ಕತ್ತೆಗಳನ್ನೂ ಬಂಧಿಸಿದ ಪೊಲೀಸರು!

ಕತ್ತೆಗಳ ಗುಂಪೊಂದು ಬೆಲೆಬಾಳುವ ಗಿಡಗಳನ್ನು ತಿಂದು ಹಾಕಿದವೆಂದು ಆರೋಪಿಸಿ ಅವುಗಳನ್ನು ಜೈಲಿಗಟ್ಟಿದ ಪ್ರಸಂಗ ಉತ್ತರಪ್ರದೇಶದಲ್ಲಿ ನಡೆದಿದೆ. 

Last Updated : Nov 28, 2017, 04:19 PM IST
ಕತ್ತೆಗಳನ್ನೂ ಬಂಧಿಸಿದ ಪೊಲೀಸರು! title=

ನವದೆಹಲಿ: ಕತ್ತೆಗಳ ಗುಂಪೊಂದು ಬೆಲೆಬಾಳುವ ಗಿಡಗಳನ್ನು ತಿಂದು ಹಾಕಿದವೆಂದು ಆರೋಪಿಸಿ ಅವುಗಳನ್ನು ಜೈಲಿಗಟ್ಟಿದ ಪ್ರಸಂಗ ಉತ್ತರಪ್ರದೇಶದಲ್ಲಿ ನಡೆದಿದೆ. 

ಉತ್ತರಪ್ರದೇಶದ ಜಲಾನ್ ಜಿಲ್ಲೆಯ ಉರಲ್ ಜೈಲಿನ ಹೊರಭಾಗದಲ್ಲಿ ಬೆಳೆದಿದ್ದ ಬೆಳೆಬಾಳುವ ಗಿಡಗಳನ್ನು ತಿಂದು ಅಪರಾಧ ಎಸಗಿವೆ ಎಂದು ಆರೋಪಿಸಿ ಅವುಗಳನ್ನು ಜೈಲಿನಲ್ಲಿ 4 ದಿನಗಳ ಕಾಲ ಬಂಧನದಲ್ಲಿಟ್ಟು, ಸೋಮವಾರ ಬಿಡುಗಡೆಗೊಳಿಸಲಾಗಿದೆ. ಆದರೆ ಇದರಿಂದ ಕತ್ತೆಗಳಿಗೆ ತಮ್ಮ ತಪ್ಪಿನ ಅರಿವಾಗಿದೆಯೇ, ಇಲ್ಲವೇ ಎಂಬುದು ತಿಳಿದು ಬಂದಿಲ್ಲ!

ಬಹಳ ವಿಚಿತ್ರ ಎನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ. ಜೈಲಿನ ಸುತ್ತಲಿನ ಪ್ರದೇಶದಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಗಿಡಗಳನ್ನು ಬೆಳೆಸಲಾಗಿದ್ದು, ಕತ್ತೆಗಳನ್ನು ಆ ಪ್ರದೇಶದಲ್ಲಿ ಬಿಡದಂತೆ ಅವುಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

''ಇಲ್ಲಿರುವ ಗಿಡಗಳು ಬೆಳೆಬಾಳುವುವು. ಅವುಗಳನ್ನು ಕತ್ತೆಗಳು ತಿಂದು ಹಾಳು ಮಾಡುತ್ತಿದ್ದರಿಂದ ಅವುಗಳನ್ನು ಈ ಪ್ರದೇಶದಲ್ಲಿ ಬಿಡಬಾರದೆಂದು ಹಲವು ಬಾರಿ ಅದರ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ, ಅವರು ಅದನ್ನು ಪಾಲಿಸಲಿಲ್ಲ. ಹಾಗಾಗಿ ಕತ್ತೆಗಳನ್ನು ಬಂಧಿಸಿದೆವು'' ಎಂದು ಹಿರಿಯ ಪೋಲಿಸ್ ಪೇದೆ ಆರ್.ಕೆ.ಮಿಶ್ರಾ ತಿಳಿಸಿದ್ದಾರೆ. 

ಈ ಹಿಂದೆ ರಾಜ್ಯದಲ್ಲಿ ಸಚಿವರೊಬ್ಬರಿಗೆ ಸಂಬಂಧಿಸಿದ ಎಮ್ಮೆಗಳು ಕಾಣೆಯಾದ ಸಂದರ್ಭದಲ್ಲಿ ಇಡೀ  ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿತ್ತು. ಆದರೆ ಈ ಕತ್ತೆಗಳು ನಾಲ್ಕು ದಿನಗಳವರೆಗೆ ಜೈಲಿನಲ್ಲಿ ಬಂಧಿಯಾಗಿದ್ದರೂ ಸಹಾ ಯಾವೊಬ್ಬ ರಾಜಕಾರಣಿಯ ಬೆಂಬಲವನ್ನು ಪಡೆಯುವಲ್ಲಿ ವಿಫಲವಾದವು!

ಕುತೂಹಲಕಾರಿಯಾಗಿ ವಿಷಯವೆಂದರೆ, ಉನ್ನತ ಅಪರಾಧ ಪ್ರಮಾಣಕ್ಕೆ ಕುಖ್ಯಾವಾದ ಉತ್ತರ ಪ್ರದೇಶ ಇತ್ತೀಚಿನ ವಾರಗಳಲ್ಲಿ ಕ್ರಿಮಿನಲ್ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಾಣಿಗಳನ್ನು ಜೈಲಿನಲ್ಲಿ ಬಂಧಿಸಿಟ್ಟು ಇಲ್ಲಿನ ಪೋಲಿಸರು ಮತ್ತೊಂದು ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಕಾರ್ಯಕ್ಕೆ ನಗಬೇಕೋ, ಅಳಬೇಕೋ ಅಥವಾ ಪ್ರಶಂಶಿಸಬೇಕೋ ನೀವೇ ನಿರ್ಧರಿಸಿ. 

Trending News