ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲೂ ಛಾಪು ಮೂಡಿಸಿದೆ. ಜಾಗತಿಕ ನಾಯಕರ ಅನುಮೋದನಾ ರೇಟಿಂಗ್ನಲ್ಲಿ ಪ್ರಧಾನಿ ಮೋದಿಯವರು ಅಗ್ರಸ್ಥಾನದಲ್ಲೇ ಮುಂದುವರೆಯುತ್ತಿದ್ದಾರೆ. ಹೌದು, ಡಿಸೆಂಬರ್ 7ರಂದು ಅಮೆರಿಕ ಮೂಲದ ಸಲಹಾ ಸಂಸ್ಥೆ 'ಮಾರ್ನಿಂಗ್ ಕನ್ಸಲ್ಟ್' ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಪ್ರಧಾನಿ ಮೋದಿಯವರು ಶೇ.76ರ ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ.66ರ ಅನುಮೋದನೆಯ ರೇಟಿಂಗ್ನೊಂದಿಗೆ ೨ನೇ ಸ್ಥಾನದಲ್ಲಿದ್ದಾರೆ. ಸ್ವಿಸ್ ಒಕ್ಕೂಟದ ಅಧ್ಯಕ್ಷ ಅಲೈನ್ ಬರ್ಸೆಟ್ ಶೇ.58 ಅನುಮೋದನೆಯೊಂದಿಗೆ ೩ನೇ ಸ್ಥಾನವನ್ನು ಪಡೆದ್ದಾರೆ. ಬ್ರೆಜಿಲ್ನ ಲುಲಾ ಡ ಸಿಲ್ವಾ ಮತ್ತು ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ ಕ್ರಮವಾಗಿ ೪ ಮತ್ತು ೫ನೇ ಸ್ಥಾನಗಳಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶೇ. 37ರ ಅನುಮೋದನೆ ರೇಟಿಂಗ್ನೊಂದಿಗೆ ೮ನೇ ಸ್ಥಾನದಲ್ಲಿದ್ದರೆ , ಜೆಕ್ ಗಣರಾಜ್ಯದ ಪ್ರಧಾನ ಮಂತ್ರಿ ಪೆಟ್ರ್ ಫಿಯಾಲಾ ಶೇ.16ರಷ್ಟು ಕಡಿಮೆ ಅನುಮೋದನೆ ರೇಟಿಂಗ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರ ಅನುಮೋದನೆ ರೇಟಿಂಗ್ ಶೇ.25 ರಷ್ಟಿದೆ. ಅಸಮ್ಮತಿ ರೇಟಿಂಗ್(Disapproval Ratings)ಗಳಿಗೆ ಬರುವುದಾದರೆ ಪ್ರಧಾನಿ ಮೋದಿಯವರ ಸಂಖ್ಯೆಯು ಶೇ.18ರಷ್ಟಿದ್ದರೆ, ಮೆಕ್ಸಿಕೋದ ಒಬ್ರಡಾರ್ ಅವರದು ಶೇ.29ರಷ್ಟಿದೆ. ಮಾರ್ನಿಂಗ್ ಕನ್ಸಲ್ಟ್ನ ಇತ್ತೀಚಿನ ಅನುಮೋದನೆ ರೇಟಿಂಗ್ಗಳು 2023ರ ನವೆಂಬರ್ 29ರಿಂದ ಡಿಸೆಂಬರ್ 5ರವರೆಗೆ ಸಂಗ್ರಹಿಸಲಾದ ಡೇಟಾವನ್ನು ಆಧರಿಸಿವೆ.
ಇದನ್ನೂ ಓದಿ: NIA Riad: ಕರ್ನಾಟಕ & ಮಹರಾಷ್ಟ್ರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ NIA ದಾಳಿ, 13 ಶಂಕಿತ ಉಗ್ರರ ಬಂಧನ!
ಪ್ರಧಾನಿ ಶ್ರೀ @narendramodi ಅವರೇ ಜಗತ್ತಿನ ಅತ್ಯಂತ ಜನಪ್ರಿಯ ನಾಯಕ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲೂ ಛಾಪು ಮೂಡಿಸಿದೆ. ಜಾಗತಿಕ ನಾಯಕರ ಅನುಮೋದನಾ ರೇಟಿಂಗ್ನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅಗ್ರಸ್ಥಾನದಲ್ಲೇ ಮುಂದುವರೆಯುತ್ತಿದ್ದಾರೆ.#GlobalApprovalRating #NarendraModi pic.twitter.com/u23TyrUOsf
— BJP Karnataka (@BJP4Karnataka) December 9, 2023
ಪ್ರಧಾನಿ ಮೋದಿ ನಾಯಕತ್ವವನ್ನು ಶ್ಲಾಘಿಸಿದ ಬಿಜೆಪಿ ನಾಯಕರು
ಪ್ರಧಾನಿ ಮೋದಿಯವರ ನಾಯಕತ್ವವನ್ನು ಬಿಜೆಪಿಯ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮೋದಿಯವರು ಅಂತಾರಾಷ್ಟ್ರೀಯ ಅನುಮೋದನೆ ರೇಟಿಂಗ್ಗಳಲ್ಲಿ ಅಗ್ರಸ್ಥಾನದಲ್ಲಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರು ಹಲವಾರು ವಿಶ್ವ ನಾಯಕರಲ್ಲಿ ಅನುಮೋದನೆ ರೇಟಿಂಗ್ಗಳಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಅಂತಾರಾಷ್ಟ್ರೀಯ ಸಮೀಕ್ಷೆಯಿಂದಲೂ "ಮೋದಿ ಕಿ ಗ್ಯಾರಂಟಿ" ಮತ್ತು "ಮೋದಿ ಮ್ಯಾಜಿಕ್" ಅನ್ನು ಅನುಮೋದಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, 5 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಅಂತಾರಾಷ್ಟ್ರೀಯ ಸಮೀಕ್ಷೆಯೊಂದು ಕೂಡ ಮೋದಿಯವರ ಗ್ಯಾರಂಟಿ ಮತ್ತು ಮ್ಯಾಜಿಕ್ಗೆ ಹೆಚ್ಚಿನ ಪ್ರಾಶ್ಯಸ್ತ್ಯ ನೀಡಿದೆ. ಇದು ಅವರ ಆಡಳಿತ ಮಾದರಿಯ ವೈಖರಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ʼಅನುಮೋದನೆಯ ರೇಟಿಂಗ್ʼ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸುತ್ತದೆ" ಎಂದು ಪೂನಾವಾಲಾ ಹೇಳಿದ್ದಾರೆ. 2024ರಲ್ಲಿ ಭಾರತದಲ್ಲಿ ಲೋಕಸಭೆ ಚುನಾವಣೆ ಅಥವಾ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.
ಇದನ್ನೂ ಓದಿ: GK Questions Answers: ಜಗತ್ತಿನ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು..?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