ಶ್ರೀರಾಮ ಮಂದಿರಕ್ಕೆ ಅಡಿಗಲ್ಲು ಹಾಕಲು ಅಯೋಧ್ಯೆಯತ್ತ ತೆರಳಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಅಯೋಧ್ಯೆಯತ್ತ ತೆರಳಿದ್ದಾರೆ.

Written by - Yashaswini V | Last Updated : Aug 5, 2020, 10:00 AM IST
ಶ್ರೀರಾಮ ಮಂದಿರಕ್ಕೆ ಅಡಿಗಲ್ಲು ಹಾಕಲು ಅಯೋಧ್ಯೆಯತ್ತ ತೆರಳಿದ ಪ್ರಧಾನಿ ಮೋದಿ title=

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ (Ram Mandir) ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯಿಂದ  ಅಯೋಧ್ಯೆ (Ayodhya)ಯತ್ತ ಪ್ರಯಾಣ ಬೆಳೆಸಿದ್ದಾರೆ.

ಕುರ್ತಾ ಮತ್ತು ಪಂಚೆ ತೊಟ್ಟಿರುವ ಪ್ರಧಾನಿ  ನರೇಂದ್ರ ಮೋದಿ (Narendra Modi)  ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಅಯೋಧ್ಯೆಯತ್ತ ತೆರಳಿದ್ದಾರೆ.

ಅಯೋಧ್ಯೆ: ಮೋದಿ ರಾಜ್‌ನಲ್ಲಿ ಈಡೇರುತ್ತಿದೆ ಬಿಜೆಪಿಯ ಮತ್ತೊಂದು ಪ್ರಮುಖ ಭರವಸೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಡೀ ದಿನದ ಕಾರ್ಯಕ್ರಮದ ವಿವರಗಳು ಈ‌ ರೀತಿ ಇವೆ.

  • 9.35ಕ್ಕೆ ದೆಹಲಿಯಿಂದ ಹೊರಟಿರುವ ಪ್ರಧಾನಿ ಮೋದಿ
  • 10.30ಕ್ಕೆ ಲಕ್ನೋ ವಿಮಾನ ನಿಲ್ದಾಣ ತಲುಪಲಿರುವ ಮೋದಿ
  • 11.30ಕ್ಕೆ ಅಯೋಧ್ಯೆಯ ಸಾಕೇತ್ ಕಾಲೋನಿಗೆ ಆಗಮನ
  • 11.45ಕ್ಕೆ ಅಯೋಧ್ಯೆಯ ಹನುಮಾನ್​ಗಡಿಗೆ ಆಗಮನ
  • ಹನುಮಾನ್ ಪೂಜೆಯ ನಂತರ ಸರಯೂ ನದಿಗೆ ಪೂಜೆ
  • ಮಧ್ಯಾಹ್ನ 12 ಗಂಟೆಗೆ ಭೂಮಿಪೂಜೆ ಸ್ಥಳಕ್ಕೆ ಆಗಮನ
  • 12.30ಕ್ಕೆ ಶಿಲಾನ್ಯಾಸ ಪಾರ್ಯಕ್ರಮದಲ್ಲಿ ಭಾಗಿ
  • 12.40ಕ್ಕೆ ರಾಮಮಂದಿರಕ್ಕೆ ಅಡಿಗಲ್ಲು ಹಾಕಲಿರುವ ಮೋದಿ
  • ಶಿಲಾನ್ಯಾಸದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ
  • 1.10ಕ್ಕೆ ರಾಮಜನ್ಮಭೂಮಿ ಕಾಂಪ್ಲೆಕ್ಸ್ ವೀಕ್ಷಣೆ ಮಾಡಲಿರುವ ಮೋದಿ
  • ಬಳಿಕ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ‌ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲದಾಸ್ ಜೊತೆ ಚರ್ಚೆ
  • 2:05ಕ್ಕೆ ಅಯೋಧ್ಯೆಯಿಂದ ಹೆಲಿಕಾಪ್ಟರ್ ಮೂಲಕ ಲಕ್ನೋಗೆ ಪ್ರಯಾಣ
     

Trending News