ಸೆ.9 ರಂದು ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷ ವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ

ಸೆಪ್ಟೆಂಬರ್ 9 ರಂದು ನಡೆಯಲಿರುವ 13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವಹಿಸಲಿದ್ದಾರೆ.

Written by - Puttaraj K Alur | Last Updated : Sep 6, 2021, 08:39 PM IST
  • ಸೆಪ್ಟೆಂಬರ್ 9 ರಂದು ನಡೆಯಲಿರುವ 5 ರಾಷ್ಟ್ರಗಳ 13ನೇ ಬ್ರಿಕ್ಸ್ ಶೃಂಗಸಭೆ
  • ವರ್ಚುವಲ್ ಆಗಿ ನಡೆಯಲಿರುವ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿರುವ ಪ್ರಧಾನಿ ಮೋದಿ
  • ಶೃಂಗಸಭೆಯಲ್ಲಿ ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿಗತಿ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ
ಸೆ.9 ರಂದು ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷ ವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ title=
ಸೆಪ್ಟೆಂಬರ್ 9 ರಂದು ನಡೆಯಲಿರುವ 13ನೇ ಬ್ರಿಕ್ಸ್ ಶೃಂಗಸಭೆ (Photo Courtesy: Twitter/@Zee News)

ನವದೆಹಲಿ: ಸೆಪ್ಟೆಂಬರ್ 9 ರಂದು ನಡೆಯಲಿರುವ 13ನೇ ಬ್ರಿಕ್ಸ್ ಶೃಂಗಸಭೆ(BRICS Summit 2021)ಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ವಹಿಸಲಿದ್ದಾರೆ. 5 ರಾಷ್ಟ್ರಗಳ ಈ ಶೃಂಗಸಭೆಯು ವರ್ಚುವಲ್ ಆಗಿ ನಡೆಯಲಿದ್ದು, ತಾಲಿಬಾನ್ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದ ಪರಿಸ್ಥಿತಿಯ ಮೇಲೆ ವ್ಯಾಪಕ ಗಮನಹರಿಸುವ ನಿರೀಕ್ಷೆಯಿದೆ. ಈ ಬಾರಿಯ ಬ್ರಿಕ್ಸ್ ಶೃಂಗಸಭೆಯ ವಿಷಯವು ‘ಬ್ರಿಕ್ಸ್ @ 15: ನಿರಂತರತೆ, ಬಲವರ್ಧನೆ ಮತ್ತು ಒಮ್ಮತವಾಗಿ  ಬ್ರಿಕ್ಸ್ ನೊಳಗೆ ಸಹಕಾರ’ ಆಗಿದೆ.

ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin), ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್(Xi Jinping), ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ(Cyril Ramaphosa) ಮತ್ತು ಬ್ರೆಜಿಲ್‌ನ ಜೈರ್ ಬೋಲ್ಸೊನಾರೊ(Jair Bolsonaro) ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ವಿಶ್ವದ 5 ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ. ಇದು ಜಾಗತಿಕ ಜನಸಂಖ್ಯೆಯ ಶೇ.41ರಷ್ಟು, ಜಾಗತಿಕ ಜಿಡಿಪಿಯ ಶೇ.24ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇ.16ರಷ್ಟು ಪ್ರತಿನಿಧಿಸುತ್ತದೆ.

ಇದನ್ನೂ ಓದಿ: PM Kisan ಯೋಜನೆ ಅಡಿ ಈಗ ರೈತರಿಗೆ ಸಿಗಲಿದೆ 6000 ಬದಲಿಗೆ,12000 ರೂ.! 

‘2021ರಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆ(BRICS Summit)ಯ ಅಧ್ಯಕ್ಷತೆಯ ಭಾಗವಾಗಿ ಪ್ರಧಾನಿ ಮೋದಿ ಅವರು ಸೆ.9ರಂದು 13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ವರ್ಚುವಲ್ ರೂಪದಲ್ಲಿ ನಡೆಸಲಿದ್ದಾರೆ’ ಎಂದು MEA ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿಕೊಳ್ಳುತ್ತಿರುವುದು ಇದು 2ನೇ ಬಾರಿ. ಈ ಹಿಂದೆ ಅವರು 2016ರಲ್ಲಿ ಗೋವಾ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ವರ್ಷ ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತವು ಬ್ರಿಕ್ಸ್‌ ನ 15ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ. ಭಾರತವು ತನ್ನ ಅಧ್ಯಕ್ಷತೆಯಲ್ಲಿ 4 ಆದ್ಯತೆಯ ಕ್ಷೇತ್ರಗಳಿಗೆ ಒತ್ತು ನೀಡುತ್ತಿದೆ. ಈ ಪೈಕಿ ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ, ಭಯೋತ್ಪಾದನೆ ನಿಗ್ರಹ, ಡಿಜಿಟಲ್ ಮತ್ತು ತಾಂತ್ರಿಕ ಸಾಧನಗಳನ್ನು ಬಳಸಿ SDG ಗಳನ್ನು ಸಾಧಿಸಲು ಮತ್ತು ಜನರಿಂದ ಜನರಿಗೆ ವಿನಿಮಯ ಕಾರ್ಯವನ್ನು ಹೆಚ್ಚಿಸುವುದಾಗಿದೆ.

ಇದನ್ನೂ ಓದಿ: LPG Cylinder Booking ಮೇಲೆ ಬಂಪರ್ ಕೊಡುಗೆ! 2700 ರೂ.ಗಳ ಲಾಭದ ಜೊತೆಗೆ ಇನ್ನೂ ಹಲವು ಪ್ರಯೋಜನ

‘ಈ ವಿಷಯಗಳ ಜೊತೆಗೆ ನಾಯಕರು COVID-19 ಸಾಂಕ್ರಾಮಿಕದ ಪರಿಣಾಮ ಮತ್ತು ಇತರ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ’ ಎಂದು MEA ಹೇಳಿದೆ. ಇದಲ್ಲದೆ ಪ್ರತ್ಯೇಕವಾಗಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ಶೃಂಗಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ರಷ್ಯಾದ ರಾಯಭಾರಿ ನಿಕೋಲಾಯ್ ಕುಡಶೇವ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News