ಇಂದು ಬೆಳಿಗ್ಗೆ 11:30ಕ್ಕೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ಇಂದು ಬೆಳಿಗ್ಗೆ 09:30ಕ್ಕೆ ವಾರಣಾಸಿಯಲ್ಲಿ ಬೂಟ್ ಮಟ್ಟದ ಪ್ರಮುಖರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಬೆಳಿಗ್ಗೆ 11 ಗಂಟೆಗೆ ಕಾಲ ಭೈರವನಿಗೆ ಪುಷ್ಪಾರ್ಪಣೆ ಸಲ್ಲಿಸಲಿದ್ದಾರೆ.  

Last Updated : Apr 26, 2019, 07:14 AM IST
ಇಂದು ಬೆಳಿಗ್ಗೆ 11:30ಕ್ಕೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ title=

ವಾರಣಾಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ವಾರಣಾಸಿಯ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಇಂದು ಬೆಳಿಗ್ಗೆ 09:30ಕ್ಕೆ ವಾರಣಾಸಿಯಲ್ಲಿ ಬೂಟ್ ಮಟ್ಟದ ಪ್ರಮುಖರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಬೆಳಿಗ್ಗೆ 11 ಗಂಟೆಗೆ ಕಾಲ ಭೈರವನಿಗೆ ಪುಷ್ಪಾರ್ಪಣೆ ಸಲ್ಲಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ 11:30ಕ್ಕೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಜೆಡಿಯು ಅಧ್ಯಕ್ಷ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಶಿರೋಮಣಿ ಅಕಾಲಿ ದಳದ ಹಿರಿಯ ಮುಖಂಡ ಮತ್ತು ಮಾಜಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಎಲ್ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.  

ಇದಲ್ಲದೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅಸ್ಸಾಂ ಮುಖ್ಯಮಂತ್ರಿ ಸರ್ವಂಡ್ ಸೆನ್ವಾಲ್, ಗೃಹ ಸಚಿವ ರಾಜ್ನಾಥ್ ಸಿಂಗ್, ರಕ್ಷಣಾ ಸಚಿವೆ ಸೀತಾ ರಾಮನ್, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಿಯೂಶ್ ಗೋಯಲ್, ಹೇಮಾ ಮಾಲಿನಿ, ಜಯಪ್ರದಾ, ಮನೋಜ್ ತಿವಾರಿ, ರವಿ ಕಿಶನ್, ದಿನೇಶ್ ಲಾಲ್ ಯಾದವ್ ಕೂಡಾ ಅವರಿಗೆ ಸಾಥ್ ನೀಡಲಿದ್ದಾರೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮ:
ಬೆಳಿಗ್ಗೆ 09:30 ಕ್ಕೆ - ಪ್ರಧಾನಿ ಮೋದಿ ಹೋಟೆಲ್ ಡಿ ಪ್ಯಾರಿಸ್ ನಲಿ ಪಕ್ಷದ ಬೂತ್ ಮಟ್ಟದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಮಾವೇಶ ನಡೆಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ - ಪ್ರಧಾನಿ ಮೋದಿ ಭೈರವ ದೇವಸ್ಥಾನದಲ್ಲಿ ಕಾಶಿ ಕೋಟ್ವಾಲ್ ಉತ್ಸವವನ್ನು ಆಚರಿಸಲಿದ್ದಾರೆ.

ಬೆಳಿಗ್ಗೆ 11:15ಕ್ಕೆ - ಮೋದಿಯವರು ಭೈರವ ದೇವಾಲಯಾದಿಂದ ನಾಮಪತ್ರ ಸಲ್ಲಿಸುವ ಸ್ಥಳಕ್ಕೆ ತೆರಳುವರು.

ಬೆಳಿಗ್ಗೆ 11:30ಕ್ಕೆ - ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ನಾಮಪತ್ರ ಸಲ್ಲಿಕೆ

ಬೆಳಿಗ್ಗೆ 12:30ಕ್ಕೆ ಹೋಟೆಲ್ ತಾಜ್ನಲ್ಲಿ ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಭಾಗಿ

Trending News