ಸಂಸತ್ತಿನಲ್ಲಿ ಸುದೀರ್ಘ ಭಾಷಣ ಮಾಡಿದವರಲ್ಲಿ ಪ್ರಧಾನಿ ಮೋದಿ ಮೊದಲಿಗರೇನಲ್ಲ !

ಭಾರತದ ಸಂಸತ್ತಿನ ಇತಿಹಾಸದಲ್ಲಿ ಸುದೀರ್ಘ ಭಾಷಣ ಮಾಡಿದವರಲ್ಲಿ ಮೋದಿ ಮೊದಲಿಗರೇನಲ್ಲ. ಈ ಹಿಂದೆ ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಸುದೀರ್ಘ ಸಮಯ ತೆಗೆದುಕೊಂಡ ಬಹಳಷ್ಟು ನಾಯಕರನ್ನು ನಾವು ಕಾಣಬಹುದು. 

Last Updated : Feb 7, 2018, 07:35 PM IST
ಸಂಸತ್ತಿನಲ್ಲಿ ಸುದೀರ್ಘ ಭಾಷಣ ಮಾಡಿದವರಲ್ಲಿ ಪ್ರಧಾನಿ ಮೋದಿ ಮೊದಲಿಗರೇನಲ್ಲ ! title=

ನವದೆಹಲಿ : ಲೋಕಸಭೆಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಸುಧೀರ್ಘ ಭಾಷಣ ಮಾಡಿದರಲ್ಲದೆ, ಇದಕ್ಕಾಗಿ ಅವರು ಸುಮಾರು 1 ಗಂಟೆ ಮತ್ತು 31 ನಿಮಿಷಗಳ ಕಾಲ ತೆಗೆದುಕೊಂಡರು. ಹಾಗೆಂದ ಮಾತ್ರಕ್ಕೆ ಭಾರತದ ಸಂಸತ್ತಿನ ಇತಿಹಾಸದಲ್ಲಿ ಸುದೀರ್ಘ ಭಾಷಣ ಮಾಡಿದವರಲ್ಲಿ ಮೋದಿ ಮೊದಲಿಗರೇನಲ್ಲ. ಈ ಹಿಂದೆ ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಸುದೀರ್ಘ ಸಮಯ ತೆಗೆದುಕೊಂಡ ಬಹಳಷ್ಟು ನಾಯಕರನ್ನು ನಾವು ಕಾಣಬಹುದು. 

ಹೀಗೆ ಸಂಸತ್ತಿನ ದೀರ್ಘ ಭಾಷಣಗಳನ್ನು ಮಾಡಿದವರ ಪಟ್ಟಿ ಇಲ್ಲಿದೆ:

  • ತಮ್ಮ 13 ದಿನಗಳ ಸರ್ಕಾರದ ನಂತರ 1996 ರ ಮೇ 27 ರಂದು ಸಂಸತ್ತಿನಲ್ಲಿ ವಿಶ್ವಾಸಾರ್ಹ ಮತ ನಿರ್ಣಯ ಸಂದರ್ಭದಲ್ಲಿ ಮಾತನಾಡಿದ ಅಟಲ್ ಬಿಹಾರಿ ವಾಜಪೇಯಿ ಅವರು ಸುಮಾರು ಒಂದೂವರೆ ಗಂಟೆಗಳ ಭಾಷಣ ಮಾಡಿದ್ದರು.
  • ಆಗಸ್ಟ್ 3, 2017 ರಂದು ರಾಜ್ಯಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನ, ಚೀನಾ ಮತ್ತು ಯುಎಸ್ಎಗಳೊಂದಿಗೆ ಭಾರತದ ಸಂಬಂಧಗಳ ಕುರಿತು ಸುಮಾರು  50 ನಿಮಿಷಕ್ಕೂ ಹೆಚ್ಚು ಕಾಲ ಭಾಷಣ ಮಾಡಿದ್ದರು. 
  • ಫೆಬ್ರವರಿ 5, 2018 ರಂದು ಬಜೆಟ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಮೊದಲ ಸಂಸತ್ತಿನ ಭಾಷಣದಲ್ಲಿ ಒಂದು ಗಂಟೆ ಅವಧಿಯನ್ನು ತೆಗೆದುಕೊಂದಿದ್ದರು.
  • ಬಿಜೆಪಿಯ ಅಧ್ಯಕ್ಷ ಅಮಿತ್ ಷಾ ಅವರು ಸಂಸದರಾಗಿ ಮಾಡಿದ ಮೊದಲ ಭಾಷಣವು 1 ಗಂಟೆ 20 ನಿಮಿಷಗಳ ಕಾಲ ನಡೆಯಿತು. 
  • ಲೋಕಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ 26, 2015ರ ಸಂವಿಧಾನದ ದಿನ ದಂದು ಮಾಡಿದ ಲೋಕಸಭೆಯ ಭಾಷಣದ ಅವಧಿ  40 ನಿಮಿಷಗಳು.
  • ಆಗಸ್ಟ್ 19, 2003 ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಸುಷ್ಮಾ ಸ್ವರಾಜ್ ಅವರ ಭಾಷಣವು ಸುಮಾರು 1 ಗಂಟೆ 45 ನಿಮಿಷಗಳಷ್ಟು ದೀರ್ಘವಾಗಿತ್ತು. ಅವರು ಆ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದ ಭಾಗವಾಗಿದ್ದರು.
  • ಫೆಬ್ರುವರಿ 2017 ಮತ್ತು ಫೆಬ್ರುವರಿ 2016 ರಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರ ಎರಡೂ ಭಾಷಣಗಳು ಒಂದು ಗಂಟೆಯ ಕಾಲ ನಡೆಯಿತು. ಈ ಎರಡೂ ಭಾಷಣಗಳು ಇಂದಿನ ಬಜೆಟ್ ಭಾಷಣದಂತೆ ಇದ್ದವು. 

Trending News