ನವದೆಹಲಿ: ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತೊಡೆದುಹಾಕುವ ಆಂದೋಲನಕ್ಕೆ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಬುಧವಾರದಂದು ಧನ್ಯವಾದ ಅರ್ಪಿಸಿದ್ದಾರೆ.
ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಮೋದಿಯವರ ಕ್ರಮವನ್ನು ಅಮೀರ್ ಖಾನ್ ಬೆಂಬಲಿಸಿದ ನಂತರ ಪ್ರಧಾನಿ ಟ್ವೀಟ್ ಬಂದಿದೆ. ಅಮೀರ್ ಅವರ ಉತ್ತೇಜಕ ಮಾತುಗಳು ಚಳುವಳಿಯನ್ನು ಬಲಪಡಿಸಲು ಇತರರಿಗೆ ಪ್ರೇರಣೆ ನೀಡುತ್ತವೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.
Thank you @aamir_khan for the valuable support to the movement to eliminate usage of single use plastic.
Your encouraging words will inspire others to strengthen the movement as well. https://t.co/AwKi1SzXde
— Narendra Modi (@narendramodi) August 28, 2019
"ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತೊಡೆದುಹಾಕುವ ಆಂದೋಲನಕ್ಕೆ ಅಮೂಲ್ಯವಾದ ಬೆಂಬಲ ನೀಡಿದ್ದಕ್ಕಾಗಿ ಅಮೀರ್ ಖಾನ್ ಧನ್ಯವಾದಗಳು.ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ಚಳುವಳಿಯನ್ನು ಬಲಪಡಿಸಲು ಇತರರಿಗೆ ಪ್ರೇರಣೆ ನೀಡುತ್ತದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ರಿಂದ ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ನೂತನ ಸಾಮೂಹಿಕ ಆಂದೋಲನವನ್ನು ಪ್ರಾರಂಭಿಸಲು ಪ್ರಧಾನ ಮಂತ್ರಿ ಮೋದಿ ರಾಷ್ಟ್ರದ ಮನ್ ಕಿ ಬಾತ್ ಅವರ ಮಾಸಿಕ ರೇಡಿಯೋ ಭಾಷಣದಲ್ಲಿ ಉಲ್ಲೇಖಿಸಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರು ಈ ಕ್ರಮದ ಕುರಿತು ಮಾತನಾಡುತ್ತಾ, ಜನರನ್ನು ಈ ಚಳವಳಿಗೆ ಬೆಂಬಲ ನೀಡುವಂತೆ ಕೋರಿದ್ದರು.
ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಅಮೀರ್ ಖಾನ್ ಸೋಮವಾರದಂದು ಟ್ವೀಟ್ ಮಾಡಿ ಏಕ-ಬಳಕೆಯ ಪ್ಲಾಸ್ಟಿಕ್ ನ್ನು ನಿಗ್ರಹಿಸಲು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದು ಹೇಳಿದ್ದರು. ಪಾನಿ ಫೌಂಡೇಶನ್ನ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಅಮೀರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ಮಹಾರಾಷ್ಟ್ರದಲ್ಲಿ ಬರ ತಡೆಗಟ್ಟುವಿಕೆ ಮತ್ತು ಜಲಾನಯನ ನಿರ್ವಹಣೆ ಕುರಿತು ಕೆಲಸ ಮಾಡುತ್ತಿದ್ದಾರೆ.