ಒಂದಲ್ಲ, ಎರಡಲ್ಲ… 10 ಗರ್ಭಗುಡಿಗಳನ್ನು ಹೊಂದಿರುವ ಕಲ್ಕಿಧಾಮಕ್ಕೆ ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ

Kalki Dham speciality: ಕಲ್ಕಿ ಧಾಮವನ್ನು ವಿಶ್ವದ ಅತ್ಯಂತ ವಿಶಿಷ್ಟವಾದ ದೇವಾಲಯ ಎಂದು ಕರೆಯಲಾಗುತ್ತಿದೆ. ಏಕೆಂದರೆ ಕಲ್ಕಿ ಧಾಮವು  ಅವತಾರ ತಾಳುವುದಕ್ಕಿಂತ ಮೊದಲು ಸ್ಥಾಪಿಸಲಾಗುತ್ತಿರುವ ಮೊದಲ ಧಾಮವಾಗಿದೆ.

Written by - Bhavishya Shetty | Last Updated : Feb 18, 2024, 02:47 PM IST
    • ವಿಷ್ಣುವಿನ 10 ನೇ ಅವತಾರವಾದ ಭಗವಾನ್ ಕಲ್ಕಿಯ ದೇವಾಲಯ
    • ಕಲ್ಕಿ ಧಾಮದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಹುತೇಕ ಸಿದ್ಧತೆ
    • ಕಲ್ಕಿ ಧಾಮವನ್ನು ವಿಶ್ವದ ಅತ್ಯಂತ ವಿಶಿಷ್ಟವಾದ ದೇವಾಲಯ ಎಂದು ಕರೆಯಲಾಗುತ್ತಿದೆ
ಒಂದಲ್ಲ, ಎರಡಲ್ಲ… 10 ಗರ್ಭಗುಡಿಗಳನ್ನು ಹೊಂದಿರುವ ಕಲ್ಕಿಧಾಮಕ್ಕೆ ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ title=

Kalki Dham speciality: ಉತ್ತರ ಪ್ರದೇಶದ ಸಂಭಾಲ್‌’ನಲ್ಲಿ ಭಗವಾನ್ ವಿಷ್ಣುವಿನ 10 ನೇ ಅವತಾರವಾದ ಭಗವಾನ್ ಕಲ್ಕಿಯ ದೇವಾಲಯವನ್ನು ನಿರ್ಮಿಸಲಾಗುತ್ತದೆ. ಅದರ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಸೋಮವಾರ ನೆರವೇರಿಸಲಿದ್ದು, ಸಂಭಾಲ್‌’ನ ಅಂಚೋದ ಕಾಂಬೋದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಕಿ ಧಾಮದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ: ಸಿಎಂ ಸಿದ್ದರಾಮಯ್ಯ

ಇಡೀ ದೇವಾಲಯದ ಸಂಕೀರ್ಣವನ್ನು ಬಿಳಿ ಮತ್ತು ಕೇಸರಿ ಬಣ್ಣಗಳಲ್ಲಿ ಅಲಂಕರಿಸಲಾಗಿದ್ದು, ಕಲ್ಕಿ ದೇವಸ್ಥಾನದ ಮಾದರಿಯೂ ಬಹಿರಂಗವಾಗಿದೆ.

ಕಲ್ಕಿ ಧಾಮವನ್ನು ವಿಶ್ವದ ಅತ್ಯಂತ ವಿಶಿಷ್ಟವಾದ ದೇವಾಲಯ ಎಂದು ಕರೆಯಲಾಗುತ್ತಿದೆ. ಏಕೆಂದರೆ ಕಲ್ಕಿ ಧಾಮವು  ಅವತಾರ ತಾಳುವುದಕ್ಕಿಂತ ಮೊದಲು ಸ್ಥಾಪಿಸಲಾಗುತ್ತಿರುವ ಮೊದಲ ಧಾಮವಾಗಿದೆ. ಈ ದೇವಾಲಯದಲ್ಲಿ ಒಂದಲ್ಲ 10 ಗರ್ಭಗುಡಿ ಇದ್ದು, ವಿಷ್ಣುವಿನ 10 ಅವತಾರಗಳ 10 ವಿವಿಧ ಗರ್ಭಗುಡಿಗಳನ್ನು ಸ್ಥಾಪಿಸಲಾಗುತ್ತದೆ.

ಅಯೋಧ್ಯೆಯ ಸೋಮನಾಥ ದೇವಾಲಯ ಮತ್ತು ರಾಮಮಂದಿರವನ್ನು ನಿರ್ಮಿಸಿದ ಅದೇ ಗುಲಾಬಿ ಬಣ್ಣದ ಕಲ್ಲಿನಿಂದ ಕಲ್ಕಿ ಧಾಮವನ್ನು ನಿರ್ಮಿಸಲಾಗುತ್ತಿದೆ. ಈ ದೇವಾಲಯದ ಗೋಪುರವು 108 ಅಡಿ ಎತ್ತರವಿರುತ್ತದೆ. ದೇವಸ್ಥಾನದ ಅಂಗಣವನ್ನು 11 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು. ಇಲ್ಲಿ 68 ಯಾತ್ರಾ ಸ್ಥಳಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗುತ್ತದೆ.

ಸುಮಾರು 5 ಎಕರೆ ಪ್ರದೇಶದಲ್ಲಿ ಕಲ್ಕಿ ದೇವಸ್ಥಾನ ನಿರ್ಮಾಣವಾಗಲಿದ್ದು, ನಿರ್ಮಾಣಕ್ಕೆ 5 ವರ್ಷ ಬೇಕಾಗಬಹುದು. ಕಲ್ಕಿ ಪೀಠವು ಹಳೆಯ ಸ್ಥಳದಲ್ಲಿಯೇ ಇರಲಿದೆ ಎಂಬುದು ಗಮನಾರ್ಹ. ಕಲ್ಕಿಧಾಮವನ್ನು ನಿರ್ಮಿಸಿದಾಗ, ಹೊಸ ದೇವರ ವಿಗ್ರಹವಿರುತ್ತದೆ. ಅಂದರೆ ಆ ಮೂರ್ತಿಗೆ ಪ್ರಾಣಪ್ರತಿಷ್ಟೆ ನಡೆಯಲಿದೆ.

ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ದ್ವಿಶತಕ: ವಿಶ್ವಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಯಶಸ್ವಿ

ಅಂದಹಾಗೆ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇದೇ ವೇಳೆ ದೇಶ ವಿದೇಶಗಳಿಂದ ಆಗಮಿಸುವ ಸಂತರು, ಋಷಿಮುನಿಗಳಿಗೆ ಗುಡಾರ ನಗರಿ ಕಲ್ಕಿಪುರಂನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

 

Trending News