Heeraben Modi passed away: ಪ್ರಧಾನಿ ತಾಯಿ ಹೀರಾಬೆನ್ ನಿಧನ: ಕಣ್ಣೀರು ತರಿಸುವಂತಿದೆ ‘ಪ್ರಿಯ ಪುತ್ರ’ನ ಭಾವುಕ ನುಡಿ

PM Modi mother Heeraben Modi passed away: ಹೀರಾಬೆನ್ ಅವರು ಪ್ರಧಾನಿ ಮೋದಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ನಗರದ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪ್ರಧಾನಿಯವರು ಸಮಯ ಮಾಡಿಕೊಂಡು ಆಗಾಗ್ಗೆ ತಾಯಿಯನ್ನು ಭೇಟಿಯಾಗುತ್ತಿದ್ದರು. ಹೀರಾಬೆನ್ ಮೋದಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಗುರುವಾರ ಹೇಳಿಕೆ ನೀಡಿತ್ತು.

Written by - Bhavishya Shetty | Last Updated : Dec 30, 2022, 07:19 AM IST
    • ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನರಾಗಿದ್ದಾರೆ
    • ಅನಾರೋಗ್ಯ ಹಿನ್ನೆಲೆ ಅಹಮದಾಬಾದ್‌ನ 'ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್'ಗೆ ದಾಖಲಿಸಲಾಗಿತ್ತು
    • ಇಂದು ಮುಂಜಾನೆ 3.30ಕ್ಕೆ ಹೀರಾಬೆನ್ ಮೋದಿ ಕೊನೆಯುಸಿರೆಳೆದಿದ್ದಾರೆ
Heeraben Modi passed away: ಪ್ರಧಾನಿ ತಾಯಿ ಹೀರಾಬೆನ್ ನಿಧನ: ಕಣ್ಣೀರು ತರಿಸುವಂತಿದೆ ‘ಪ್ರಿಯ ಪುತ್ರ’ನ ಭಾವುಕ ನುಡಿ title=
Modi Mother Passes Away

PM Modi mother Heeraben Modi passed away: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನರಾಗಿದ್ದಾರೆ. ಮಾಹಿತಿ ಪ್ರಕಾರ, ಇಂದು ಮುಂಜಾನೆ 3.30ಕ್ಕೆ ಹೀರಾಬೆನ್ ಮೋದಿ ಕೊನೆಯುಸಿರೆಳೆದಿದ್ದಾರೆ. ಬುಧವಾರ ಬೆಳಗ್ಗೆ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಅಹಮದಾಬಾದ್‌ನ 'ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್'ಗೆ ದಾಖಲಿಸಲಾಗಿತ್ತು. ಪ್ರಧಾನಿ ಮೋದಿ ಅಹಮದಾಬಾದ್‌ಗೆ ತೆರಳಿದ್ದು, ಬೆಳಗ್ಗೆ 7.30ಕ್ಕೆ ಅಲ್ಲಿಗೆ ತಲುಪಲಿದ್ದಾರೆ.

ಇದನ್ನೂ ಓದಿ: PM Modi mother Heeraben Modi passed away : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ

ತಮ್ಮ ತಾಯಿಯ ನಿಧನದ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ದೇವರ ಪಾದದಲ್ಲಿ ವೈಭವದ ಶತಮಾನದ ಅಂತ್ಯ... ತಾಯಿಯಲ್ಲಿ ನಾನು ಯಾವಾಗಲೂ ತಪಸ್ವಿಯ ಪ್ರಯಾಣವನ್ನು ಒಳಗೊಂಡಿರುವ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ. ಅದು ನಿಸ್ವಾರ್ಥ ಕರ್ಮಯೋಗಿಯ ಸಂಕೇತವಾಗಿದೆ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನ. ಅವರ 100ನೇ ಹುಟ್ಟುಹಬ್ಬದಂದು ಅವರನ್ನು ಭೇಟಿಯಾದಾಗ ಅವರು ಒಂದು ಮಾತನ್ನು ಹೇಳಿದರು, ಇದು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವಂತಹದ್ದು. “ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧತೆಯಿಂದ ಬದುಕಿ”. ಅಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಮತ್ತು ಶುದ್ಧತೆಯಿಂದ ಜೀವನ ನಡೆಸಬೇಕು' ಎಂದು ಭಾವುಕ ನುಡಿಗಳನ್ನು ಮೋದಿ ಹೇಳಿದ್ದಾರೆ.

 

ಹೀರಾಬೆನ್ ಅವರು ಪ್ರಧಾನಿ ಮೋದಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ನಗರದ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪ್ರಧಾನಿಯವರು ಸಮಯ ಮಾಡಿಕೊಂಡು ಆಗಾಗ್ಗೆ ತಾಯಿಯನ್ನು ಭೇಟಿಯಾಗುತ್ತಿದ್ದರು. ಹೀರಾಬೆನ್ ಮೋದಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಗುರುವಾರ ಹೇಳಿಕೆ ನೀಡಿತ್ತು.

“ಅವರ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಕಳೆದ ದಿನಕ್ಕಿಂತ ಇಂದು ಹೆಚ್ಚು ಉತ್ತಮವಾಗಿದ್ದಾರೆ” ಎಂದು ಸೋಮಾಭಾಯಿ ಮೋದಿ ಹೇಳಿದ್ದರು. ಇದೇ ವೇಳೆ ಆಸ್ಪತ್ರೆಗೆ ಆಗಮಿಸಿದ ಬಿಜೆಪಿಯ ಹಿರಿಯ ನಾಯಕರು ಒಂದರಿಂದ ಎರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: LIC News: ಇನ್ಮುಂದೆ LICಯೊಂದಿಗೆ ವಿಲೀನಗೊಳ್ಳಲಿವೆ ಈ ನಾಲ್ಕು ಸರ್ಕಾರಿ ವಿಮಾ ಕಂಪನಿಗಳು!

ಪ್ರಧಾನಿ ಮೋದಿ ಬುಧವಾರ ದೆಹಲಿಯಿಂದ ಅಹಮದಾಬಾದ್‌ಗೆ ಆಗಮಿಸಿದ್ದು, ತಾಯಿಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿಯೇ ಇದ್ದರು. ಸಿವಿಲ್ ಆಸ್ಪತ್ರೆಯ ವೈದ್ಯರೊಂದಿಗೆ ಅವರು ಮಾತನಾಡಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News