ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಭೀಮ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರನ್ನು ಬುಧವಾರದಂದು ಮೀರತ್ ಆಸ್ಪತ್ರೆಯಲ್ಲಿ ಭೇಟಿಯಾದರು. ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಉತ್ತರ ಪ್ರದೇಶದ ಪೊಲೀಸರು ಅವರನ್ನು ಬಂಧಿಸಿದ್ದಾರೆ.
Meerut: Congress General Secretary for UP (East) Priyanka Gandhi Vadra meets Bhim Army chief Chandrashekhar who is undergoing treatment at a hospital. pic.twitter.com/e4QPUJolzW
— ANI UP (@ANINewsUP) March 13, 2019
ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಹಾಗೂ ಜ್ಯೋತಿರಾಧಿತ್ಯ ಸಿಂಧ್ಯ ಅವರು ಪ್ರಿಯಾಂಕಾ ಗಾಂಧಿಗೆ ಸಾಥ್ ನೀಡಿದರು. ಚಂದ್ರಶೇಖರ್ ಆಜಾದ್ ಅವರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ " ಅವನು ಯುವಕ ಹೋರಾಟದ ಮೂಲಕ ಧ್ವನಿಯನ್ನು ಎತ್ತುತ್ತಿದ್ದಾನೆ. ಆದರೆ ಸರ್ಕಾರ ಅವನ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.ಅವರು ಯುವಕರಿಗಾಗಿ ಧ್ವನಿ ಎತ್ತುತ್ತಿದ್ದಾರೆ ಇದರಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದರು.
ಚಂದ್ರಶೇಖರ್ ಆಜಾದ್ ಅವರು ಕಾರ್ ಹಾಗೂ ಮೋಟರ್ ಸೈಕಲ್ ಗಳ ಮೂಲಕ ಮೆರವನಿಗೆಯೊಂದನ್ನು ಮುನ್ನಡೆಸುತ್ತಿದ್ದರು.ಆದರೆ ಉತ್ತರ ಪ್ರದೇಶದ ಪೋಲಿಸರು ಅವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡರು.ಇದಾದ ನಂತರ ಅವರು ಅನಾರೋಗ್ಯದ ಕಾರಣದಿಂದಾಗಿ ಮೀರತ್ ನಲ್ಲಿರುವ ಆಸ್ಪತ್ರೆ ದಾಖಲಾಗಿದ್ದಾರೆ.
ಪೋಲಿಸರು ಹೇಳುವಂತೆ ಚಂದ್ರಶೇಖರ್ ಆಜಾದ್ ಬೆಂಬಲಿಗರು ಮೋಟರ್ ಸೈಕಲ್ ಗಳ ಮೂಲಕ ಮುಜಾಫರ್ ನಗರ್ ಗೆ ಹೋಗುವ ಸಂದರ್ಭದಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.