ನರೇಂದ್ರ ಮೋದಿ ಪತ್ನಿ ಜಶೋದಬೇನ್ ಕಾರು ಅಪಘಾತ; ಗಾಯ

ಕಾರು ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 

Last Updated : Feb 7, 2018, 01:42 PM IST
ನರೇಂದ್ರ ಮೋದಿ ಪತ್ನಿ ಜಶೋದಬೇನ್ ಕಾರು ಅಪಘಾತ; ಗಾಯ title=

ರಾಜಸ್ಥಾನದ ಚಿತ್ತೋರ್ಘಡದ ಬಳಿ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ನಡೆದ ಕಾರು ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೋದಿ ಪತ್ನಿ ಜಶೋದಾಬೆನ್‌ ಅವರು ಕೋಟ ಸಮೀಪದ ಬಾರಾನ್‌ ಜಿಲ್ಲೆಯಲ್ಲಿನ ತಮ್ಮ ಬಂಧುಗಳನ್ನು ಭೇಟಿಯಾಗಿ ಗುಜರಾತ್‌ಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತಕ್ಕೆ ಕಾರಣವೇನು ಎಂಬುದು ತಿಳಿದಿಲ್ಲ.

2014 ರ ಲೋಕಸಭೆ ಚುನಾವಣೆಯಲ್ಲಿ ವಡೋದರಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಜಶೋದಾಬನ್ ಅವರನ್ನು ಪತ್ನಿ ಎಂದು ಒಪ್ಪಿಕೊಂಡಿದ್ದರು.

ಪ್ರಧಾನಮಂತ್ರಿ ಅವರ ಕುಟುಂಬಕ್ಕೆ ನೀಡಲಾಗುವ ಎಸ್ಪಿಜಿ ಭದ್ರತೆಯನ್ನೂ ಕೂಡಾ ಜಶೋದಾಬೆನ್‌ ಅವರಿಗೆ ನೀಡಲಾಗಿದೆ. 1968 ರಲ್ಲಿ ಅಪ್ರಾಪ್ತರಾಗಿದ್ದಾಗ ಮೋದಿ ಅವರನ್ನು ಮದುವೆಯಾಗಿದ್ದರು. 

ನಿವೃತ್ತ ಶಿಕ್ಷಕಿ ಆಗಿರುವ ಜಶೋದಾಬೆನ್‌ ಅವರು, ಉತ್ತರ ಗುಜರಾತಿನ ಮೆಹನ್ಸಾ ಜಿಲ್ಲೆಯ ಈಶ್ವರ್ವಾಡಾ ಗ್ರಾಮದಲ್ಲಿ ತನ್ನ ಇಬ್ಬರು ಸಹೋದರರೊಂದಿಗೆ ಜೀವನ ನಡೆಸುತ್ತಿದ್ದಾರೆ.

Trending News