Post-Mortem Rule Update:ಇನ್ಮುಂದೆ ದೇಶದಲ್ಲಿ ಸೂರ್ಯಾಸ್ತದ ನಂತರವೂ ಮರಣೋತ್ತರ ಪರೀಕ್ಷೆ ನಡೆಸಬಹುದು

Post-Mortem Rule Update: ಇನ್ಮುಂದೆ ಸೂರ್ಯಾಸ್ತದ ನಂತರವೂ ದೇಶದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಬಹುದು ಎಂದು ಕೇಂದ್ರ ಆರೋಗ್ಯ (Union Health Ministry) ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಹೇಳಿದ್ದಾರೆ. ಬ್ರಿಟಿಷರ ಕಾಲದ ವ್ಯವಸ್ಥೆ ಕೊನೆಗೊಂಡಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. 

Written by - Nitin Tabib | Last Updated : Nov 15, 2021, 07:41 PM IST
  • ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವರ ಮಹತ್ವದ ಘೋಷಣೆ.
  • ಇನ್ಮುಂದೆ ದೇಶಾದ್ಯಂತ ಸೂರ್ಯಾಸ್ತದ ಬಳಿಕವೂ ಮರಣೋತ್ತರ ಪರೀಕ್ಷೆ ನಡೆಸಬಹುದು.
  • ಯಾವ ಸಂದರ್ಭದಲ್ಲಿ ರಾತ್ರಿ ಹೊತ್ತು ಮರಣೋತ್ತರ ಪರೀಕ್ಷೆ ನಡೆಸಲಾಗುವುದಿಲ್ಲ? ತಿಳಿಯಲು ವರದಿ ಓದಿ.
Post-Mortem Rule Update:ಇನ್ಮುಂದೆ ದೇಶದಲ್ಲಿ ಸೂರ್ಯಾಸ್ತದ ನಂತರವೂ ಮರಣೋತ್ತರ ಪರೀಕ್ಷೆ ನಡೆಸಬಹುದು title=
Post-Mortem Rule Update (File Photo)

Post-Mortem Rule Update: ಇನ್ಮುಂದೆ ಸೂರ್ಯಾಸ್ತದ ನಂತರವೂ ಮೃತ ದೇಹಗಳ ಮರಣೋತ್ತರ ಪರೀಕ್ಷೆಯನ್ನು (Post-Mortem In Night Time) ದೇಶದಲ್ಲಿ ಮಾಡಬಹುದು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಈ ಮಾಹಿತಿಯನ್ನು ನೀಡಿದ್ದಾರೆ. ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸುವ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು  ಇನ್ಮುಂದೆ ಸೂರ್ಯಾಸ್ತದ ನಂತರವೂ ಮರಣೋತ್ತರ ಪರೀಕ್ಷೆಯನ್ನು (Post Mortam) ಮಾಡಬಹುದಾಗಿದೆ ಎಂದು ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಬ್ರಿಟಿಷರ ಕಾಲದ ಹಳೆ ವ್ಯವಸ್ಥೆ ಕೊನೆಗೊಂಡಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. 

ಅಂಗಾಂಗ ದಾನದ ಮರಣೋತ್ತರ ಪರೀಕ್ಷೆಗಳನ್ನು ಆದ್ಯತೆಯ ಆಧಾರದ ಮೇಲೆ ಮಾಡಬೇಕು ಮತ್ತು ಅಂತಹ ಮರಣೋತ್ತರ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸಲು ಮೂಲಸೌಕರ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಸೂರ್ಯಾಸ್ತದ ನಂತರವೂ ಪರೀಕ್ಷೆ ಮಾಡಬಹುದು ಎಂದು ಹೊಸ ಪ್ರೋಟೋಕಾಲ್ ಹೇಳುತ್ತದೆ. ಈ ನಿರ್ಧಾರದಲ್ಲಿ, ಆರೋಗ್ಯ ಸಚಿವಾಲಯವು ಯಾವುದೇ ಅನುಮಾನಗಳನ್ನು ನಿವಾರಿಸಲು ಮತ್ತು ಕಾನೂನು ಉದ್ದೇಶಗಳಿಗಾಗಿ ರಾತ್ರಿ ಎಲ್ಲಾ ಮರಣೋತ್ತರ ಪರೀಕ್ಷೆಗಳಿಗೆ ಮರಣೋತ್ತರ ಪರೀಕ್ಷೆಯ ವೀಡಿಯೊ ರೆಕಾರ್ಡಿಂಗ್ ಮಾಡಲಾಗುವುದು ಎಂದು ಹೇಳಿದೆ. 

