ಲಿ ಮಾತ್ರವಲ್ಲದೆ ಅವರ ಸ್ನೇಹಿತರಿಗೆ ಸಹಾಯ ಮಾಡುತ್ತಾರೆ ಎಂದು ಹೇಳಿದರು.
ಫೇಸ್ ಬುಕ್ ಸಂವಾದದಲ್ಲಿ ವ್ಯಕ್ತಿಯೊಬ್ಬರು" ನಿಮ್ಮ ಮಕ್ಕಳು ತಮ್ಮ ಹೋಂ ವರ್ಕ್ ವಿಚಾರವಾಗಿ ನಿಮ್ಮ ಸಹಾಯವನ್ನು ಕೇಳುತ್ತಾರೆಯೇ? ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ಈ ಫೇಸ್ ಬುಕ್ ಸೆಷನ್ ಗೂ ಮೊದಲು ಇಂದಿಗೂ ಕೂಡ ತನ್ನ ಮಗಳ ಅಸೈನ್ಮೆಂಟ್ ವಿಚಾರದಲ್ಲಿ ನೆರವಾಗಿರುವುದಾಗಿ ತಿಳಿಸಿದರು. "ಕೆಲವೊಮ್ಮೆ, ನಾನು ಚುನಾವಣಾ ಪ್ರಚಾರದಿಂದ ಮನೆಗೆ ಹಿಂದಿರುಗಿದಾಗ, ಅವರ ಹೋಂ ವರ್ಕ್ ನ್ನು ಖಚಿತಪಡಿಸಿಕೊಳ್ಳಲು ನಾನು ನನ್ನ ಮಕ್ಕಳೊಂದಿಗೆ 3-4 ಗಂಟೆಯವರೆಗೆ ಕುಳಿತುಕೊಳ್ಳಬೇಕು" ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಇದನ್ನೂ ಓದಿ: ನಾರಾಯಣ ಗುರುಗಳಿಗೆ ಮಾಡಿರುವ ಅವಮಾನಕ್ಕಾಗಿ ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು-ಸಿದ್ಧರಾಮಯ್ಯ
ತಮ್ಮ ಬಾಲ್ಯದ ವಿಚಾರಕ್ಕೆ ಹಿಂದುರಿಗಿದ ಅವರು ತಮ್ಮ ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ತೀವ್ರ ಜಗಳವಾಡುತ್ತಿದ್ದರು ಎನ್ನುವ ಸಂಗತಿಯನ್ನು ಅವರು ಬಹಿರಂಗಪಡಿಸಿದರು.ಆದರೆ ಹೊರಗಿನವರು ಅವರಿಗೆ ಅಡ್ಡಿಪಡಿಸಲು ಪ್ರಯತ್ನಿಸಿದರೆ, ಸಹೋದರ-ಸಹೋದರಿ ಜೋಡಿ ತಂಡವಾಗಿ ಹೋರಾಡುತ್ತಿತ್ತು ಎಂದು ಅವರು ಹೇಳಿದರು.
ಫೆಬ್ರವರಿ 10 ರಂದು ಆರಂಭವಾಗಲಿರುವ ಉತ್ತರ ಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ.ಕೋವಿಡ್‌ನಿಂದಾಗಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳನ್ನು ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ಆಯೋಜಿಸುವುದನ್ನು ನಿಲ್ಲಿಸಿದೆ.ಆದರೆ ಇದು ಮನೆ-ಮನೆ ಮತ್ತು ವರ್ಚುವಲ್ ಪ್ರಚಾರಗಳಿಗೆ ಅವಕಾಶ ನೀಡಿದೆ.
ಹೆಚ್ಚಿನ ಪಕ್ಷಗಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ತಿರುಗಿವೆ ಮತ್ತು ಮತದಾರರೊಂದಿಗೆ ಸಂಪರ್ಕ ಸಾಧಿಸಲು ನವೀನ ಮಾರ್ಗಗಳನ್ನು ರೂಪಿಸಿವೆ.ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.