Presidential polls 2022: ದೇವಾಲಯದಲ್ಲಿ ಕಸ ಗುಡಿಸಿದ ದ್ರೌಪದಿ ಮುರ್ಮು

Presidential polls 2022: ದ್ರೌಪದಿ ಮುರ್ಮು ಒಡಿಶಾದ ಬುಡಕಟ್ಟು ಕುಟುಂಬದಲ್ಲಿ 1958 ರಲ್ಲಿ ಜನಿಸಿದರು. ಮೊದಲಿಗೆ ಅವರು ಶಿಕ್ಷಕಿಯಾಗಿದ್ದರು. ಅವರ ರಾಜಕೀಯ ಜೀವನವು 1997 ರಲ್ಲಿ ಪ್ರಾರಂಭವಾಯಿತು. 

Written by - Chetana Devarmani | Last Updated : Jun 22, 2022, 02:06 PM IST
  • ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು
  • ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬಿಜೆಪಿ
  • ಜಗನ್ನಾಥ್‌ ದೇವಾಲಯದಲ್ಲಿ ಕಸ ಗುಡಿಸಿದ ದ್ರೌಪದಿ ಮುರ್ಮು
Presidential polls 2022: ದೇವಾಲಯದಲ್ಲಿ ಕಸ ಗುಡಿಸಿದ ದ್ರೌಪದಿ ಮುರ್ಮು  title=
ದ್ರೌಪದಿ ಮುರ್ಮು 

Presidential polls 2022: ಬುಡಕಟ್ಟು ಜನಾಂಗದ ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ. ಈ ಘೋಷಣೆಯ ನಂತರ ಆಕೆಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇನ್ನು ಮುಂದೆ ಅವರಿಗೆ Z+ ಭದ್ರತೆ ಸಿಗಲಿದೆ. ಆದ್ದರಿಂದ, ಒಡಿಶಾದ ನಾಯಕ ದೇವಾಲಯದಲ್ಲಿ ಪೂಜೆ ಮಾಡುವ ಮೂಲಕ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು. ರಾಷ್ಟ್ರಪತಿ ಅಭ್ಯರ್ಥಿಯಾದ ಮುರ್ಮು ಅವರು ದೇವಸ್ಥಾನದ ಆವರಣವನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದರು. 

ಇದನ್ನೂ ಓದಿ: ಮಹಾರಾಷ್ಟ್ರ ರಾಜ್ಯಪಾಲ ಕೊಶ್ಯಾರಿಗೆ ಕರೋನಾ.! ಬಹುಮತ ಸಾಬೀತಿಗೆ ಅನುಮೋದನೆ ನೀಡುವವರು ಯಾರು ?

ಮುಂದಿನ ದಿನಗಳಲ್ಲಿ ಅವರು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಆಗುತ್ತಾರೆ. ಇಂದು, ಬುಧವಾರ ಬೆಳಿಗ್ಗೆ ರಾಯರಂಗಪುರದಲ್ಲಿರುವ ಜಗನ್ನಾಥ ದೇವಾಲಯಕ್ಕೆ ತೆರಳಿದ ಮುರ್ಮು, ಅಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಶಿವನ ದೇವಸ್ಥಾನಕ್ಕೆ ತೆರಳಿದರು. ದೇವಸ್ಥಾನದ ಆವರಣದಲ್ಲಿ ಪೊರಕೆ ಹಿಡಿದು ಕಸ ಗುಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಡಕಟ್ಟು ನಾಯಕಿಯ ಈ ಸರಳತೆಯನ್ನು ನೆಟಿಜನ್‌ಗಳು ಸಹ ಹಾಡಿ ಹೊಗಳಿದ್ದಾರೆ.

ದ್ರೌಪದಿ ಒಡಿಶಾದ ಬುಡಕಟ್ಟು ಕುಟುಂಬದಲ್ಲಿ 1958 ರಲ್ಲಿ ಜನಿಸಿದರು. ಮೊದಲಿಗೆ ಅವರು ಶಿಕ್ಷಕಿಯಾಗಿದ್ದರು. ಅವರ ರಾಜಕೀಯ ಜೀವನವು 1997 ರಲ್ಲಿ ಪ್ರಾರಂಭವಾಯಿತು. ಅವರು ರಾಯರಂಗಪುರದ ಜಿಲ್ಲಾ ಮಂಡಳಿಯ ಕೌನ್ಸಿಲರ್ ಆಗಿ ಆಯ್ಕೆಯಾದರು. ನಂತರ ಎರಡು ಬಾರಿ ಶಾಸಕರಾಗಿದ್ದರು. ನವೀನ್ ಪಟ್ನಾಯಕ್ ಅವರ ಸಂಪುಟದಲ್ಲಿಯೂ ಅವರು ಸ್ಥಾನ ಪಡೆದರು. ಮುರ್ಮು ನಂತರ ಕಳೆದ ವರ್ಷದವರೆಗೂ ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಜೂನ್ 25ರಂದು ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Maharashtra Political Crisis: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯ ಹಿಂಟ್‌ ಕೊಟ್ಟ ರಾವತ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News