ಇದನ್ನೂ ಓದಿ-Karnataka Pvt Schools : ರಾಜ್ಯದ ಖಾಸಗಿ ಶಾಲೆಗಳ 15% ಶುಲ್ಕ ರಿಯಾಯಿತಿ ಆದೇಶ : ರಾಜ್ಯ ಸರ್ಕಾರದಿಂದ ಸ್ಪಷ್ಟೀಕರಣ

ಯಾವ ಸಂದರ್ಭದಲ್ಲಿ ರಾತ್ರಿ ಹೊತ್ತು ಮರಣೋತ್ತರ ಪರೀಕ್ಷೆ ನಡೆಸಲಾಗುವುದಿಲ್ಲ?
ರಾತ್ರಿ ಯಾವ  ಸಂದರ್ಭಗಳಲ್ಲಿ  ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುವುದಿಲ್ಲ ಎಂಬುದರ ಮಾಹಿತಿಯನ್ನೂ ಕೂಡ ಕೇಂದ್ರ ಸರ್ಕಾರ ನೀಡಿದೆ. ತೀರ್ಪಿನ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ ಇಲ್ಲದಿದ್ದರೆ, ರಾತ್ರಿಯ ಸಮಯದಲ್ಲಿ ಕೊಲೆ, ಆತ್ಮಹತ್ಯೆ, ಅತ್ಯಾಚಾರ, ವಿರೂಪಗೊಂಡ ದೇಹ ಮುಂತಾದ ವಿಭಾಗಗಳ ಅಡಿಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂದು ಹೇಳಲಾಗಿದೆ. ಈ ಹೊಸ ನಿರ್ಧಾರದ ಬಗ್ಗೆ ಸರ್ಕಾರವು ಸಂಬಂಧಿಸಿದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ-Congress ಹಿರಿಯ ಮುಖಂಡ Salman Khurshid ನಿವಾಸದ ಮೇಲೆ ದಾಳಿ

ಈ ವಿಷಯಕ್ಕೆ ಸಂಬಂಧಿಸಿದ ಮೂಲವೊಂದರಿಂದ ಬಂದ ಮಾಹಿತಿಯ ಪ್ರಕಾರ, ಇತ್ತೀಚೆಗೆ ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆಯ ವಿಷಯವನ್ನು ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದಲ್ಲಿ ತಾಂತ್ರಿಕ ಸಮಿತಿಯು ಪರಿಶೀಲಿಸಿದೆ ಎನ್ನಲಾಗಿದೆ.  ಈಗಾಗಲೇ ಕೆಲವು ಸಂಸ್ಥೆಗಳು ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ತಂತ್ರಜ್ಞಾನದಲ್ಲಿನ ಕ್ಷಿಪ್ರ ಪ್ರಗತಿ ಮತ್ತು ಸುಧಾರಣೆಯನ್ನು ಪರಿಗಣಿಸಿ, ವಿಶೇಷವಾಗಿ ಮರಣೋತ್ತರ ಪರೀಕ್ಷೆಗೆ ಅಗತ್ಯವಾದ ಬೆಳಕಿನ ಮತ್ತು ಅಗತ್ಯ ಮೂಲಸೌಕರ್ಯಗಳ ಲಭ್ಯತೆಯನ್ನು ಪರಿಗಣಿಸಿ, ಆಸ್ಪತ್ರೆಗಳಲ್ಲಿ ರಾತ್ರಿ ಅಂತಿಮ-ಪರೀಕ್ಷೆ ನಡೆಸಲು ಸಾಧ್ಯವಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ-ಎಣ್ಣೆ ಪ್ರಿಯರೆ ಗಮನಿಸಿ : ನ. 17 ರಿಂದ ದೆಹಲಿಯಲ್ಲಿ ಸಿಗುವುದಿಲ್ಲ ನಿಮ್ಮ ನೆಚ್ಚಿನ ಎಣ್ಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News