ತಮ್ಮ ಆತ್ಮಚರಿತ್ರೆಯಲ್ಲಿ 2014ರಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಬಿಚ್ಚಿಟ್ಟ Pranab Mukherjee

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆ 'ದಿ ಪ್ರೆಸಿಡೆನ್ಶಿಯಲ್ ಇಯರ್ಸ್ 2012-2017' ಮಾರುಕಟ್ಟೆಗೆ ಬಂದಿದೆ. ಕಾಂಗ್ರೆಸ್ ಪಕ್ಷದಿಂದಲೇ ರಾಷ್ಟ್ರಪತಿ ಹುದ್ದೆವರೆಗೂ ಬೆಳೆದ ಪ್ರಣಬ್ ಮುಖರ್ಜಿ ತಮ್ಮ ಆತ್ಮಚರಿತ್ರೆಯಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಸೋಲಿಗೆ ಕಾರಣಗಳನ್ನು ಹೇಳಿದ್ದಾರೆ.

Written by - Yashaswini V | Last Updated : Jan 6, 2021, 07:30 AM IST
  • ಸಂಸತ್ತಿನ ಕಾರ್ಯಕಲಾಪವನ್ನು ಸುಗಮವಾಗಿ ನಡೆಸಲು ನರೇಂದ್ರ ಮೋದಿ ಸರ್ಕಾರ ವಿಫಲ
  • ನೋಟು ಅಮಾನ್ಯೀಕರಣ ಮಾಡುವ ಮೊದಲು ಈ ಬಗ್ಗೆ ನನ್ನ ಬಳಿ ಚರ್ಚಿಸಲಿಲ್ಲ.
  • ಪ್ರಧಾನಿ ನರೇಂದ್ರ ಮೋದಿ ಬಗ್ಗೆಯೂ ಅಸಮಾಧಾನ ಹೊರಹಾಕಿರುವ ಪ್ರಣವ್ ಮುಖರ್ಜಿ
ತಮ್ಮ ಆತ್ಮಚರಿತ್ರೆಯಲ್ಲಿ 2014ರಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಬಿಚ್ಚಿಟ್ಟ Pranab Mukherjee  title=
The Presidential Years 2012-2017

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Former President Pranav Mukherjee) ಅವರ ಆತ್ಮಚರಿತ್ರೆ 'ದಿ ಪ್ರೆಸಿಡೆನ್ಶಿಯಲ್ ಇಯರ್ಸ್ 2012-2017' (The Presidential Years 2012-2017' ಮಂಗಳವಾರ ಮಾರುಕಟ್ಟೆಗೆ ಬಂದಿದೆ. ಈ ಪುಸ್ತಕದಲ್ಲಿ ಪ್ರಣಬ್ ಮುಖರ್ಜಿ ಅವರು ಕಾಂಗ್ರೆಸ್ ಪಕ್ಷದ ವರ್ಚಸ್ವಿ ನಾಯಕತ್ವ ಕೊನೆಯಾಗುತ್ತಿರುವುದನ್ನು ಗುರುತಿಸಲು ಸಾಧ್ಯವಾಗದೆ ಇರುವುದು 2014ರ ಲೋಕಸಭೆಯಲ್ಲಿ ಆ ಪಕ್ಷ ಸೋಲು ಕಾಣುವುದಕ್ಕೆ ಒಂದು ಕಾರಣವಾಗಿರಬಹುದು ಎಂದು ಬರೆದಿದ್ದಾರೆ.

ಕಾಂಗ್ರೆಸ್ ಸಾಧನೆ ಬಗ್ಗೆ ನಿರಾಶೆ :
ಮಾಜಿ ರಾಷ್ಟ್ರಪತಿಗಳು ತಮ್ಮ ಪುಸ್ತಕದಲ್ಲಿ '2014 ರ ಲೋಕಸಭಾ ಚುನಾವಣೆಯ ಎಣಿಕೆಯ ದಿನದಂದು ಪ್ರತಿ ಅರ್ಧಗಂಟೆಗೆ ಫಲಿತಾಂಶದ ಬಗ್ಗೆ ನನಗೆ ತಿಳಿಸುವಂತೆ ಸಹಾಯಕರಿಗೆ ಸೂಚನೆ ನೀಡಿದ್ದೆ.  ಜನಾದೇಶ ಪ್ರಕಟಗೊಳ್ಳುತ್ತಿದ್ದಂತೆ ತಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕ್ಷಮತೆ ನಿರಾಶೆ ತರಿಸಿತು' ಎಂದು ಬೇಸರವನ್ನು ದಾಖಲಿಸಿದ್ದಾರೆ.

