ಕರ್ನಾಟಕದ ಶಿಕ್ಷಕರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ರಾಜ್ಯದ ಶಿಕ್ಷಕರಾದ ಚಿಕ್ಕಬಳ್ಳಾಪುರದ ಶಿವಕುಮಾರ್, ಬೆಂಗಳೂರಿನ ಡಾ.ರಮೇಶಪ್ಪ, ಮಂಜು ಬಾಲಸುಬ್ರಹ್ಮಣ್ಯಂ ಮತ್ತು ಆರ್.ಎನ್.ಶೈಲಾ ಅವರು ಅತ್ಯುತ್ತಮ ಶಿಕ್ಷಕರು ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

Last Updated : Sep 5, 2018, 03:45 PM IST
ಕರ್ನಾಟಕದ ಶಿಕ್ಷಕರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ title=

ಬೆಂಗಳೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕದ ನಾಲ್ವರು ಶಿಕ್ಷಕರ ಸಾಧನೆಯನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. 

ಮಾಜಿ ರಾಷ್ಟ್ರಪತಿ ಹಾಗೂ ಶಿಕ್ಷಕರಾಗಿದ್ದ ದಿ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟಿದ ದಿನ ಸೆಪ್ಟೆಂಬರ್ 5ರಂದು ಹಲವು ಆದರ್ಶ ಶಿಕ್ಷಕರಿಗೆ ಕೇಂದ್ರ ಸರಕಾರ ಪ್ರತಿವರ್ಷ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅಂತಹವರಲ್ಲಿ ಕರ್ನಾಟಕದ ನಾಲ್ವರು ಶಿಕ್ಷಕರು ಈ ಬಾರಿ ಪ್ರಶಸ್ತಿ ಗಳಿಸಿದ್ದಾರೆ. 

ರಾಜ್ಯದ ಶಿಕ್ಷಕರಾದ ಚಿಕ್ಕಬಳ್ಳಾಪುರದ ಶಿವಕುಮಾರ್, ಬೆಂಗಳೂರಿನ ಡಾ.ರಮೇಶಪ್ಪ, ಮಂಜು ಬಾಲಸುಬ್ರಹ್ಮಣ್ಯಂ ಮತ್ತು ಆರ್.ಎನ್.ಶೈಲಾ ಅವರು ಅತ್ಯುತ್ತಮ ಶಿಕ್ಷಕರು ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. 

ಚಿಕ್ಕಬಳ್ಳಾಪುರದ ಶಿವಕುಮಾರ್ "ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಗಣಿತದ ಕ್ಲಿಷ್ಟ ಸಮಸ್ಯೆಯನ್ನೂ ಸುಲಭವಾಗಿ ಕಲಿಸುತ್ತಿರುವ ಶಿವಕುಮಾರ್ ಅವರಿಗೆ ನನ್ನ ನಮನಗಳು. ಅವರು ತರಗತಿಯಲ್ಲಿ ಪಾಠ ಮಾಡುತ್ತಿರುವ ಎಷ್ಟೋ ವಿಡಿಯೋಗಳು ಇಂಟರ್ನೆಂಟ್ ನಲ್ಲೂ ಲಭ್ಯವಿವೆ. ಕರ್ನಾಟಕದ ಚಿಕ್ಕಬ್ಳಾಳಾಪುರದ ಶಿವಕುಮಾರ್ ಅವರಿಗೆ ಅಭಿನಂದನೆಗಳು" ಎಂದು ನರೇಂದ್ರ ಮೋದಿ ಹೊಗಳಿದ್ದಾರೆ.

"ವಿದ್ಯಾರ್ಥಿಗಳು ದೃಢವಾಗಿದ್ದರೆ, ಇಡೀ ದೇಶವೇ ದೃಢವಾಗಿರುತ್ತವೆ. ಬೆಂಗಳೂರು ಗ್ರಾಮಾಂತರ ಭಾಗದ ದೈಹಿಕ ಶಿಕ್ಷಕರಾದ ಡಾ.ರಮೇಶಪ್ಪ ಅವರು ಯೋಗ ಮತ್ತು ಕ್ರೀಡೆಗೆ ಹೆಚ್ಚು ಹೆಸರಾಗಿದ್ದಾರೆ. ವಿಕಲಾಂಗ ವಿದ್ಯಾರ್ಥಿಗಳ ಏಳಿಗೆಗೆ ಮತ್ತು ಲಿಂಗ ಸಮಾನತೆಗಾಗಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ" ಎಂದು ಪ್ರಧಾನಿ ಮೋದಿ ಹೊಗಳಿದ್ದಾರೆ. 

ಕನ್ನಡತಿ ಮಂಜು ಬಾಲಸುಬ್ರಹ್ಮಣ್ಯಂ "ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆಯ ಮಂಜು ಬಾಲಸುಬ್ರಹ್ಮಣ್ಯಂ ಅವರು ಶಾಲೆಯಲ್ಲಿ ವಿವಿಧತೆಯನ್ನು ಮೂಡಿಸಲು ಶ್ರಮಿಸಿದವರು. ಅಂತೆಯೇ ದಿವ್ಯಾಂಗ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿಯೂ ಶ್ರಮಿಸುತ್ತಿದ್ದಾರೆ. ಇಂದು ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆಯುತ್ತಿರುವ ಅವರಿಗೆ ಅಭಿನಂದನೆಗಳು" ಎಂದು ಮೋದಿ ಶ್ಲಾಘಿಸಿದ್ದಾರೆ.

ಅಷ್ಟೇ ಅಲ್ಲದೆ, "ಬೆಂಗಳೂರು ಉತ್ತರ ಭಾಗದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆರ್.ಎನ್.ಶೈಲ ಅವರು, ಶಾಲೆಯ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಹಲವು ಕಾರ್ಯಗಳು ವಿದ್ಯಾರ್ಥಿಗಳಲ್ಲಿ, ಅದರಲ್ಲೂ ಬಡ ಕುಟುಂಬದಿಂದ ಬಂದ ವಿದ್ಯಾರ್ಥಿಗಳಲ್ಲಿ ಆಶಾ ಭಾವನೆ ಮೂಡಿಸೈಡ್. ಇಂಥ ಶಿಕ್ಷಕಿ ಇರುವುದು ನಮ್ಮೆಲ್ಲರ ಹೆಮ್ಮೆ" ಎಂದು ನರೇಂದ್ರ ಮೋದಿ ಹೇಳಿದ್ದಾರೆ. 

Trending News