ಇಂದು ಸಿಎಂಗಳ ಜೊತೆ ಪಿಎಂ ಮೋದಿ 5ನೇ ಸಭೆ, 10 ಪ್ರಮುಖ ಅಂಶಗಳು

ಮೊದಲ ಹಂತದಲ್ಲಿ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ನಡೆಯಲಿದೆ. ಅರ್ಧಗಂಟೆಯ ಬಿಡುವಿನ ಬಳಿಕ ಸಂಜೆ 6 ಗಂಟೆಯಿಂದ ಎರಡ‌ನೇ ಹಂತದ ಸಭೆ ನಡೆಯಲಿದೆ.

Written by - Yashaswini V | Last Updated : May 11, 2020, 06:30 AM IST
ಇಂದು ಸಿಎಂಗಳ ಜೊತೆ ಪಿಎಂ ಮೋದಿ 5ನೇ ಸಭೆ, 10 ಪ್ರಮುಖ ಅಂಶಗಳು  title=

ನವದೆಹಲಿ: ಜಾಗತಿಕ ಪಿಡುಗು ಕೊರೊನಾವೈರಸ್ (Coronavirus) ಭಾರತಕ್ಕೆ ವಕ್ಕರಿಸಿದ ಮೇಲೆ ಅದನ್ನು ತಡೆಯುವ ದೃಷ್ಟಿಯಿಂದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಈಗಾಗಲೇ 4 ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು 5ನೇ ಸಭೆ ನಡೆಸಲಿದ್ದಾರೆ. ಸಭೆಯ 10 ಪ್ರಮುಖ ಅಂಶಗಳು ಈ ರೀತಿ ಇವೆ.

1) ಮೇ 17ಕ್ಕೆ 3ನೇ ಹಂತದ ಲಾಕ್‌ಡೌನ್ (Lockdown) ಮುಕ್ತಾಯವಾಗುತ್ತಿರುವುದರಿಂದ ಕೊರೋನಾ ವೈರಸ್ ಹರಡುವಿಕೆ ಮತ್ತು ಲಾಕ್‌ಡೌನ್ ವಿಷಯಗಳಲ್ಲಿ ಮುಂದೇನು ಮಾಡಬೇಕೆಂದು ಸಭೆ ಕರೆಯಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಎರಡು ಹಂತದಲ್ಲಿ ಸಭೆ ನಡೆಯಲಿದೆ. ಮೊದಲ ಹಂತದಲ್ಲಿ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ನಡೆಯಲಿದೆ. ಅರ್ಧಗಂಟೆಯ ಬಿಡುವಿನ ಬಳಿಕ ಸಂಜೆ 6 ಗಂಟೆಯಿಂದ ಎರಡ‌ನೇ ಹಂತದ ಸಭೆ ನಡೆಯಲಿದೆ.

2) ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala sitharaman) ಮತ್ತು ಆರೋಗ್ಯ ಸಚಿವ ಡಾ. ಹರ್ಷವರ್ಧನ್ (Dr Harshavardhan) ಕೂಡ ಭಾಗವಹಿಸಲಿದ್ದಾರೆ.

3) ಈಗಾಗಲೇ ಒಂದಲ್ಲ, ಎರಡಲ್ಲ, ಮೂರು ಬಾರಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೊರೊನಾವೈರಸ್ ಕೋವಿಡ್-19 (Covid-19) ಹರಡುವಿಕೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ‌ ಬದಲಿಗೆ ಹೆಚ್ಚಾಗುತ್ತಿದೆ. ಈ ಬಗ್ಗೆ ಚರ್ಚಿಸಾಗುತ್ತದೆ.

4) ಮೇ‌ 17ರ ಬಳಿಕ ಲಾಕ್‌ಡೌನ್ ತೆರವುಗೊಳಿಸಿದ್ದೇಯಾದರೆ ಸೋಂಕು ಹರುಡುವಿಕೆ ಇನ್ನೂ ಹೆಚ್ಚಾಗುವ ಸಂಭವವಿದ್ದು, ಇಂದಿನ ಸಭೆಯಲ್ಲಿ ಈ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯಲಿದೆ. 

5) ಲಾಕ್‌ಡೌನ್ ಮುಂದುವರೆಸಿದರೆ ದೇಶದ ಉತ್ಪಾದನಾ ವಲಯದ ಮೇಲೆ ಯಾವ ಪರಿಣಾಮ ಆಗಬಹುದು? ಅದರಿಂದ ಆರ್ಥಿಕತೆ ಮೇಲೆ ಎಂತಹ ದುಷ್ಪರಿಣಾಮ ಉಂಟಾಗಬಹುದು ಎಂಬುದೂ ಚರ್ಚೆ ಆಗಲಿದೆ.

6) 3ನೇ ಹಂತದ ಲಾಕ್‌ಡೌನ್  ವೇಳೆ ಕೆಲ ವಿನಾಯಿತಿ ನೀಡಲಾಗಿತ್ತು. ಇದರಿಂದ ಕೊರೊನಾ ವೈರಸ್ ಹರಡುವಿಕೆ ಮೇಲೆ ಯಾವ ರೀತಿಯ ಪರಿಣಾಮ ಆಯಿತು. ಉತ್ಪಾದನೆಗೆ ಎಷ್ಟರ ಮಟ್ಟಿಗೆ ಉತ್ತೇಜನವಾಯಿತು ಎಂಬ ಸಮಾಲೋಚನೆ ನಡೆಯಲಿದೆ.

7) ಈಗ ದೊಡ್ಡ ಮಟ್ಟದ ಸಮಸ್ಯೆ ಆಗಿರುವ ವಲಸೆ ಕಾರ್ಮಿಕರ ವಿಷಯದಲ್ಲಿ ಯಾವ ಯಾವ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂಬುದರ ಪುನರ್ ಮನನ ಆಗಲಿದೆ.

8) ಕೆಲವು ರಾಜ್ಯಗಳು ಅಂತರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡಿ ಎನ್ನುತ್ತಿವೆ‌. ಕೆಲವು ರಾಜ್ಯಗಳು ಬಿಲ್ ಕುಲ್ ಬೇಡ ಎನ್ನುತ್ತಿವೆ. ಈ ಬಗ್ಗೆ ಕೂಡ ಬೆಳಕು ಹರಿಯಲಿದೆ.

9) ಕೊರೊನಾ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಕೆಲವು ರಾಜ್ಯಗಳು ಒತ್ತಾಯಿಸಲಿವೆ. ಈಗಾಗಲೇ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪತ್ರಬರೆದಿದ್ದಾರೆ. ಸಭೆಯಲ್ಲಿ ಇನ್ನೂ ಕೆಲವರು ದನಿ ಎತ್ತುವ ಸಂಭವವಿದೆ.

10) ಹಿಂದಿನ ಸಭೆಗಳಲ್ಲಿ ಕೆಲವೇ ಕೆಲವು ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ಇರುತ್ತಿತ್ತು‌. ಈ ಬಾರಿ ಬಹುತೇಕ ಮುಖ್ಯಮಂತ್ರಿಗಳಿಗೆ ಅವಕಾಶ ಇರಲಿದೆ ಎಂದು ತಿಳಿದುಬಂದಿದೆ.

Trending News