ಕೇವಲ 44 ಸ್ಥಾನ ಬಂದಿದ್ದು ಆಶ್ಚರ್ಯ :
2014ರ ಲೋಕಸಭಾ ಚುನಾವಣೆಯಲ್ಲಿ (2014 Lokasbha Election) ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಮಾತ್ರ ಗೆದ್ದಿದೆ ಎಂಬುದನ್ನು ನಂಬಲು ಕಷ್ಟವಾಗಿತ್ತು. ಕಾಂಗ್ರೆಸ್ ಒಂದು ರಾಷ್ಟ್ರೀಯ ಸಂಸ್ಥೆಯಾಗಿದ್ದು ಅದು ಜನರ ಜೀವನದೊಂದಿಗೆ ಸಂಬಂಧ ಹೊಂದಿದೆ. ಅದರ ಭವಿಷ್ಯವು ಯಾವಾಗಲೂ ಚಿಂತನಶೀಲವಾದುದಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ಯೋಚಿಸುವ ವಿಷಯವಾಗಿದೆ ಎಂದು ಹಲವು ಸಲ ಕಾಂಗ್ರೆಸ್ ಸರ್ಕಾರಗಳಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಮುಖರ್ಜಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : 2014ರ ಕಾಂಗ್ರೆಸ್ ಪಕ್ಷದ ಸೋಲಿಗೆ ಇವರೇ ಕಾರಣವಂತೆ - ಪ್ರಣಬ್ ಮುಖರ್ಜಿ ದೂಷಿಸಿದ್ದು ಇವರನ್ನೇ...

ವರ್ಚಸ್ವಿ ನಾಯಕತ್ವ ಗುರುತಿಸುವಲ್ಲಿ ವಿಫಲ :
ಪಕ್ಷವು ತನ್ನ ವರ್ಚಸ್ವಿ ನಾಯಕತ್ವವನ್ನು ಗುರುತಿಸುವುದರಲ್ಲಿ ವಿಫಲವಾಗಿದೆ ಎಂದು ನಾನು ಭಾವಿಸುತ್ತೇನೆ. ಪಂಡಿತ್ ಜವಾಹರಲಾಲ್ ನೆಹರೂ (Jawaharlal Nehuru) ಅವರಂತಹ ಪ್ರಬಲ ನಾಯಕರು ಭಾರತವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಲವಾದ ಮತ್ತು ಸ್ಥಿರ ರಾಷ್ಟ್ರವಾಗಿ ಅಭಿವೃದ್ಧಿ ಹೊಂದಿದೆಯೆಂದು ಖಚಿತಪಡಿಸಿದ್ದರು. ಈಗ ಅಂತಹ ಅದ್ಭುತ ನಾಯಕರು ಇಲ್ಲದಿರುವುದು ವಿಷಾದಕರ. ಈಗ 'ಆವರೇಜ್ ಸರ್ಕಾರ' ಇದೆ ಎಂದು ಬರೆದಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ನಿಧನಕ್ಕೆ ಸಂತಾಪ ಸೂಚಿಸಿದ PM Modi ಹೇಳಿದ್ದೇನು?

ಮೋದಿ ವಿರುದ್ಧ ಅಸಮಾಧಾನ :
ತಮ್ಮ ಪುಸ್ತಕದಲ್ಲಿ ಪ್ರಣವ್ ಮುಖರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಜೊತೆಗಿನ ಸೌಹಾರ್ದಯುತ ಸಂಬಂಧವನ್ನು ಸಹ ಉಲ್ಲೇಖಿಸಿದ್ದಾರೆ. ಜೊತೆಜೊತೆಯಲ್ಲಿ ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಸಂಸತ್ತನ್ನು ಸುಗಮವಾಗಿ ನಡೆಸಲು ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಕಹಿ ಚರ್ಚೆಗೆ ಕಾರಣವಾದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರದ ದುರಹಂಕಾರ ಮತ್ತು ಅದರ ಅಸಮರ್ಥತೆಗೆ ನಾನೂ ಕಾರಣ ಎಂದು ಬರೆದು ಕೊಂಡಿದ್ದಾರೆ.

ಇದನ್ನೂ ಓದಿ : ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಬೇಕಾಗಿದೆ- ಪ್ರಣಬ್ ಮುಖರ್ಜೀ

ನರೇಂದ್ರ ಮೋದಿ ನವೆಂಬರ್ 8, 2016 ನವೆಂಬರ್ 8ರಂದು ಹಳೆಯ 500, 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡುವ ಮೊದಲು ರಾಷ್ಟ್ರಪತಿಗಳಾದ ತಮ್ಮೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿರಲಿಲ್ಲ, ಆದರೆ ಅಂತಹ ಘೋಷಣೆಗೆ ಆಕಸ್ಮಿಕ ಅಗತ್ಯವಿರುವುದರಿಂದ ಇದು ತಮಗೆ ಆಶ್ಚರ್ಯವಾಗಿರಲಿಲ್ಲ ಎಂದು ಪ್ರಣವ್ ಮುಖರ್ಜಿ (Pranab Mukherjee) ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಹೆಗ್ಗಡೆವಾರ್ ಭಾರತ ಮಾತೆಯ ಮಹಾನ್ ಸುಪುತ್ರ -ಪ್ರಣಬ್ ಮುಖರ್ಜೀ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News